ಹೊಸಕೋಟೆ : ಜನಪದರು ಸಾಂಸ್ಕೃತಿಕ ವೇದಿಕೆ (ರಿ) ಹೊಸಕೋಟೆ ಆಯೋಜಿಸುವ ಪ್ರತಿ ತಿಂಗಳ ಎರಡನೇ ಶನಿವಾರದ ನಾಟಕ ಸರಣಿ ‘ರಂಗಮಾಲೆ’ – 72 ರ ಅಂಗವಾಗಿ ಈ ಬಾರಿ ಜನಪದರು ಅಭಿನಯದ – ಸಿದ್ದೇಶ್ವರ ನನಸು ಮನೆ ರಚನೆ ಮತ್ತು ನಿರ್ದೇಶನದ ‘ಮಾತೆ ಮಹತ್ವ’ ನಾಟಕದ ಪ್ರದರ್ಶನವು ದಿನಾಂಕ 08-07-3023 ರಂದು ನೆರೆದ ಭಾರಿ ಪ್ರೇಕ್ಷಕರ ಭಾವಕೋಶವನ್ನು ಕಲುಕಿತು.
ವೇದಿಕೆ ಅಧ್ಯಕ್ಷ ಕೆ. ವಿ. ವೆಂಕಟರಮಣಪ್ಪ ಪಾಪಣ್ಣ ಕಾಟ0 ನಲ್ಲೂರು ಉದ್ಘಾಟನೆ ಮಾಡಿದರು. ಖ್ಯಾತ ಸಾಹಿತಿ, ಸಮಾಜ ಚಿಂತಕ ಡಾII ಬಾಲಗುರುಮೂರ್ತಿ ನಾಟಕ ವಿಮರ್ಶೆ ಮಾಡುತ್ತಾ “ಪ್ರಸ್ತುತ ಸಂದರ್ಭದಲ್ಲಿ ಮಹಿಳೆ ತ್ಯಾಗ ಮಯಿ ಆಕೆಯನ್ನು ಗೌರವಿಸಿ ಮತ್ತೆ ಶೋಷಣೆಗೆ ಒಳಪಡಿಸುವುದು ಶೋಚನೀಯ . ವಿಘಟಿತ ಸಮಾಜ ವ್ಯವಸ್ಥೆಯಲ್ಲಿ ಮೊಬೈಲ್ ಎಲ್ಲರ ಮಧ್ಯೆ ಜಗಳ ತಂದಿಡುತ್ತಿರುವುದು ವಿಪರ್ಯಾಸ. ಮೂರು ತಲೆಮಾರುಗಳ ಚಿತ್ರಣ ಸೊಗಸಾಗಿದೆ. ಕೇವಲ ರಂಗಭೂಮಿ ಅನುಭವದ ಮೂಲಕ ವೈಚಾರಿಕ ನಾಟಕ ಕಟ್ಟಿಕೊಡುವಲ್ಲಿ ಸಿದ್ದೇಶ್ವರ ನನಸು ಮನೆ ಯಶಸ್ವಿಯಾಗಿದ್ದಾರೆ” ಎಂದರು. ಇದೇ ಸಂದರ್ಭದಲ್ಲಿ ನಾಟಕಕಾರರನ್ನು ಸನ್ಮಾನಿಸಲಾಯಿತು. ವೇದಿಕೆ ಪಧಾಧಿಕಾರಿಗಳಾದ ಜಗದೀಶ್ ಕೆಂಗನಾಳ, ಎಂ ಸುರೇಶ್, ಶಿವಕುಮಾರ್, ರಾಮಕೃಷ್ಣ ಬೆಳ್ತೂರು, ಮುನಿರಾಜು ಹಾಜರಿದ್ದರು.