ಪುತ್ತೂರು : ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಗ್ರಾಮ ಪಂಚಾಯತ್ ನೆಕ್ಕಿಲಾಡಿಯ ಸಹಕಾರದೊಂದಿಗೆ ದಿನಾಂಕ : 22-07-2023ನೇ ಶನಿವಾರ ಬೆಳಗ್ಗೆ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಅಭಿಯಾನದ ಅಂಗವಾಗಿ ‘ಗ್ರಾಮ ಸಾಹಿತ್ಯ ಸಂಭ್ರಮ – 2023’ ಸರಣಿ ಕಾರ್ಯಕ್ರಮ-7 ನಡೆಯಲಿದೆ. ಈ ಕಾರ್ಯಕ್ರಮವು ‘ಚಿಗುರೆಲೆ ಸಾಹಿತ್ಯ ಬಳಗ’ ಪುತ್ತೂರು ಇದರ ಸಂಯೋಜನೆಯಲ್ಲಿ ನೆಕ್ಕಿಲಾಡಿಯ ಸ. ಹಿ. ಪ್ರಾ. ಶಾಲೆಯಲ್ಲಿ ನಡೆಯುವುದು.
ನೆಕ್ಕಿಲಾಡಿ ಗ್ರಾಮ ಪಂಚಾಯತ್ತಿನ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಎನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ನೆಕ್ಕಿಲಾಡಿಯ ಅಧ್ಯಕ್ಷರಾದ ಶ್ರೀ ರಾಜೀವ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಸಿ.ಆರ್.ಪಿ. ನೆಕ್ಕಿಲಾಡಿಯ ಶ್ರೀ ಮಹಮ್ಮದ್ ಅಶ್ರಫ್ ಹಾಗೂ ಪುತ್ತೂರಿನ ಕ ಸಾ ಪ ದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಉದಯಕುಮಾರ್ ಯು. ಎಲ್ ಉಪಸ್ಥಿತರಿರುವರು. ಹಾಗೂ ಈ ಕಾರ್ಯಕ್ರಮವನ್ನು ಶ್ರೀ ರಾಧಾಕೃಷ್ಣ ಎರುಂಬು ನಿರೂಪಿಸಲಿರುವರು.
ಸಭಾ ಕಾರ್ಯಕ್ರಮದ ಬಳಿಕ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷರಾದ ಶ್ರೀ ಕರುಣಾಕರ ಸುವರ್ಣ ಇವರು ಹಿರಿಯ ಸಾಹಿತಿಗಳು ಹಾಗೂ ಕಾದಂಬರಿಕಾರರಾದ ಶ್ರೀ ದಿನಕರ ಇಂದಾಜೆ, ಕ್ಯಾನ್ಸರ್ ತಜ್ಞರಾದ ಡಾ. ರಘು ಬೆಳ್ಳಿಪ್ಪಾಡಿ, ನೆಕ್ಕಿಲಾಡಿಯ ಸತ್ಯ ಶಾಂತ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಶ್ರೀಮತಿ ಶಾಂತಾ ಕುಂಟಿನಿ, ಹಿರಿಯ ಯಕ್ಷಗಾನ ಕಲಾವಿದರಾದ ಕುಂಬ್ಳೆ ಶ್ರೀಧರ್ ರಾವ್ ಹಾಗೂ ನೆಕ್ಕಿಲಾಡಿಯ ನಮ್ಮೂರು ನಮ್ಮವರು ಸಂಸ್ಥೆಯ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಶ್ರೀ ಜತೀಂದ್ರ ಶೆಟ್ಟಿ ಇವರನ್ನು ಅಭಿನಂದಿಸ ಲಿರುವರು. ಈ ಕಾರ್ಯಕ್ರಮದಲ್ಲಿ ಸ. ಹಿ. ಪ್ರಾ. ಶಾಲೆ ನೆಕ್ಕಿಲಾಡಿಯ ಮುಖ್ಯ ಗುರುಗಳಾದ ಶ್ರೀಮತಿ ಕಾವೇರಿ ಸ್ವಾಗತಿಸಿ , ಶ್ರೀ ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಲಿರುವರು. ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರಿನ ಕು. ಶ್ರೇಯ ಮಿಂಚಿನಡ್ಕ ಕಾರ್ಯಕ್ರಮ ನಿರೂಪಿಸಿ, ಸ. ಮಾ. ಹಿ. ಪ್ರಾ. ಶಾಲೆ ನೆಕ್ಕಿಲಾಡಿಯ ಹಿರಿಯ ಶಿಕ್ಷಕಿ ಶ್ರೀಮತಿ ಪದ್ಮಾ ಧನ್ಯವಾದ ಸಮರ್ಪಿಸಲಿದ್ದಾರೆ ಹಾಗೂ ಸ. ಹಿ. ಪ್ರಾ. ಶಾಲೆ ನೆಕ್ಕಿಲಾಡಿಯ ವಿದ್ಯಾರ್ಥಿಗಳು ನಾಡಗೀತೆ ಹಾಡಲಿದ್ದಾರೆ.
ಸಭಾ ಕಾರ್ಯಕ್ರಮ ಹಾಗೂ ಅಭಿನಂದನಾ ಕಾರ್ಯಕ್ರಮದ ಬಳಿಕ ವಿವಿಧ ಗೋಷ್ಠಿಗಳು ನಡೆಯಲಿದೆ.
ಗೋಷ್ಠಿ-1
‘ಸಾಹಿತ್ಯ ಹಾಗೂ ಶಿಕ್ಷಣಕ್ಕೆ ನೆಕ್ಕಿಲಾಡಿ ಗ್ರಾಮದ ಕೊಡುಗೆ’ ವಿಷಯದ ಬಗ್ಗೆ
ಉಪ್ಪಿನಂಗಡಿಯ ಸತ್ಯಶಾಂತ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಶಾಂತ ಕುಂಟನಿ, ಉಪನ್ಯಾಸ ನೀಡುವರು. ನೆಕ್ಕಿಲಾಡಿಯ ‘ನಮ್ಮೂರು ನಮ್ಮವರು’ ಸಂಸ್ಥೆಯ ಅಧ್ಯಕ್ಷರು ಮತ್ತು ಸಮಾಜ ಸೇವಕರಾದ ಶ್ರೀ ಜತೀಂದ್ರ ಶೆಟ್ಟಿಯವರ ಗೌರವ ಉಪಸ್ಥಿತಿಯಲ್ಲಿ ಈ ಗೋಷ್ಠಿಯು ನಡೆಯುತ್ತದೆ.ಸುಪ್ರಿತಾ ಚರಣ್ ಪಾಲಪ್ಪೆ ಕಾರ್ಯಕ್ರಮ ನಿರ್ವಹಿಸುವರು.
ಗೋಷ್ಠಿ-2
‘ಬಾಲ ಕಥಾಗೋಷ್ಠಿ’ಯು ಕಾದಂಬರಿಕಾರರಾದ ಶ್ರೀ ದಿನಕರ್ ಇಂದಾಜೆಯವರ ಅಧ್ಯಕ್ಷತೆಯಲ್ಲಿ ಮತ್ತು ಉಪ್ಪಿನಂಗಡಿಯ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷರಾದ ಶ್ರೀ ಅಬ್ದುಲ್ ರಹಿಮಾನ್ ಗೌರವ ಉಪಸ್ಥಿತಿಯಲ್ಲಿ ನಡೆಯಲಿದೆ. ಕು. ನವ್ಯ ಪುತ್ತೂರು ನಿರ್ವಹಿಸಲಿದ್ದಾರೆ.
ಗೋಷ್ಠಿ-3
‘ಬಾಲ ಕವಿಗೋಷ್ಠಿ’ ಯು : ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರರಾದ ಶ್ರೀ ಸಂತೋಷ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಮತ್ತು ಸ. ಮಾ. ಹಿ. ಪ್ರಾ. ಶಾಲೆ ಶಾಂತಿನಗರದ ಮುಖ್ಯ ಗುರುಗಳಾದ ಶ್ರೀಮತಿ ಆನ್ಸಿ ಲೋಬೊ ಅವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ರಶ್ಮಿತಾ ಸುರೇಶ್ ಮಾಣಿ ನಿರ್ವಹಿಸಲಿದ್ದಾರೆ.
ಗೋಷ್ಠಿ-4
ಸಾರ್ವಜನಿಕ ವಿಭಾಗದ ‘ಯುವ ಕವಿಗೋಷ್ಠಿ’ಯು ಕುಳ ಕುಂಡಡ್ಕದ ಗುಣಶ್ರೀ ವಿದ್ಯಾಲಯ ಇದರ ಮುಖ್ಯ ಗುರುಗಳಾದ ಶ್ರೀ ರಾಜಾರಾಮ ವರ್ಮ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಮತ್ತು ಕ. ಸಾ. ಪ. ಪುತ್ತೂರಿನ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಉದಯ ಕುಮಾರ್ ಯು. ಎಲ್, ಇವರ ಗೌರವ ಉಪಸ್ಥಿತಿ ನಡೆಯಲಿದೆ. ಕು. ಶ್ರೇಯ ಮಿಂಚಿನಡ್ಕ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು. ಈ ಕಾರ್ಯಕ್ರಮವನ್ನು ವಿಂಧ್ಯಾ ಎಸ್. ರೈ ನಿರ್ವಹಿಸಲಿದ್ದಾರೆ. ಬಾಲ ಕವಿಗೋಷ್ಠಿ, ಬಾಲ ಕಥಾಗೋಷ್ಠಿ ಹಾಗೂ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ನೆಕ್ಕಿಲಾಡಿ ಗ್ರಾಮದ ಸ. ಹಿ. ಪ್ರಾ. ಶಾಲೆ ನೆಕ್ಕಿಲಾಡಿ ಹಾಗೂ ಸ. ಹಿ. ಪ್ರಾ. ಶಾಲೆ ಶಾಂತಿನಗರ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.