76ನೆಯ ಸ್ವಾತಂತ್ರೋತ್ಸವದ ಪ್ರಯುಕ್ತ ಸಾಹಿತ್ಯ ಗಂಗಾ ಧಾರವಾಡ ಮತ್ತು ಗೋಲ್ಡನ್ ಗ್ಲೋಬ್ ಟ್ರಸ್ಟ್ ದೆಹಲಿ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಗೀತಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಮೊದಲ ಬಹುಮಾನ ರೂ.3000/-, ಎರಡನೆಯ ಬಹುಮಾನ ರೂ.2000/-, ಮೂರನೆಯ ಬಹುಮಾನ ರೂ.1000/- ಮತ್ತು ಎರಡು ಮೆಚ್ಚುಗೆ ಬಹುಮಾನ ರೂ.500/- ನಗದು ಮತ್ತು ಡಿಜಿಟಲ್ ಪ್ರಶಸ್ತಿ ಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುವುದು,
ಸ್ಪರ್ಧೆಯ ನಿಯಮಗಳು –
* 18-45 ವರ್ಷದೊಳಗಿನ ಉದಯೋನ್ಮುಖ ಗಾಯಕ ಮತ್ತು ಗಾಯಕಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
* ಭಾವಗೀತೆ, ದೇಶಭಕ್ತಿಗೀತೆ ಮತ್ತು ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದ ಗೀತೆಗಳನ್ನು ಮಾತ್ರ ಸ್ಪರ್ಧೆಗೆ ಸ್ವೀಕರಿಸಲಾಗುವುದು.
* ಗಾಯಕ ಮತ್ತು ಗಾಯಕಿಯರು ತಾವು ಹಾಡಿದ ಒಂದು ಹಾಡನ್ನು ವಿಡಿಯೋ ಮಾಡಿ ಕಳುಹಿಸಬೇಕು.
* ಗಾಯಕ ಮತ್ತು ಗಾಯಕಿಯರು ತಮ್ಮ ಪರಿಚಯ, ಒಂದು ಫೋಟೋ, ವಯೋಮಿತಿ ತಿಳಿಸುವ ಒಂದು ದಾಖಲೆ ಮತ್ತು ಗೀತ ರಚನಾಕಾರರ ಪರಿಚಯವನ್ನು ಪ್ರತ್ಯೇಕವಾಗಿ ಕಳುಹಿಸಬೇಕು.
* ಹಾಡು ಕಳುಹಿಸಲು ಕೊನೆಯ ದಿನಾಂಕ 20-08-2023 ಮತ್ತು ದಿನಾಂಕ 25-08-2023ರಂದು ಫಲಿತಾಂಶ ಪ್ರಕಟಿಸಲಾಗುವುದು.
* ಸ್ಪರ್ಧಿಗಳು ತಮ್ಮ ಹಾಡುಗಳನ್ನು ನಿಗದಿತ ಸಮಯದಲ್ಲಿ +91 9110687473 ನಂಬರಿಗೆ ವಾಟ್ಸಪ್ ಮೂಲಕ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ವಿಕಾಸ ಹೊಸಮನಿ ಮೊ.ವಾ. 9110687473
ಸುಭಾಷ ಪಟ್ಟಾಜೆ ಮೊ.ವಾ. 9645081966