ಮಂಗಳೂರು : ಯಕ್ಷಾರಾಧನಾ ಕಲಾ ಕೇಂದ್ರ (ರಿ.) ಇದರ 14ನೇ ‘ವರ್ಷಾಚರಣೆಯ ಸಂಭ್ರಮ’ ಕಾರ್ಯಕ್ರಮವು ದಿನಾಂಕ : 15-07-2023ನೇ ಶನಿವಾರ ಅಪರಾಹ್ನ 3.30ರಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಭವನ (ಪುರಭವನ)ದಲ್ಲಿ ನಡೆಯಲಿದೆ.
ಮಧ್ಯಂತರದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಹಾಗೂ ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ವೇದಮೂರ್ತಿ ಶ್ರೀ ಶ್ರೀಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಡಿ. ಶೆಟ್ಟಿ, ಮಂಗಳೂರಿನ ಸನಾತನ ಯಕ್ಷಾಲಯದ ನಿರ್ದೇಶಕರಾದ ಶ್ರೀ ರಾಕೇಶ್ ರೈ ಅಡ್ಕ, ಮಂಗಳೂರು ಮಹಾನಗರಪಾಲಿಕೆಯ ಕಾರ್ಪೋರೇಟರ್ ಗಳಾದ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಜಗದೀಶ್ ಶೆಟ್ಟಿ, ಸುರತ್ಕಲ್ ಮಹಿಳಾ ಯಕ್ಷಕಲಾ ಬಳಗದ ಮುಖ್ಯಸ್ಥೆಯಾದ ಶ್ರೀಮತಿ ಕೆ. ಕಲಾವತಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಮಂಗಳೂರಿನ ಸರಯೂ ಯಕ್ಷಕಲಾ ಕೇಂದ್ರದ ನಿರ್ದೇಶಕರಾದ ಶ್ರೀ ವರ್ಕಾಡಿ ರವಿ ಅಲೆವೂರಾಯರಿಗೆ ‘ಯಕ್ಷ ಶಿಕ್ಷಣ ಪುರಸ್ಕಾರ’ ನೀಡಿ ಗೌರವಿಸಲಾಗುವುದು.
ಸಭಾ ಕಾರ್ಯಕ್ರಮದ ಬಳಿಕ ಯಕ್ಷಾರಾಧನಾ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಕವಿ ಪ್ರೊ. ಅಮೃತ ಸೋಮೇಶ್ವರ ವಿರಚಿತ ವಿದುಷಿ ಸುಮಂಗಲಾ ರತ್ನಾಕರ ರಾವ್ ನಿರ್ದೇಶನದಲ್ಲಿ ‘ಮಹಾಕಲಿ ಮಗಧೇಂದ್ರ’ ಯಕ್ಷಗಾನ ಬಯಲಾಟವು ನಡೆಯಲಿರುವುದು. ಈ ಯಕ್ಷಗಾನದ ಹಿಮ್ಮೇಳದಲ್ಲಿ ಶ್ರೀ ಸತೀಶ್ ಶೆಟ್ಟಿ ಬೋಂದೆಲ್, ಶ್ರೀ ಪ್ರಫುಲ್ಲಚಂದ್ರ ನೆಲ್ಯಾಡಿ, ಶ್ರೀ ಶಿತಿಕಂಠ ಭಟ್ ಉಜಿರೆ, ಶ್ರೀ ಕೃಷ್ಣ ಪ್ರಕಾಶ್ ಉಳಿತ್ತಾಯ, ಶ್ರೀ ಸುಬ್ರಹ್ಮಣ್ಯ ಚಿತ್ರಾಪುರ, ಮಾ. ಸಮರ್ಥ ಉಡುಪ ಸಹಕರಿಸಲಿರುವರು.
ಮುಮ್ಮೇಳದಲ್ಲಿ ಜರಾಸಂಧನಾಗಿ ಸನತ್ ಆಚಾರ್ಯ, ಕೃತವರ್ಮ ಮತ್ತು ಸಾತ್ಯಕಿಯಾಗಿ ಸಂಪ್ರೀತ್ ಹಂದೆ, ಹಂಸನಾಗಿ ವರುಣ್ ಕಾರಂತ್, ಸುಜ್ಯೋತಿಯಾಗಿ ಅನಿರುದ್ಧ ರಾವ್, ಡಿಬಿಕನಾಗಿ ವೈಶಾಖ್ ರಾವ್, ಯಾದವ ಬಲಗಳಾಗಿ ಪೂರ್ವಿ ಎನ್. ಗಟ್ಟಿ, ಪ್ರಣೀತ್, ಶರಧಿ ಎಸ್. ರಾವ್ ಮತ್ತು ಪ್ರಜ್ಞಶ್ರೀ ಸಾಮಗ, ಬಲ 1 ಮತ್ತು ವಿಪ್ರ ಅರ್ಜುನನಾಗಿ ಪ್ರಜಕ್ತಾ, ಬಲ 2 ಭರತ್, ಓಲೆಯವನು ಮತ್ತು ಗೂಢಚಾರನಾಗಿ ದತ್ತರಾಜ್, ಕಂಸನಾಗಿ ಸ್ವಸ್ತಿಕ್ ರಾವ್, ಕಾಲಯವನನಾಗಿ ಪ್ರತೀಕ್ ಜೆ. ಜಗತಾಪ್, ಆಸ್ತಿಯಾಗಿ ಸಮನ್ವಿತ ಹಂದೆ, ಪ್ರಾಸ್ತಿಯಾಗಿ ಸಾಕ್ಷಿ ಶೇಷಾದ್ರಿ, ವಿಶ್ವಕರ್ಮನಾಗಿ ಭರತ್, ಕಪಾಲಿಕನಾಗಿ ಹಾಗೂ ಅರ್ಜುನನಾಗಿ ಸಮೀಕ್ಷಾ ಆಚಾರ್ಯ, ಮುಚುಕುಂದನಾಗಿ ಮತ್ತು ವಿಪ್ರ ಕೃಷ್ಣನಾಗಿ ಶ್ರೀಮತಿ ಸುಮಾಡ್ಕರ್, ಸಹದೇವನಾಗಿ ಭೂಮಿಕ, ಶ್ರೀ ಕೃಷ್ಣನಾಗಿ ಆದಿ ಸ್ವರೂಪ, ಭೀಮನಾಗಿ ಶ್ರೀಮತಿ ಮಯೂರಿ ಎಸ್. ಕಾವೂರು, ಬಲರಾಮನಾಗಿ ಸೂರಜ್ ಸಾಮಗ, ಉದ್ಭವನಾಗಿ ಶಾಶ್ವತ್ ಶೇಷಾದ್ರಿ, ವಿಪ್ರ ಭೀಮನಾಗಿ ಸ್ವಸ್ತಿಕ್ ರಾವ್ ರಂಜಿಸಲಿದ್ದಾರೆ.