Subscribe to Updates

    Get the latest creative news from FooBar about art, design and business.

    What's Hot

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025

    ‘ದಾಸವಾಣಿ’ ಹವಲ್ದಾರ್ ತಂಡದವರಿಂದ ದಾಸರ ಕೃತಿಗಳ ಅಮೋಘ ಗಾಯನ ಕಾರ್ಯಕ್ರಮ | ಜೂನ್ 01

    May 31, 2025

    ನಟನ ರಂಗಶಾಲೆಯಲ್ಲಿ ಮಕ್ಕಳ ‘ಅಭಿನಯ ಮತ್ತು ರಂಗ ತರಬೇತಿ’ | ಜೂನ್ 08

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿನಮ್ರ ಇಡ್ಕಿದು ‘ಮೋಕೆ ಜೋಕೆ’ ತುಳು ಭಾವಗೀತೆ ಬಿಡುಗಡೆ
    Music

    ವಿನಮ್ರ ಇಡ್ಕಿದು ‘ಮೋಕೆ ಜೋಕೆ’ ತುಳು ಭಾವಗೀತೆ ಬಿಡುಗಡೆ

    July 6, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುರತ್ಕಲ್ : ವಿನಮ್ರ ಇಡ್ಕಿದು ಹಾಡಿದ ‘ಮೋಕೆ ಜೋಕೆ’ ಎಂಬ ತುಳು ಭಾವಗೀತೆಯ ಆಡಿಯೋ ವಿಡಿಯೋ ನಗರದ ವುಡ್ ಲ್ಯಾಂಡ್ ಹೋಟೆಲಿನಲ್ಲಿ ದಿನಾಂಕ : 29-06-2023 ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.

    ಯಕ್ಷಗಾನ ಅರ್ಥಧಾರಿಗಳು ಹಾಗೂ ಪ್ರವಚನಕಾರರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯರಾದ ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ ಹಾಡನ್ನು ಬಿಡುಗಡೆಗೊಳಿಸಿದರು. ಅವರು ಮಾತನಾಡುತ್ತಾ, “ಹಸಿ ಗೋಡೆಗೆ ಕಲ್ಲು ಹೊಡೆದರೆ ಹೇಗೆ ಗಟ್ಟಿಯಾಗಿ ನಿಲ್ಲುತ್ತದೋ ಹಾಗೆಯೇ ಎಳೆಯ ಪ್ರಾಯದಲ್ಲಿಯೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟರೆ ಅವರು ಚೆನ್ನಾಗಿ ಬೆಳೆಯುತ್ತಾರೆ. ಕಲಿಕೆಯ ಜೊತೆ ಜೊತೆಗೆ ಮಕ್ಕಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ಅವರ ವ್ಯಕ್ತಿತ್ವ ಚೆನ್ನಾಗಿ ರೂಪುಗೊಳ್ಳುತ್ತದೆ. ಬಾಲ ಪ್ರತಿಭೆ ವಿನಮ್ರ ಇಡ್ಕಿದು ಮುಂದೆ ಉತ್ತಮ ಗಾಯಕನಾಗಬಲ್ಲ ಎಂಬುದನ್ನು ಅವನ ಧ್ವನಿ ಮತ್ತು ಹಾಡು ತಿಳಿಸುತ್ತದೆ” ಎಂದು ನುಡಿದರು.

    ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿ ಪಾಲ್ಗೊಂಡಿದ್ದರು. ಅವರು ಮಾತನಾಡುತ್ತಾ, “ತುಳುವಿಗೆ ಹೊಸ ಹೊಸ ಗಾಯಕರು ಮತ್ತು ಹೊಸ ಹೊಸ ಭಾವಗೀತೆಗಳು ಬರಬೇಕಾದ ಅಗತ್ಯ ಇಂದಿನ ದಿನಗಳಲ್ಲಿ ಬಹು ಮುಖ್ಯವಾಗಿದೆ. ಬಾಲ ಪ್ರತಿಭೆ ವಿನಮ್ರ ಇಡ್ಕಿದು ಹಾಡಿದ ತುಳು ಹಾಡು ಎಲ್ಲರನ್ನ ಹೃನ್ಮನ ಸೆಳೆಯಲಿ, ಮುಂದಕ್ಕೆ ಒಳ್ಳೆಯ ಗಾಯಕನಾಗಲಿ” ಎಂದು ಶುಭ ಹಾರೈಸಿದರು.

    ಇತ್ತೀಚೆಗೆ ಬಿಡುಗಡೆಯಾದ ತಮ್ಮ ‘ಏಕಾಂತದಿಂದ ಲೋಕಾಂತರಕೆ’ ಕೃತಿಯನ್ನು ಅತಿಥಿಗಳಿಗೆ ನೀಡಿ ಭಾಸ್ಕರ್ ರೈ ಕುಕ್ಕುವಳ್ಳಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ವಿನಮ್ರ ಇಡ್ಕಿದು ಮತ್ತು ಚಿತ್ರೀಕರಣ, ನಿರ್ದೇಶನ, ಸಂಕಲನಗಳನ್ನು ಮಾಡಿದ ವಿದ್ಯಾ ಯು. ಉಪಸ್ಥಿತರಿದ್ದರು. ರಘು ಇಡ್ಕಿದು ಕಾರ್ಯಕ್ರಮ ನಿರ್ವಹಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಕದ್ರಿ ಮಲ್ಲಿಕಟ್ಟೆಯಲ್ಲಿ ಹರಿಕಥಾ ಪರಿಷತ್ ಸದಸ್ಯ ಸಮಾವೇಶ – ಸಂವಾದ
    Next Article ಪರಿಚಯ ಲೇಖನ | ‘ಯಕ್ಷ ಚತುರೆ’ ಮಯೂರಿ ಉಪಾಧ್ಯಾಯ
    roovari

    Add Comment Cancel Reply


    Related Posts

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025

    ‘ದಾಸವಾಣಿ’ ಹವಲ್ದಾರ್ ತಂಡದವರಿಂದ ದಾಸರ ಕೃತಿಗಳ ಅಮೋಘ ಗಾಯನ ಕಾರ್ಯಕ್ರಮ | ಜೂನ್ 01

    May 31, 2025

    ಬೆಂಗಳೂರಿನಲ್ಲಿ ಪುರಸ್ಕಾರ ಪ್ರದಾನ ಸಮಾರಂಭ ಮತ್ತು ಭಾರತೀಯ ನಾದ ಸೌರಭ ಸಂಗೀತೋತ್ಸವ | ಜೂನ್ 01

    May 31, 2025

    ಪಟ್ಲ ಸಂಭ್ರಮದಲ್ಲಿ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.