ಬದಿಯಡ್ಕ : ಕೊಡಗಿನ ಗೌರಮ್ಮ ಹಾಗೂ ಹವ್ಯಕ ಮಹಾ ಮಂಡಲದ ಮಾತೃಮಂಡಳಿ ಸಹಯೋಗದಲ್ಲಿ ಹವ್ಯಕ ಮಹಿಳೆಯರಿಗಾಗಿ ಅಖಿಲ ಭಾರತ ಮಟ್ಟದ ಸಣ್ಣ ಕಥಾ ಸ್ಪರ್ಧೆ ಏರ್ಪಡಿಸಲಾಗಿದೆ.
ಯಾವುದೇ ವಯೋಮಾನದ ಹವ್ಯಕ ಮಹಿಳೆಯರು, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಇದುವರೆಗೆ ನಡೆಸಿದ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ಅವಕಾಶ ಇಲ್ಲ. 8 ಪುಟಕ್ಕೆ ಮೀರದ, ಇದುವರೆಗೆ ಪ್ರಕಟವಾಗದ, ಭಾಷಾಂತರವಲ್ಲದ, ಸಾಮಾಜಿಕ ಕತೆಗಳನ್ನು ಕಾಗದದ ಒಂದೇ ಬದಿಯಲ್ಲಿ ಬರೆದು ಅಥವಾ ಟೈಪ್ ಮಾಡಿ ಕಳುಹಿಸಬೇಕು. ಸ್ಪರ್ಧಿಗಳ ಹೆಸರು ಮತ್ತು ವಿಳಾಸ ಹಾಗೂ ಮುಖ್ಯವಾಗಿ ಸಂಪರ್ಕ ಸಂಖ್ಯೆಯನ್ನು ಪ್ರತ್ಯೇಕವಾಗಿ ಲಗತ್ತಿಸಿರಬೇಕು. ಪ್ರಥಮ ಬಹುಮಾನ ರೂ.4,000/-, ದ್ವಿತೀಯ ಬಹುಮಾನ ರೂ.3,000/-, ತೃತೀಯ ಬಹುಮಾನ – ರೂ.2,000/-, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಕಥೆಗಳನ್ನು ದಿನಾಂಕ : 30-09-2023ರೊಳಗೆ ತಲುಪುವಂತೆ ಕಳುಹಿಸಬೇಕು. ವಿಳಾಸ: ವಿಜಯಾ ಸುಬ್ರಹ್ಮಣ್ಯ ಕುಂಬಳೆ, ಸಂಚಾಲಕಿ, ಕೊಡಗಿನ ಗೌರಮ್ಮ ಕಥಾ ಸ್ಪರ್ಧೆ, ಕಾರ್ತಿಕೇಯ, ನಾರಾಯಣಮಂಗಲ, ಅಂಚೆ ಕುಂಬಳೆ, ಕಾಸರಗೋಡು ಜಿಲ್ಲೆ – 671321. ಸಂಪರ್ಕ ಸಂಖ್ಯೆ: 8547214125.