Subscribe to Updates

    Get the latest creative news from FooBar about art, design and business.

    What's Hot

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

    May 28, 2025

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾರಥ್ಯದಲ್ಲಿ ‘ಭಾಗವತಿಕೆ ಅಧ್ಯಯನ ಶಿಬಿರ’
    Literature

    ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾರಥ್ಯದಲ್ಲಿ ‘ಭಾಗವತಿಕೆ ಅಧ್ಯಯನ ಶಿಬಿರ’

    July 6, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ದಿನಾಂಕ : 25-06-2023ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಸಿರಿಬಾಗಿಲಿನಲ್ಲಿ ಯಕ್ಷಗಾನ ಭಾಗವತಿಕೆಯ ಅಭ್ಯಾಸಿಗಳಿಗಾಗಿ ಒಂದು ದಿನದ ವಿಶೇಷ ಅಧ್ಯಯನ ಶಿಬಿರವನ್ನು ಹಮ್ಮಿಕೊಂಡಿತ್ತು. ಈ ಅಧ್ಯಯನ ಶಿಬಿರವನ್ನು ತೆಂಕುತಿಟ್ಟು ಹಿಮ್ಮೇಳದ ಗುರು, ಖ್ಯಾತ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ಸಿರಿಬಾಗಿಲು ಪ್ರತಿಷ್ಠಾನವು ಯಕ್ಷಗಾನ ಕ್ಷೇತ್ರದಲ್ಲಿ ಶ್ಲಾಘನೀಯ ಸೇವೆ ಸಲ್ಲಿಸುತ್ತಿದೆ. ಪ್ರತಿಷ್ಠಾನದ ಧ್ಯೇಯೋದ್ದೇಶಗಳು ಕಲೆಯ ವಿಸ್ತರಣೆ ಹಾಗೂ ಪೋಷಣೆಯ ದೃಷ್ಟಿಯಿಂದ ತುಂಬಾ ಪೂರಕವಾಗಿವೆ. ಇಂತಹ ಕಾರ್ಯದಲ್ಲಿ ಪ್ರತಿಷ್ಠಾನವು ಐತಿಹಾಸಿಕ ಸಾಧನೆಗೈಯುತ್ತಿದೆ” ಎಂದು ಹೇಳಿದರು.

    ಈ ಶಿಬಿರದ ಆಶಯ ಮತ್ತು ಉದ್ದೇಶಗಳ ಕುರಿತು ಅರ್ಥಧಾರಿ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ವಿವರಿಸಿದರು. ಶಿಬಿರಾರ್ಥಿಗಳಿಗಾಗಿ ಕಂಠಸ್ವರವನ್ನು ಸಶಕ್ತಗೊಳಿಸುವ ಹಾಗೂ ವೃದ್ಧಿಸಿಕೊಳ್ಳುವ ವಿಧಾನದ ಬಗ್ಗೆ ಖ್ಯಾತ ಯೋಗ ಶಿಕ್ಷಕ ಪುಂಡರಿಕಾಕ್ಷ ಕಂಠಸ್ವರದ ರಕ್ಷಣೆಗಾಗಿ ಯೋಗ, ಪ್ರಾಣಾಯಾಮಗಳ ಅಭ್ಯಾಸವನ್ನು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.

    ಬಳಿಕ ಚೌಕಿ ಹಾಗೂ ರಂಗದಲ್ಲಿ ಭಾಗವತನ ಕರ್ತವ್ಯಗಳ ಕುರಿತು ಖ್ಯಾತ ಕಲಾವಿದ ಸುಬ್ರಾಯ ಹೊಳ್ಳ ಮತ್ತು ರಂಗಸ್ಥಳದಲ್ಲಿ ಮಾತು-ಗೀತ-ಮೌನ ಎಂಬ ವಿಶಿಷ್ಟ ವಿಷಯದ ಕುರಿತು ಕಲಾವಿದ ಹಾಗೂ ಪ್ರಾಧ್ಯಾಪಕ ಪೃಥ್ವಿರಾಜ್ ಕವತ್ತಾರ್‌ ಕಾರ್ಯಕ್ರಮ ನಡೆಸಿಕೊಟ್ಟರು.

    ಭಾಗವತ ಪುತ್ತೂರು ರಮೇಶ್‌ ಭಟ್ ಭಾಗವತಿಕೆ ದೃಷ್ಟಿಯಿಂದ ಪೂರ್ವರಂಗದ ಮಾಹಿತಿಯನ್ನು ತಿಳಿಸಿ, ಪೂರ್ವರಂಗದ ಪದ್ಯಗಳ ಸಕ್ರಮ ಅಭ್ಯಾಸ ಅತ್ಯಗತ್ಯ ಎಂದರು. ಮಡಿಕೇರಿ ಆಕಾಶವಾಣಿಯ ಸುಬ್ರಾಯ ಸಂಪಾಜೆ, ಭಾಗವತಿಕೆ ಮಾಡುವಾಗ ಧ್ವನಿ ವರ್ಧಕದ ಬಳಕೆ ಹೇಗಿರಬೇಕು ಎಂಬುದನ್ನು ಪ್ರಾತ್ಯಕ್ಷಿಕೆಗಳ ಜೊತೆ ತೋರಿಸಿಕೊಟ್ಟರು. ಹವ್ಯಾಸಿ ಭಾಗವತ ರಾಜಾರಾಮ ಹೊಳ್ಳ ಕೈರಂಗಳ ಸೂಕ್ತ ಸಲಹೆಗಳನ್ನಿತ್ತರು.

    ಕಾಲಮಿತಿ ಪ್ರಸಂಗದ ಗತಿಯನ್ನು ನಿರ್ಣಯಿಸುವುದು ಹೇಗೆ ಎಂದು ಪ್ರಾಧ್ಯಾಪಕ ಸುಣ್ಣಂಗುಳಿ ಶ್ರೀಕೃಷ್ಣ ಭಟ್‌ ವಿವರಿಸಿದರು. ಛಂದಸ್ಸು, ಸಾಹಿತ್ಯಕ್ಕೆ ಲೋಪವಾಗದೆ ಯಕ್ಷಗಾನ ಹಾಡುಗಾರಿಕೆ ಮಾಡುವುದು ಹೇಗೆ ಎಂದು ಕಟೀಲು ಮೇಳದ ಭಾಗವತ ಅಂಡಾಲ ದೇವಿಪ್ರಸಾದ್ ಶೆಟ್ಟಿ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿದರು. ಭಾಗವತ ದಿನೇಶ್‌ ಭಟ್‌ ಯಲ್ಲಾಪುರ ಸಹಕರಿಸಿದರು.

    ಎಲ್ಲಾ ಪ್ರಾತ್ಯಕ್ಷಿಕೆಗಳಿಗೂ ಹಿಮ್ಮೇಳವಾದಕರಾಗಿ ಮುರಾರಿ ಕಡಂಬಳಿತ್ತಾಯ, ನೆಕ್ಕರೆಮೂಲೆ ಗಣೇಶ ಭಟ್ ಮತ್ತು ಮುರಾರಿ ಪಂಜಿಗದ್ದೆ ಸಹಕರಿಸಿದರು. ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಕಲಾವಿದ ಶಂಭಯ್ಯ ಕಂಜರ್ಪಣೆ, ಲಕ್ಷಣ ಕುಮಾರ್‌ ಮರಕಡ, ಹರೀಶ್‌ ಬಳಂತಿಮೊಗರು, ವೈಕುಂಠ ಹೇರ್ಳೆ ಸಾಸ್ತಾನ ಮುಂತಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಬಿರದ ಕೊನೆಯಲ್ಲಿ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.

    ಅನೇಕ ಯಕ್ಷಗಾನದ ಪ್ರಸಿದ್ದರು, ವಿದ್ವಾಂಸರು ಪಾಲ್ಗೊಂಡು ಮಾರ್ಗದರ್ಶನವಿತ್ತರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ಪುಸ್ತಕ ಮತ್ತು ಹಾರವನ್ನು ನೀಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ ಸ್ವಾಗತಿಸಿ, ವಂದಿಸಿದರು. ಶ್ರುತಕೀರ್ತಿ ರಾಜ ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಪರಿಚಯ ಲೇಖನ | ‘ಯಕ್ಷ ಚತುರೆ’ ಮಯೂರಿ ಉಪಾಧ್ಯಾಯ
    Next Article ‘ಸತ್ಯಮಾಲೋಕಂದ ಸಿರಿ’ ಕೃತಿ ಬಿಡುಗಡೆ
    roovari

    Add Comment Cancel Reply


    Related Posts

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

    May 28, 2025

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025

    ಕಾವೇರಿ ಕಾಲೇಜಿನಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆ ಹಾಗೂ ದತ್ತಿನಿಧಿ ಕಾರ್ಯಕ್ರಮ | ಮೇ 31

    May 28, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.