ಕಾಸರಗೋಡು: ರಂಗ ಚಿನ್ನಾರಿ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ (ರಿ) ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆಸುವ ಕನ್ನಡ ಹಬ್ಬವು ದಿನಾಂಕ 29-06-2023 ರಂದು ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ರಂಗ ಚಿನ್ನಾರಿ ನಿರ್ದೇಶಕರಲ್ಲಿ ಓರ್ವರಾದ ಸತೀಶ್ಚಂದ್ರ ಭಂಡಾರಿ ಕೋಳಾರಿ ಉಪಸ್ಥಿತರಿದ್ದು ಸಂಸ್ಥೆಯ ಆರಂಭ ಮತ್ತು ಮುಂದೆ ನಡೆಸುವ ಅನೇಕ ಕನ್ನಡಪರ ಕಾರ್ಯಕ್ರಮಗಳ ಬೆಳಕು ಚೆಲ್ಲಿ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು.
ಕೊಂಡೆಯೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಗಳು ಆಶೀರ್ವಚನ ನೀಡುತ್ತಾ ಕಾಸರಗೋಡಿನಲ್ಲಿ ಅವನತಿಯ ಅಂಚಿಗೆ ತಲುಪುವಂತಾದ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುವ ರಂಗ ಚಿನ್ನಾರಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಸಂಸ್ಥೆಯ ಹತ್ತು ಹಲವು ಕಾರ್ಯಗಳಲ್ಲಿ ನಾವು ಕೈ ಜೋಡಿಸಿ ಮುಂದಿನ ಪೀಳಿಗೆಗೆ ಕನ್ನಡದ ಕಂಪನ್ನು ಪಸರಿಸುವ ಕಾಯಕದಲ್ಲಿ ಜೊತೆಯಾಗೋಣ ಎಂದು ನುಡಿದರು.
ಮಠದ ಭಕ್ತರಾಗಿರುವ ಮೋಹನ್ ದಾಸರು ಅತಿಥಿಯಾಗಿ ಭಾಗವಹಿಸಿದ್ದು ಗಾಯತ್ರಿ ಮತ್ತು ಶ್ರಾವಣ್ಯ ಪ್ರಾರ್ಥನೆ ಹಾಡಿದರು.
ಕಾರ್ಯಕ್ರಮದ ನಿರೂಪಣೆ ಮತ್ತು ಧನ್ಯವಾದವನ್ನು ಮಠದ ವ್ಯವಸ್ಥಾಪಕರಲ್ಲಿ ಒಬ್ಬರಾದ ಸದಾಶಿವ ಭಟ್ ನೆರವೇರಿಸಿದರು. ಬಳಿಕ ವಿದುಷಿ ಶ್ರೀಮತಿ ಉಷಾ ಈಶ್ವರ್ ಭಟ್ ಅವರಿಂದ ಶಾಸ್ತ್ರೀಯ ಸಂಗೀತ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘ ಕಂಬಾರು ಇವರಿಂದ ಭಜನೆ, ಕುಣಿತ ಭಜನೆಯು ಅತ್ಯಂತ ಯಶಸ್ವಿಯಾಗಿ ನೆರವೇರಿತು.. ಕಾರ್ಯಕ್ರಮದ ಕೊನೆಯಲ್ಲಿ ಜಯಪ್ರಕಾಶ್ ತೊಟ್ಟೆತ್ತೋಡಿ ಮತ್ತು ರಂಗ ಚಿನ್ನಾರಿ ಸಂಸ್ಥೆಯ ನಿರ್ದೇಶಕರೂ, ಸಂಯೋಜಕರೂ ಆಗಿರುವ ನಟ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರು ಸ್ಮರಣಿಕೆ ನೀಡಿದರು.ಮತ್ತು ಕುಣಿತ ಭಜನೆಯ ಎಲ್ಲಾ ಭಜಕರಿಗೆ ಪೂಜ್ಯ ಶ್ರೀಗಳು ಶಾಲು ನೀಡಿ ಗೌರವಿಸಿದರು.