ಎಡನೀರು: ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಸಂಸ್ಥಾನ ಎಡನೀರು ಮಠ, ಇಲ್ಲಿ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ದಿನಾಂಕ 26-07-2023ರಂದು ‘ಭೀಷ್ಮ ಪ್ರತಿಜ್ಞೆ’ ಎಂಬ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ರಮೇಶ್ ಭಟ್ ಪುತ್ತೂರು, ಚೆಂಡೆ ಮದ್ದಳೆಗಳಲ್ಲಿ ಶ್ರೀ ಲವ ಕುಮಾರ್ ಐಲ, ಶ್ರೀ ಮುರಳೀಧರ ಕಲ್ಲೂರಾಯ ಕುಂಜೂರು ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ್ ಬಾರ್ಯ (ಶಂತನು), ಶ್ರೀ ಗುಂಡ್ಯಡ್ಕ ಈಶ್ವರ ಭಟ್ (ದೇವವ್ರತ), ಶ್ರೀ ಕುಂಬ್ಳೆ ಶ್ರೀಧರ್ ರಾವ್ (ದಾಶರಾಜ), ಶ್ರೀ ಭಾಸ್ಕರ ಶೆಟ್ಟಿ ಸಾಲ್ಮರ (ಸತ್ಯವತಿ) ಸಹಕರಿಸಿದರು. ಮಠದ ವತಿಯಿಂದ ಶ್ರೀ ಭಾಸ್ಕರ ಬಾರ್ಯ ಸ್ವಾಗತಿಸಿ, ಶ್ರೀ ರಾಜೇಂದ್ರ ಕಲ್ಲೂರಾಯ ವಂದಿಸಿದರು.