ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಥೆಗಾರ್ತಿ ಕೊಡಗಿನ ಗೌರಮ್ಮ ಅವರ ಹೆಸರಿನಲ್ಲಿ ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಕಥೆ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿದೆ. ಗೌರಮ್ಮ ದತ್ತಿ ಕಾರ್ಯಕ್ರಮವಾಗಿ ಈ ಸ್ಪರ್ಧೆ ನಡೆಯಲಿದೆ. ಸಣ್ಣ ಕತೆಗಳ ಗೌರಮ್ಮ ದತ್ತಿ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಬೆಳವಣಿಗೆ ಉಂಟಾಗಲು ಮತ್ತು ಆಸಕ್ತಿ ಮೂಡಲು ಇದು ಉತ್ತಮ ಕಾರ್ಯಕ್ರಮ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಮತ್ತು ಕನ್ನಡ ನಾಡು, ನುಡಿ, ಸಂಸ್ಕೃತಿಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ಜಿಲ್ಲೆಯ ಶಾಲೆ ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
• ಕೊಡಗು ಜಿಲ್ಲೆಯ ಪ್ರೌಡಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
• ಸ್ಥಳದಲ್ಲೇ ಕತೆ ರಚಿಸತಕ್ಕದ್ದು.
• ಎ4 ಅಳತೆಯ ಹಾಳೆಯಲ್ಲಿ 2 ಪುಟ ಮೀರದಂತೆ ಕತೆ ರಚಿಸತಕ್ಕದ್ದು.
• ಕತೆ ಬರೆಯಲು ಹಾಳೆಯನ್ನು ಸ್ಥಳದಲ್ಲಿ ನೀಡಲಾಗುವುದು.
• ಕತೆಯ ವಿಷಯದ ಆಯ್ಕೆಗೆ ನಾಲ್ಕು ವಿಷಯ ನೀಡಲಾಗುವುದು.
• ಒಂದು ಶಾಲೆಯಿಂದ ಎಷ್ಟು ವಿದ್ಯಾರ್ಥಿಗಳು ಬೇಕಾದರೂ ಸ್ಪರ್ಧಿಸಬಹುದು.
• ಸ್ಪರ್ಧಿಸುವ ವಿದ್ಯಾರ್ಥಿಯು ಶಾಲಾ ಮುಖ್ಯೋಪಾದ್ಯಾಯರಿಂದ ಸ್ಪರ್ಧಿಸುವ ಕುರಿತು ಪತ್ರ ತರತಕ್ಕದ್ದು.
• ಮಡಿಕೇರಿಯಲ್ಲಿ ಸ್ಪರ್ಧೆ ನಡೆಯುವುದು.
• ಈ ಕುರಿತು ಅರ್ಜಿ ಸಲ್ಲಿಸಲು ದಿನಾಂಕ : 15-07-2023 ಕೊನೆಯ ದಿನವಾಗಿದ್ದು
• ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ :
ಅಧ್ಯಕ್ಷರು,
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,
ಎಸ್.ಜಿ.ಆರ್.ವೈ ಕಟ್ಟಡ,
ಅಂಬೇಡ್ಕರ್ ಭವನದ ಬಳಿ,
ಸುದರ್ಶನ ವೃತ್ತ,
ಮಡಿಕೇರಿ.
ಸಂಪರ್ಕಿಸಲು ದೂರವಾಣಿ ಸಂಖ್ಯೆ :
ಎಂ.ಪಿ.ಕೇಶವ ಕಾಮತ್, ಅಧ್ಯಕ್ಷರು : 94483 46276
ಎಸ್.ಐ. ಮುನೀರ್ ಅಹಮದ್, ಗೌ. ಕಾರ್ಯದರ್ಶಿ “ 98861 81613,
ಶ್ರೀಮತಿ ರೇವತಿ ರಮೇಶ್, ಗೌ. ಕಾರ್ಯದರ್ಶಿ : 96632 54829.