ಮೂಡುಬಿದಿರೆ : ಬೆಳುವಾಯಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ವತಿಯಿಂದ 26ನೇ ವರ್ಷದ ಯಕ್ಷಗಾನದ ಸರ್ವ ಆಯಾಮಗಳ ಬೃಹತ್ ಸಂಕಲನವಾದ ಒಳಗೊಂಡ ‘ಯಕ್ಷ ಸಂಭ್ರಮ-2023’ರ ಕಾರ್ಯಕ್ರಮವು ದಿನಾಂಕ 30-07-2023 ಆದಿತ್ಯವಾರ ಬೆಳಿಗೆ ಗಂಟೆ 8.30ರಿಂದ ಮೂಡುಬಿದಿರೆಯ ಕನ್ನಡ ಭವನದಲ್ಲಿ ನಡೆಯಲಿದೆ.
ಈ ಯಕ್ಷಸಂಭ್ರಮ ಸಮಾರಂಭವನ್ನು ಬೆಳಗ್ಗೆ 8.30ಕ್ಕೆ ಮೂಡುಬಿದಿರೆಯ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ವಿದ್ವಾಂಸ ಡಾ. ವೈ.ಎನ್. ಶೆಟ್ಟಿ, ವಹಿಸಲಿದ್ದು, ನಾರಾವಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಅರ್ಚಕರಾದ ಶ್ರೀ ಕೃಷ್ಣ ತಂತ್ರಿ ಆಶೀರ್ವಚನ ನೀಡುವರು. ವಿ.ಟಿ.ಎಸ್. ಕ್ಯಾಶ್ಯು ಇಂಡಸ್ಟ್ರೀಸ್ ಮಾಲಕರಾದ ಶ್ರೀ ಅಶೋಕ್ ಕಾಮತ್, ಶ್ರೀ ವಿಜಯಲಕ್ಷ್ಮಿ ಕ್ಯಾಶ್ಯು ಇಂಡಸ್ಟ್ರೀಸ್ ಮಾಲಕರಾದ ಶ್ರೀ ಎ.ಕೆ. ರಾವ್, ಬೆಳುವಾಯಿ ಬ್ಲೋಸಂ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಶ್ರೀ ಸೈಮನ್ ಮಸ್ಕರೇನಸ್, ಕರ್ನಾಟಕ ಬ್ಯಾಂಕಿನ ನಿವೃತ್ತ ಜಿ.ಎಂ. ಶ್ರೀ ಚಂದ್ರಶೇಖರ್ ರಾವ್ ಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ರಾಜೇಶ್ ಜಿ. ಹಾಗೂ ಮೂಡುಬಿದಿರೆಯ ಯಕ್ಷ ಮೇನಕದ ಶ್ರೀ ಸದಾಶಿವ ರಾವ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 4.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಂ.ಆರ್.ಪಿ.ಎಲ್.ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಬಿ.ಎಚ್.ವಿ. ಪ್ರಸಾದ್ ವಹಿಸಲಿದ್ದು, ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ‘ಶ್ರೀ ಯಕ್ಷದೇವ ಪ್ರಶಸ್ತಿ’ ಪ್ರದಾನ ಮಾಡಲಿವರು. ಕುಕ್ಕುಂದೂರು ಶ್ರೀ ವೇದಮೂರ್ತಿ ಗೋವಿಂದ ಭಟ್ ಆಶೀರ್ವಚನ ನೀಡಲಿದ್ದು, ಯಕ್ಷ ಸಂಗಮದ ಶ್ರೀ ಶಾಂತಾರಾಮ ಕುಡ್ವ ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ವೇಷಧಾರಿಗಳಾದ ರೆಂಜಾಳ ಶ್ರೀ ರಾಮಕೃಷ್ಣ ರಾವ್ ಮತ್ತು ಪೆರುವಾಯಿ ಶ್ರೀ ನಾರಾಯಣ ಶೆಟ್ಟಿ ಅವರಿಗೆ ತಲಾ 10 ಸಾವಿರ ರೂ. ನಗದಿನೊಂದಿಗೆ ‘ಶ್ರೀ ಯಕ್ಷದೇವ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ದಿ. ವನಜಾಕ್ಷಿ ಅಮ್ಮ ಸಂಸ್ಕರಣೆ ಕಾರ್ಯಕ್ರಮದಲ್ಲಿ ಕುಮಾರಿ ರಂಜಿತಾ ಎಲ್ಲೂರು ಅವರನ್ನು ಸನ್ಮಾನಿಸಲಾಗುವುದು.
ಮುಖ್ಯ ಅಭ್ಯಾಗತರಾಗಿ ಎಸ್.ಕೆ.ಎಫ್.ನ ಆಡಳಿತ ನಿರ್ದೇಶಕ ಡಾ. ರಾಮಕೃಷ್ಣ ಆಚಾರ್ಯ, ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್, ಇಂಚರ ಸರ್ಜಿಕಲ್ ಕ್ಲಿನಿಕ್ ನ ಡಾ. ವೈ. ಸುದರ್ಶನ್ ರಾವ್, ಉಡುಪಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಸುದರ್ಶನ್ ಎಂ, ಹನುಮಗಿರಿ ಮೇಳದ ವ್ಯವಸ್ಥಾಪಕ ಶ್ರೀ ದಿವಾಕರ ಕಾರಂತ್ ಹಾಗೂ ಉಪನ್ಯಾಸಕ ಯೋಗೀಶ್ ಕೈರೋಡಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಬೆಳಿಗ್ಗೆ 9-15ರಿಂದ 1.30ರವರೆಗೆ ಶ್ರೀ ಯಕ್ಷದೇವ ಸಾಧನ ಕೇಂದ್ರದ ವಿದ್ಯಾರ್ಥಿಗಳಿಂದ ‘ಕೃಷ್ಣ ಲೀಲೆ – ಕಂಸ ವಧೆ’ ಯಕ್ಷಗಾನ, ಗಾನ ವೈಭವ ಹಾಗೂ ‘ನಚಿಕೇತೋಪಾಖ್ಯಾನ’ ತಾಳಮದ್ದಳೆ ನಡೆಯಲಿದೆ. ಅಪರಾಹ್ನ 2ರಿಂದ 4.15ರವರೆಗೆ ಪ್ರಶಸ್ತಿ ವಿಜೇತ ತಂಡಗಳಾದ ಎನ್.ಎಮ್.ಎ.ಎಮ್. ಮತ್ತು ಐ.ಟಿ. ನಿಟ್ಟೆ ಕಾಲೇಜು ವಿದ್ಯಾರ್ಥಿಗಳಿಂದ ‘ಶರಣಸೇವಾ ರತ್ನ’ ಯಕ್ಷಗಾನ ಮತ್ತು ನಾಟ್ಯ ವೈಭವ ನಡೆಯಲಿದೆ. ಸಂಜೆ 6.15ರಿಂದ 7ರವರೆಗೆ ‘ಹಾಸ್ಯ ವೈಭವ’, 7-15ರಿಂದ 8-30ರವರೆಗೆ ತೆಂಕು-ಬಡಗು ಕೂಡಾಟದಲ್ಲಿ ‘ಶ್ಯಮಂತಕ ರತ್ನ’ ಯಕ್ಷಗಾನ ಪ್ರದರ್ಶನ ಮತ್ತು ‘ದೊಂದಿ ಬೆಳಕಿನಾಟ’ದಲ್ಲಿ ರಾತ್ರಿ 8.45ರಿಂದ 10-30ರವರೆಗೆ ‘ಪಂಚವಟಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮ್ಮೆಲ್ಲರನ್ನೂ ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದ್ದಾರೆ.