ಉಡುಪಿ: ಯಕ್ಷಗಾನ ಕಲಾರಂಗ (ರಿ) ಆಯೋಜಿಸಿದ ‘ಯವಕ್ರೀತೋಪಾಖ್ಯಾನ’ ಬಡಗುತಿಟ್ಟು ಯಕ್ಷಗಾನ ಪ್ರದರ್ಶನವು 2 ಜುಲೈ, 2023ರ ಭಾನುವಾರ ಉಡುಪಿಯ ಪೂರ್ಣಪ್ರಜ್ಞ ಸಭಾಭವನದಲ್ಲಿ ನೆರವೇರಿತು.
ಈ ಯಕ್ಷಗಾನದ ಪದ್ಯ ರಚನೆ ಐ. ಡಿ. ಗಣಪತಿ ಅವರು ಮಾಡಿದ್ದು ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು ಮತ್ತು ಪ್ರಸನ್ನ ಭಟ್ ಬಾಳ್ಕಲ್, ಮದ್ದಳೆಗಾರರಾಗಿ ಸುನೀಲ್ ಭಂಡಾರಿ ಕಡತೋಕ ಮತ್ತು ರಾಘವೇಂದ್ರ ಹೆಗಡೆ ಯಲ್ಲಾಪುರ, ಚೆಂಡೆಯಲ್ಲಿ ಪ್ರಜ್ವಲ್ ಮುಂಡಾಡಿ ಮತ್ತು ಸೃಜನ್ ಹಾಲಾಡಿ ಸಹಕರಿಸಿದರು.
ಮುಮ್ಮೇಳದಲ್ಲಿ ವಿಶ್ವರಥನಾಗಿ ಪ್ರಸನ್ನ ಶೆಟ್ಟಿಗಾರ್, ಹೇಮಾವತಿಯಾಗಿ ಗೋವಿಂದ ವಂಡಾರು, ಇಂದ್ರನಾಗಿ ಗಣಪತಿ ಗುಂಡಿಬೈಲ್ ವಿಶ್ವಾಮಿತ್ರನಾಗಿ ಥಂಡಿಮನೆ ಶ್ರೀಪಾದ ಭಟ್, ನಾರದನಾಗಿ ಅಶೋಕ ಭಟ್ ಸಿದ್ಧಾಪುರ, ವಸಿಷ್ಠನಾಗಿ ಸುಬ್ರಹ್ಮಣ್ಯ ಕೋಣಿ , ಬ್ರಹ್ಮನಾಗಿ ಚಂದ್ರಕುಮಾರ್ ನೀರ್ಜಡ್ಡು, ವಿಶಾಖೆಯಾಗಿ ಸುಧೀರ್ ಉಪ್ಪೂರು, ಚಿತ್ರಲೇಖೆಯಾಗಿ ಶ್ರೀಕಾಂತ ರಟ್ಟಾಡಿ, ರೈಭ್ಯನಾಗಿ ಕೃಷ್ಣಯಾಜಿ ಬಳ್ಕೂರು, ಯವಕ್ರೀತನಾಗಿ ವಿದ್ಯಾಧರ ಜಲವಳ್ಳಿ, ಭಾರದ್ವಾಜನಾಗಿ ಆನಂದ ಭಟ್ ಕೆಕ್ಕಾರು, ವಟು ಇಂದ್ರನಾಗಿ ಹಾಗೂ ಶೂದ್ರಕನಾಗಿ ಶ್ರೀಧರ ಭಟ್ ಕಾಸರಕೋಡು, ಪರಾವಸುವಾಗಿ ಈಶ್ವರ ನಾಯ್ಕ ಮಂಕಿ, ಅರಾವಸುವಾಗಿ ಡಾ. ಪ್ರದೀಪ್ ವಿ. ಸಾಮಗ, ಅಂಧಕರಾಜನಾಗಿ ಚಂದ್ರ ಕುಮಾರ್ ನೀರ್ಜಡ್ಡು, ಬ್ರಹ್ಮರಾಕ್ಷಸನಾಗಿ ಅಜಿತ್ ಕುಮಾರ್ ಅಂಬಲಪಾಡಿ, ಬೃಹದ್ಯುಮ್ನನಾಗಿ ಸುಬ್ರಹ್ಮಣ್ಯ ಕೋಣಿ, ಅಗ್ನಿಯಾಗಿ ಅಶೋಕ ಭಟ್ ಸಿದ್ದಾಪುರ ಜನರನ್ನು ರಂಜಿಸಿದರು.