Subscribe to Updates

    Get the latest creative news from FooBar about art, design and business.

    What's Hot

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

    May 28, 2025

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕೊಡವ ಸಾಹಿತಿಗಳಿಂದ ಕೊಡವ ಕೃತಿಗಳ ಲೋಕಾರ್ಪಣೆ
    Book Release

    ಕೊಡವ ಸಾಹಿತಿಗಳಿಂದ ಕೊಡವ ಕೃತಿಗಳ ಲೋಕಾರ್ಪಣೆ

    July 21, 2023Updated:August 19, 2023No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಡಿಕೇರಿ : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಕೊಡವ ಎಂ.ಎ. ಸ್ನಾತಕೋತ್ತರ ವಿಭಾಗ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಕೊಡವ ಮಕ್ಕಡ ಕೂಟದ ಸಹಯೋಗದಲ್ಲಿ ದಿನಾಂಕ : 15-07-2023ರಂದು ನಾಲ್ಕು ಕೃತಿಗಳು ಲೋಕಾರ್ಪಣೆಗೊಂಡವು.

    ಲೇಖಕಿ ಐಚಂಡ ರಶ್ಮಿ ಮೇದಪ್ಪ (ತಾಮನೆ-ಕೈಪಟ್ಟಿರ) ಬರೆದಿರುವ ಕೊಡವ ಮಕ್ಕಡ ಕೂಟದ 67ನೇ ಪುಸ್ತಕ “ಚೆರ್ ಕತೆ ಮತ್ತು ಚೆರ್ ನಾಟಕ”, ಲೇಖಕಿ ಕರವಂಡ ಸೀಮಾ ಗಣಪತಿ (ತಾಮನೆ-ಮಡೆಯಂಡ) ಬರೆದಿರುವ ಕೊಡವ ಮಕ್ಕಡ ಕೂಟದ 68ನೇ ಪುಸ್ತಕ “ಕವನ ಪೊಟ್ಟಿ”, ಕೊಡವ ಎಂ.ಎ ವಿದ್ಯಾರ್ಥಿಗಳಾದ 1) ಬೊಪ್ಪಂಡ ಶ್ಯಾಮ್ ಪೂಣಚ್ಚ, 2) ಲೆ.ಕರ್ನಲ್ ಬಿ.ಎಂ.ಪಾರ್ವತಿ (ಬಲ್ಯಡಿಚಂಡ), 3) ಐಚಂಡ ರಶ್ಮಿ ಮೇದಪ್ಪ, 4) ಪುತ್ತರಿರ ವನಿತ ಮುತ್ತಪ್ಪ (ತಾಮನೆ-ಮನೆಯಪಂಡ), 5) ಆಪಾಡಂಡ ಎನ್. ಹೇಮಾವತಿ (ಜಾನ್ಸಿ-ತಾಮನೆ-ಬೊಳ್ಳಾರ್‍ಪಂಡ), 6) ಬೊಳ್ಳಜಿರ ಅಯ್ಯಪ್ಪ, 7) ಚೌಂಡಿರ ಶಿಲ್ಪ ಪೊನ್ನಪ್ಪ (ತಾಮನೆ-ಚಿಕ್ಕಂಡ), 8) ಬೊಳ್ಳಜಿರ ಯಮುನ ಅಯ್ಯಪ್ಪ (ತಾಮನೆ-ಮನ್ನೆರ) 9) ಕರವಂಡ ಸೀಮಾ ಗಣಪತಿ ಇವರೆಲ್ಲರೂ ಸೇರಿ ಬರೆದ ಕೊಡವ ಮಕ್ಕಡ ಕೂಟದ 69ನೇ ಪುಸ್ತಕ “ದೇವತೆಯಡ ಮತ್ತು ಕೇಳಿಪೋನಯಿಂಗಡ ಪಾಟ್ ರ ಕಥಾ ರೂಪ” ಹಾಗೂ 70ನೇ ಪುಸ್ತಕ “ಜಾನಪದ ಕತೆ ಜೊಪ್ಪೆ” ಹೀಗೆ ನಾಲ್ಕು ಪುಸ್ತಕಗಳು ಅನಾವರಣಗೊಂಡವು.

    ನಂತರ “ಜಮ್ಮ ಜಾಗ ಮತ್ತು ತೋಕ್ ಹಕ್ಕು” ಕುರಿತು ವಿಚಾರ ಮಂಡಣೆ ಮಾಡಿದ ಅಪ್ಪಣ್ಣ, “ಕೊಡವ ಎಂಬ ಶಬ್ದದಲ್ಲಿ ಹತ್ತೊಂಬತ್ತು ಕೊಡವ ಭಾಷಿಕ ಮೂಲನಿವಾಸಿಗಳು ಇದ್ದಾರೆ. ಜಮ್ಮ ಎಂಬುದು ಜನ್ಮ ಭೂಮಿ, ಇದು ಯಾವ ರಾಜರು ಅಥವಾ ಬ್ರಿಟಿಷರು ಬಡವಳಿಯಾಗಿ ನೀಡಿದ ಭೂಮಿಯಲ್ಲ. ಇದು ಹಿಂದಿನ ಕಾಲದಲ್ಲಿ ಬರಡು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ ಭೂಮಿಯಾಗಿದ್ದು, ಕೊಡಗಿವರ ಉಸಿರು, ಜಮ್ಮ ಜನ್ಮ ಪದದ ತತ್ಬವ ರೂಪವಾಗಿದ್ದು, ಇದು ಕೊಡವರ ಜನ್ಮಸಿದ್ದ ಹಕ್ಕಾಗಿದೆ. ಜಮ್ಮ ಇಲ್ಲದಿದ್ದರೆ 19 ಮೂಲನಿವಾಸಿಗಳಿಗೆ ನೆಲೆ ಇಲ್ಲದಂತಾಗುತ್ತದೆ. ಜಮ್ಮ ಮಣ್ಣು ನಮ್ಮನ್ನು ಸಾಕುತ್ತದೆ ಅದನ್ನು ಎಂದಿಗೂ ಮಾರುವಂತಿಲ್ಲ ಎಂದರು. ಕೊಡವರು ಪೂರ್ವಜರ ಕಾಲದಿಂದಲೂ ಪೂರ್ವಜರು ಮತ್ತು ಆಯುಧಗಳನ್ನು ಪೂಜಿಸುತ್ತಾರೆ. ಅವರು ಕತ್ತಿಗಳು, ಬಿಲ್ಲುಗಳು, ಬಾಣಗಳು ಮತ್ತು ನಂತರ ದಿನಗಳಲ್ಲಿ ಬಂದೂಕುಗಳೂ ಪೂಜಿಸಲ್ಪಡುತ್ತಿದ್ದವು. ಕೋವಿ ಕೊಡವ ಮೂಲನಿವಾಸಿಗಳ ಮನೆಗಳಲ್ಲಿ ಪೂಜಾರ್ಹ ಒಂದು ಸಾಧನವಾಗಿದ್ದು, ಕೊಡವ ಜನಾಂಗದ ಅವಿಭಾಜ್ಯ ಅಂಗವಾಗಿದೆ. ಇದರ ಬಗ್ಗೆ ಅರಿವಿಲ್ಲದ ಕೆಲವರು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ” ಎಂದರು.

     ಸಾಹಿತಿಗಳು ಹಾಗೂ ಎಂ.ಎ.ಕೊಡವ ವಿಭಾಗದ ಉಪನ್ಯಾಸಕಿ ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ಇಂಗ್ಲೀಷ್ ವ್ಯಾಮೋಹಕ್ಕಾಗಿ ಆಂಗ್ಲ ಶಾಲೆಗೆ ಸೇರಿಸುವ ಭರದಲ್ಲಿ ಮಾತೃ ಭಾಷೆಯನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಮಕ್ಕಳಲ್ಲಿ ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಎಂ.ಎ. ಕೊಡವ ಈಗಾಗಲೇ ಆರಂಭವಾಗಿದ್ದು, ಹಲವು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು, ಪುಸ್ತಕ ಬಿಡುಗಡೆ ಮಾಡುವ ಮೂಲಕ ಯುವಕ, ಯುವತಿಯರಿಗೆ ಮಾದರಿಯಾಗಿದ್ದಾರೆ. ಅದರಂತೆ ಎಂ.ಎ. ಕೊಡವ ಅಧ್ಯಯನವನ್ನು ಸದುಪಯೋಗಪಡಿಸಿಕೊಂಡು ಕೊಡವ ಸಾಹಿತ್ಯ, ಭಾಷೆ ಹಾಗೂ ಬರಹವನ್ನು ಬೆಳೆಸುವಂತಾಗಬೇಕು. ಕೊಡವ ಭಾಷೆಯಲ್ಲಿ ತುರ್ಜುಮೆ ಸಾಹಿತ್ಯ ಮತ್ತು ಸಂಶೋಧನ ಕಾರ್ಯ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

     ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಡಾ.ಮೇಜರ್ ರಾಘವ, “ಬುಡಕಟ್ಟು ಸಮುದಾಯ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿಕೊಂಡು ಬರಲು ಭಾಷೆ ಬಹಳ ಮುಖ್ಯ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಎಂ.ಎ. ಕೊಡವ ಪ್ರಾರಂಭವಾದ ನಂತರ ಕ್ರಾಂತಿಕಾರ ಬದಲಾವಣೆ ತಂದಿದ್ದು, ಹಿರಿಯರ ಮಾರ್ಗದರ್ಶನ ಹಾಗೂ ಕಿರಿಯರ ಉತ್ಸಹದಿಂದ ಪುಸ್ತಕಗಳನ್ನು ಅನಾವರಣಗೊಳಿಸಲಾಗುತ್ತಿದೆ” ಎಂದರು. ಪುಸ್ತಕದಲ್ಲಿ ಯುವಕರಿಗೆ ಹಲವು ಸಂದೇಶಗಳಿದ್ದು, ಮುಂದಿನ ದಿನಗಳಲ್ಲೂ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಕೃತಿ ಪ್ರಕಟವಾಗಲಿ ಎಂದರು ಹಾರೈಸಿದರು.

     ಎಂ.ಎ.ಕೊಡವ ವಿಭಾಗದ ಸಂಯೋಜಕ ಮೇಚಿರ ರವಿಶಂಕರ್ ನಾಣಯ್ಯ, ಮಾತನಾಡಿ, “ಕೊಡಗು ಸಾರಸ್ವತ ಲೋಕಕ್ಕೆ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ ಎಂದರು. ಕೊಡವ ಸಂಸ್ಕೃತಿ, ಭಾಷೆ, ಕೊಡವ ಪರವಾದ ಶೈಕ್ಷಣಿಕ ಕಾರ್ಯ ನಿಲ್ಲಬಾರದು. ವಿಮರ್ಶೆ ಸಾಹಿತ್ಯ ಕೊಡಗಿನಲ್ಲಿ ಕಡಿಮೆ ಇದ್ದು, ಅದರ ಬಗ್ಗೆ ಸಮಾಜಕ್ಕೆ ತೋರಿಸುವ ಕೆಲಸ ಆಗಬೇಕು. ತುರ್ಜುಮೆ ಸಾಹಿತ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅದನ್ನು ಕೊಡವ ಸಾಹಿತ್ಯದಲ್ಲಿ ತರುವ ಕೆಲಸ ಆಗಬೇಕು. ಹಾಗೆಯೇ ಮೂಲ ಸಂಶೋಧನಾ ಕಾರ್ಯ ಆಗಬೇಕು. ಸಂಶೋಧನಾ ಲೇಖನದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಎಂ.ಎ. ವಿದ್ಯಾರ್ಥಿ ಬೊಳ್ಳಜಿರ ಬಿ. ಅಯ್ಯಪ್ಪ ಕೊಡವ ಮಕ್ಕಡ ಕೂಟದ ವತಿಯಿಂದ ಹಲವು ಸಾಹಿತಿಗಳ ಪುಸ್ತಕಗಳನ್ನು ಹೊರತರಲು ಶ್ರಮಿಸುತ್ತಿದ್ದು, ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಹಲವು ಪುಸ್ತಕಗಳನ್ನು ಹೊರತರುವ ಮೂಲಕ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದು, ಸಾಹಿತ್ಯದ ಕೆಲಸ ಮಾಡುತ್ತಿದ್ದಾರೆ” ಎಂದು ಶ್ಲಾಘೀಸಿದರು.

     ಎಂ.ಎ. ಕೊಡವ ವಿಭಾಗದ ಉಪನ್ಯಾಸಕಿ ಅಣ್ಣಳಪಂಡ ಧರ್ಮಶೀಲ ಅಜಿತ್ ಮಾತನಾಡಿ, ಎಂ.ಎ. ಕೊಡವ ಅದ್ಯಯನ ಕುರಿತು ಮಾಹಿತಿ ನೀಡಿದರು. ಕೊಡವ ಎಂ.ಎ. ವಿದ್ಯಾರ್ಥಿ ಹಾಗೂ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, “ಶಿಕ್ಷಣವನ್ನು ಲಾಭಕ್ಕಾಗಿ ಕಾಣದೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾಷೆ, ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿರುವವರು ಸದಾ ಕಲಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಸಾಮಾಜಿಕ ಜಾಲತಾಣವನ್ನು ಮತ್ತೊಬ್ಬರ ತೇಜೋವಧೆಗೆ ಬಳಕೆ ಮಾಡದೆ ಉತ್ತಮ ಕಾರ್ಯಕ್ಕೆ ಬಳಕೆ ಮಾಡುವಂತೆ” ಕರೆ ನೀಡಿದರು.

     ‘ಚೆರ್ ಕತೆ ಮತ್ತು ಚೆರ್ ನಾಟಕ’ ಪುಸ್ತಕ ಬರಹಗಾರ್ತಿ ಹಾಗೂ ಕೊಡವ ಎಂ.ಎ.ವಿದ್ಯಾರ್ಥಿನಿ ಐಚಂಡ ರಶ್ಮಿ ಮೇದಪ್ಪ, ‘ಕವನ ಪೊಟ್ಟಿ’ ಪುಸ್ತಕ ಬರಹಗಾರ್ತಿ ಹಾಗೂ ಕೊಡವ ಎಂ.ಎ.ವಿದ್ಯಾರ್ಥಿನಿ ಕರವಂಡ ಸೀಮಾ ಗಣಪತಿ ಹಾಗೂ ಎಂ.ಎ.ವಿದ್ಯಾರ್ಥಿ ಬೊಪ್ಪಂಡ ಶ್ಯಾಮ್ ಪೂಣಚ್ಚ ತಮ್ಮ ಶೈಕ್ಷಣಿಕ ಜೀವನ ಹಾಗೂ ಪುಸ್ತಕದ ಬಗ್ಗೆ ಮಾತನಾಡಿ, ಜನಾಂಗ ಬಾಂಧವರು ಕೊಡವ ಎಂ.ಎ. ಗೆ ಸೇರ್ಪಡೆಗೊಂಡು ಕೊಡವ ಭಾಷೆ, ಸಾಹಿತ್ಯ ಉಳಿಸಲು ಕೈಜೊಡಿಸುವಂತೆ ವಿನಂತಿಸಿದರು.

     ಕೊಡವ ಎಂ.ಎ. ವಿದ್ಯಾರ್ಥಿನಿಯರಾದ ಬೊಳ್ಳಾರ್‍ಪಂಡ ಎನ್. ಹೇಮಾವತಿ ಮತ್ತು ಐಚಂಡ ರಶ್ಮಿ ಮೇದಪ್ಪ ಪ್ರಾರ್ಥಿಸಿ, ಕರವಂಡ ಸೀಮಾ ಗಣಪತಿ ಸ್ವಾಗತಿಸಿದರು, ಚೌಂಡಿರ ಶಿಲ್ಪ ಪೊನ್ನಪ್ಪ ಪುಸ್ತಕ ಪರಿಚರ ಮಾಡಿದರು. ಬೊಳ್ಳಜಿರ ಯಮುನ ಅಯ್ಯಪ್ಪ ನಿರೂಪಿಸಿ, ಪುತ್ತರಿರ ವನಿತ ಮುತ್ತಪ್ಪ ಸರ್ವರನ್ನು ವಂದಿಸಿದರು.

     ಕೃತಿಕಾರರ ಪರಿಚಯ :

    ಐಚಂಡ ರಶ್ಮಿ ಮೇದಪ್ಪ ಮೂರ್ನಾಡು ಬಾಡಗ ಇವರು ಕೈಪಟ್ಟಿರ ನಾಣಯ್ಯ ಮತ್ತು ನಿವೃತ ಮುಖ್ಯೋಪಾಧ್ಯಾಯಿನಿ ದೇವಮ್ಮಾಜಿಯವರ ಸುಪುತ್ರಿ. ಎಂ.ಎಸ್ಸಿ ಹಾಗೂ ಕಂಪ್ಯೂಟರ್ ಡಿಪ್ಲೊಮಾ ವಿದ್ಯಾರ್ಹತೆಯನ್ನು ಹೊಂದಿರುವ ಇವರು ಪ್ರಸ್ತುತ ಕೊಡವ ಎಂ.ಎ ವಿದ್ಯಾರ್ಥಿನಿ.

    ಹಾಡುವುದು, ಕೊಡವ ಜಾನಪದ ನೃತ್ಯ, ಕತೆ, ನಾಟಕ ಬರೆಯುವುದು, ಪೇಂಟಿಂಗ್, ಎಂಬೋಂಜಿಂಗ್ ಇವರ ಹವ್ಯಾಸ.

    ಸಾಹಿತ್ಯ ಪರ ‘ಪೊಂಬೊಳ್ಚ ಕೂಟ’ದ ಸದಸ್ಯೆಯಾಗಿದ್ದಾರೆ. ಪತಿ ಪೊಲೀಸ್ ಆಫೀಸರ್ ಐಚಂಡ ಮೇದಪ್ಪ ಇವರ ಪ್ರೋತ್ಸಾಹ ಹಾಗೂ ಸಹಕಾರದಿಂದ ಕಲೆಯ ವಿವಿಧ ಮಜಲುಗಳಲ್ಲಿ ಭಾಗವಹಿಸಿ ಬೆಳೆಯುವುದಕ್ಕೆ ಅನುಕೂಲವಾಗಿದೆ.

     ಕರವಂಡ ಸೀಮಾ ಗಣಪತಿ ದೊಡ್ಡ ಪುಲಿಕೋಟು ಇವರು ಮೂರ್ನಾಡು ಬಾಡಗ ಗ್ರಾಮದ ನಿವೃತ್ತ ಸೇನಾನಿ ದಿವಂಗತ ಮಡೆಯಂಡ ಅಪ್ಪಚ್ಚು ಮತ್ತು ಶ್ರೀಮತಿ ಸೀತಮ್ಮ ದಂಪತಿಯ ಸುಪುತ್ರಿ. ಸಮಾಜ ಶಾಸ್ತ್ರದಲ್ಲಿ ಎಂ.ಎ. ಅಧ್ಯಯನ ಮಾಡಿದ್ದು, ಪ್ರಸ್ತುತ ಕೊಡವ ಎಂ.ಎ. ವಿದ್ಯಾರ್ಥಿನಿಯಾಗಿದ್ದು, ಚೇರಂಬಾಣೆಯ ಶ್ರೀ ರಾಜ ರಾಜೇಶ್ವರಿ ಶಾಲೆಯಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಡಿಕೇರಿ ಆಕಾಶವಾಣಿಯಲ್ಲಿ ಕೊಡವ ಸುದ್ದಿ ಸಮಾಚಾರ ವಾಚಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕೊಡವ ಮತ್ತು ಕನ್ನಡ ಭಾಷೆಯಲ್ಲಿ 300ಕ್ಕೂ ಅಧಿಕ ಕವನ ರಚನೆ ಮಾಡಿದ್ದಾರೆ. ‘ಶಕ್ತಿ’ ಹಾಗೂ ‘ಬ್ರಹ್ಮಗಿರಿ’ ಪತ್ರಿಕೆಗಳಲ್ಲಿ ಇವರ ಹಲವಾರು ಬರವಣಿಗೆಗಳು ಪ್ರಕಟಗೊಂಡಿವೆ. ‘ಕೊಡವಾಮೆ ಕೊಂಡಾಟ (ರಿ)’ ಗುಂಪಿನಲ್ಲಿ ಮೂರು ವರ್ಷಗಳಿಂದ ಪ್ರತೀ ವಾರ ‘ಕಥಾ ಮಾಲೆ’ ಕಾರ್ಯಕ್ರಮ ನಡೆಸುತ್ತಿದ್ದು, ‘ಉಮ್ಮತಾಟ್ ತಂಡ’ ರಚಿಸಿ ಬೇರೆ ಬೇರೆ ಕಡೆಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಪತಿ ಕರವಂಡ ಸಜನ್ ಗಣಪತಿಯವರ ಸಹಕಾರದಿಂದ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಿದೆ.

     ‘ದೇವತೆಯಡ ಪಿಂಞ ಕೇಳಿಪೋನಯಿಂಗಡ ಪಾಟ್ ರ ಕಥಾರೂಪ’ ಮತ್ತು ‘ಜಾನಪದ ಕತೆ ಜೊಪ್ಪೆ’ ಈ ಎರಡು ಕೃತಿಗಳನ್ನು ಪ್ರಸ್ತುತ ಕೊಡವ ಎಂ.ಎ. ಅಧ್ಯಯನ ವಿದ್ಯಾರ್ಥಿಗಳಾದ 1) ಬೊಪ್ಪಂಡ ಶ್ಯಾಮ್ ಪೂಣಚ್ಚ, 2) ಲೆ.ಕರ್ನಲ್ ಬಿ.ಎಂ. ಪಾರ್ವತಿ (ಬಲ್ಯಡಿಚಂಡ), 3) ಐಚಂಡ ರಶ್ಮಿ ಮೇದಪ್ಪ, 4) ಪುತ್ತರಿರ ವನಿತ ಮುತ್ತಪ್ಪ (ತಾಮನೆ-ಮನೆಯಪಂಡ), 5) ಆಪಾಡಂಡ ಎನ್. ಹೇಮಾವತಿ (ಜಾನ್ಸಿ-ತಾಮನೆ-ಬೊಳ್ಳಾರ್‍ಪಂಡ), 6) ಬೊಳ್ಳಜಿರ ಅಯ್ಯಪ್ಪ, 7) ಚೌಂಡಿರ ಶಿಲ್ಪ ಪೊನ್ನಪ್ಪ (ತಾಮನೆ-ಚಿಕ್ಕಂಡ), 8) ಬೊಳ್ಳಜಿರ ಯಮುನ ಅಯ್ಯಪ್ಪ (ತಾಮನೆ-ಮನ್ನೆರ) 9) ಕರವಂಡ ಸೀಮಾ ಗಣಪತಿ ರಚನೆ ಮಾಡಿದ್ದಾರೆ.

     ಬೊಪ್ಪಂಡ ಶ್ಯಾಮ್ ಪೂಣಚ್ಚ

     ಲೆ.ಕರ್ನಲ್ ಬಿ.ಎಂ. ಪಾರ್ವತಿ

     

    ಐಚಂಡ ರಶ್ಮಿ ಮೇದಪ್ಪ

     ಪುತ್ತರಿರ ವನಿತ ಮುತ್ತಪ್ಪ

     ಆಪಾಡಂಡ ಎನ್. ಹೇಮಾವತಿ

     

    ಬೊಳ್ಳಜಿರ ಅಯ್ಯಪ್ಪ

     ಚೌಂಡಿರ ಶಿಲ್ಪ ಪೊನ್ನಪ್ಪ

    ಬೊಳ್ಳಜಿರ ಯಮುನ ಅಯ್ಯಪ್ಪ

     

    ಕರವಂಡ ಸೀಮಾ ಗಣಪತಿ

     

    Share. Facebook Twitter Pinterest LinkedIn Tumblr WhatsApp Email
    Previous Articleನೆಕ್ಕಿಲಾಡಿಯಲ್ಲಿ ‘ಗ್ರಾಮ ಸಾಹಿತ್ಯ ಸಂಭ್ರಮ – 2023’ | ಜುಲೈ 22ರಂದು
    Next Article ಚನ್ನರಾಯಪಟ್ಟಣದಲ್ಲಿ ಸೋಬಾನೆ ಪದಗಳ ಕಲಿಕಾ ತರಬೇತಿ
    roovari

    Add Comment Cancel Reply


    Related Posts

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025

    ಕಾವೇರಿ ಕಾಲೇಜಿನಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆ ಹಾಗೂ ದತ್ತಿನಿಧಿ ಕಾರ್ಯಕ್ರಮ | ಮೇ 31

    May 28, 2025

    ಉತ್ತರ ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಪ್ರಕಟ

    May 28, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.