ಉಡುಪಿ : ಕಾರ್ಕಳ ತಾಲೂಕು, ಕಾಂತಾವರದಲ್ಲಿರುವ ಶ್ರೀ ಯಕ್ಷದೇಗುಲ ಕಾಂತಾವರ (ರಿ.) ಇದರ 21ನೇ ವಾರ್ಷಿಕೋತ್ಸವ ಪ್ರಯುಕ್ತ ಸಂಯೋಜಿಸುವ ನಿರಂತರ ಹನ್ನೆರಡು ತಾಸಿನ ಕಲೆಗಾಗಿ, ಕಲಾವಿದನಿಗಾಗಿ, ಕಲಾಸೇವೆ ‘ಯಕ್ಷೋಲ್ಲಾಸ -2023’ ಯಕ್ಷಗಾನ, ಸಂಸ್ಕರಣೆ, ಪ್ರಶಸ್ತಿ ಪುರಸ್ಕಾರ ಹಾಗೂ ತಾಳಮದ್ದಳೆ ಬಯಲಾಟವು ದಿನಾಂಕ : 23-07-2023ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 10-00ರಿಂದ ರಾತ್ರಿ 10-00ರ ತನಕ ಶ್ರೀ ಕ್ಷೇತ್ರ ಕಾಂತಾವರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಕಾಂತಾವರದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣಮೂರ್ತಿ ಭಟ್ ಇವರ ಉಪಸ್ಥಿತಿಯಲ್ಲಿ ಬಾರಾಡಿಬೀಡಿನ ಶ್ರೀಮತಿ ಸುಮತಿ ಆರ್. ಬಲ್ಲಾಳ್ ಇವರು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ‘ನಾಸ ಛ್ಛೇಧನ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ನಂತರ ನಡೆಯಲಿರುವ ಸಭಾ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕಾಂತಾವರದ ಧರ್ಮದರ್ಶಿಗಳಾದ ಡಾ. ಕೆ. ಜೀವಂಧರ ಬಲ್ಲಾಳ್ ಬಾರಾಡಿಬೀಡು ಇವರು ವಹಿಸಲಿದ್ದಾರೆ. ಯಕ್ಷಗಾನ ಕಲಾ ಪೋಷಕರಾದ ಶ್ರೀ ಬಿ. ಭುಜಬಲಿ ಧರ್ಮಸ್ಥಳ, ಮೂಡಬಿದ್ರಿಯ ವಿಜಯಲಕ್ಷ್ಮೀ ಕ್ಯಾಶ್ಯೂಸ್ ಮಾಲಕರಾದ ಶ್ರೀ ಎ.ಕೆ. ರಾವ್, ಬಜಗೋಳಿಯ ನಿವೃತ್ತ ಪ್ರಾಚಾರ್ಯರಾದ ಪ್ರೊ. ಶ್ರೀವರ್ಮ ಅಜ್ರಿ, ನಿಟ್ಟೆಯ ಜೆ.ಕೆ.ಎಸ್.ಹೆಚ್.ಐ. ಉದ್ಯಮಾಡಳಿತ ಸಂಸ್ಥೆಯ ಪ್ರೊಫೆಸರ್ ಡಾ. ಸುಧೀರ್ ಎಂ. ಇವರುಗಳು ಪ್ರಧಾನ ಅಭ್ಯಾಗತರಾಗಿ ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕಟೀಲು ಮೇಳದ ಯಕ್ಷಗಾನ ಕಲಾವಿದರಾದ ಶ್ರೀ ತಾರಾನಾಥ ಬಲ್ಯಾಯ ವರ್ಕಾಡಿ ಇವರಿಗೆ ಪುತ್ತೂರು ದಿ. ಶ್ರೀಧರ ಭಂಡಾರಿ ಸಂಸ್ಕರಣಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉಪನ್ಯಾಸಕರಾದ ಡಾ. ಶ್ರುತಕೀರ್ತಿರಾಜ್ ಉಜಿರೆ ಇವರು ಸಂಸ್ಕರಣೆ ಹಾಗೂ ಅಭಿನಂದನಾ ನುಡಿಗಳನ್ನಾಡಲಿದ್ದಾರೆ ಹಾಗೂ ಹನುಮಗಿರಿ ಮೇಳದ ಯಕ್ಷಗಾನ ಕಲಾವಿದರಾದ ಶ್ರೀ ಸದಾಶಿವ ಕುಲಾಲ್, ವೇಣೂರು ಇವರಿಗೆ ಬಾಯಾರು ದಿ. ಪ್ರಕಾಶ್ಚಂದ್ರ ರಾವ್ ಸಂಸ್ಕರಣಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಕ್ಸಲೆಂಟ್ ಕಾಲೇಜಿನ ಉಪನ್ಯಾಸಕರಾದ ಡಾ.ವಾದಿರಾಜ ಕಲ್ಲೂರಾಯ ಇವರು ಸಂಸ್ಕರಣೆ ಹಾಗೂ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ‘ಶ್ರೀ ರಂಗ ತುಲಾಭಾರ’ ತಾಳಮದ್ದಳೆ ಹಾಗೂ ಸಂಜೆ ‘ಶ್ರೀ ಕೃಷ್ಣ ಲೀಲೋತ್ಸವ’ ಯಕ್ಷಗಾನ ಬಯಲಾಟ ಪ್ರದರ್ಶನದ ನಡೆಯಲಿದೆ. ಭಾಗವತರಾಗಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ, ಶ್ರೀ ಗಿರೀಶ್ ರೈ ಕಕ್ಕೆಪದವು, ಶ್ರೀ ಮಹೇಶ ಕನ್ನಾಡಿ, ಶ್ರೀ ಶಿವಪ್ರಸಾದ್ ಭಟ್ ಕಾಂತಾವರ, ಚೆಂಡೆ, ಮದ್ದಳೆಯಲ್ಲಿ ಶ್ರೀ ರವಿರಾಜ ಜೈನ್ ಕಾರ್ಕಳ, ಶ್ರೀ ಎಂ.ದೇವಾನಂದ ಭಟ್ ಬೆಳುವಾಯಿ, ಶ್ರೀ ಶಿತಿಕಂಠ ಭಟ್ ಉಜಿರೆ, ಶ್ರೀ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಶ್ರೀ ಆನಂದ ಗಡಿಗಾರ್ ಕೆರ್ವಾಶೆ ಹಾಗೂ ಚಕ್ರತಾಳದಲ್ಲಿ ಶ್ರೀ ವೆಂಕಟೇಶ್ ಕಾರ್ಕಳ, ಶ್ರೀ ಉದಯ ಪಾಟ್ಕರ್, ಶ್ರೀ ರಂಜಿತ್ ಪಾಟ್ಕರ್,
ಪಾತ್ರದಾರಿಗಳು : ಸರ್ವಶ್ರೀಗಳಾದ ತಾರಾನಾಥ ಬಲ್ಯಾಯ ವರ್ಕಾಡಿ, ಸದಾಶಿವ ಕುಲಾಲ್ ವೇಣೂರು, ಶ್ರೀರಮಣಾಚಾರ್ ಕಾರ್ಕಳ, ವಾಸುದೇವ ರಂಗ ಭಟ್ ಮಧೂರು, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಪವನ್ ಕಿರಣ್ ಕೆರೆ, ಡಾ. ವಾದಿರಾಜ ಕಲ್ಲೂರಾಯ ಕಿನ್ನಿಕಂಬ್ಳ, ಅಕ್ಷಯ ಕುಮಾರ್ ಮಾರ್ನಾಡ್, ಗಣೇಶ ಶೆಟ್ಟಿ ಸಾಣೂರು, ಸುಬ್ರಹ್ಮಣ್ಯ ಬೈಪಡಿತ್ತಾಯ ನಂದಳಿಕೆ, ಕಾರ್ತಿಕ್ ಗಂಜಿಮಠ, ಸಂದೀಪ್ ಪುತ್ರನ್ ಸಾಣೂರು, ರಂಜಿತ್ ಆಚಾರ್ಯ ಬೆಳುವಾಯಿ ಹಾಗೂ ಕುಮಾರಿಯರಾದ ಸುಶ್ಮಿತಾ ಶೆಟ್ಟಿ, ಪ್ರತೀಕ್ಷಾ ಪೂಜಾರಿ, ಅಶ್ವಿತಾ. ತನ್ವಿ, ನಿಖಿತಾ, ಸೃಜನಿ, ದಿಶಾ, ಅಂಕಿತ, ನಿಖಿತಾ, ಸಿಂಚನಾ ಹಾಗೂ ಮಾಸ್ಟರ್ ಕಾರ್ತಿಕ್ ದೇವಾಡಿಗ, ಅಭೀಷ್, ಸುಮಂತ್ ಪಂಡಿತ್, ಮನೀಷ್, ಸುಪ್ರೀತ್, ಮಹೇಶ್, ದೀಪಕ್.
ಕಲೋಪಾಸಕರೇ ಕಾಂತಾವರ ಎಂಬ ಪುಟ್ಟ ಹಳ್ಳಿಯಲ್ಲಿ ಯಕ್ಷಗಾನ ಕಲೆಗಾಗಿ, ಕಲಾವಿದನಿಗಾಗಿ, ಕಲಾಸೇವೆಗಾಗಿ, ಕಲಾ ಸಂಸ್ಥೆಯೊಂದನ್ನು ಹುಟ್ಟುಹಾಕಿ, ಕಳೆದ 20 ವರ್ಷಗಳಿಂದ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ಯಕ್ಷ ಶಿಕ್ಷಣ ಶಿಬಿರ, ಪ್ರತಿಭಾ ಪುರಸ್ಕಾರ, ಚಿಣ್ಣರ ಆಟ, ತಾಳಮದ್ದಳೆ ಕೂಟ, ಬಯಲಾಟ, ಗೌರವ ಸನ್ಮಾನ, ಅಗಲಿದ ಕಲಾವಿದರ ಸಂಸ್ಕರಣೆ, ಮುಂತಾದ ಕಲಾ ಕೈಂಕರ್ಯಗಳಲ್ಲಿ ಬೆಳೆದ ಈ ಸಂಸ್ಥೆಯು ಪ್ರತೀ ವರುಷ ಜುಲೈ ತಿಂಗಳಲ್ಲಿ ನಡೆಸುವ ವಾರ್ಷಿಕೋತ್ಸವ ತಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಈ ವರ್ಷದ ಕಾರ್ಯಕ್ರಮಕ್ಕೆ ತಮ್ಮನ್ನು ಗೌರವಾದರಗಳಿಂದ ಆಮಂತ್ರಿಸುತ್ತಿದ್ದೇವೆ.