ಬೆಳ್ತಂಗಡಿ : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ, ಶ್ರೀಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಇವರ ವತಿಯಿಂದ ದಿನಾಂಕ ಆಗಸ್ಟ್ 7ರಿಂದ 13ರವರೆಗೆ ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ ಕಾರ್ಯಕ್ರಮವು ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನದಲ್ಲಿ ನಡೆಯಲಿದೆ.
ಪ್ರತಿ ದಿನ ಸಂಜೆ 6ರಿಂದ 9ರವರೆಗೆ ನಡೆಯುವ ಯಕ್ಷಾವತರಣ 4ರಲ್ಲಿ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಅವರ ಪ್ರಧಾನ ಭೂಮಿಕೆಯ ಅರ್ಥ ಪ್ರಸ್ತುತಿಯೊಂದಿಗೆ ರಾಮ, ವಸಿಷ್ಠ, ಕರ್ಣ, ಕೃಷ್ಣ, ವಿದುರ, ಅತಿಕಾಯ, ಕೃಷ್ಣ ಕೇಂದ್ರಿತ ಪ್ರಸಂಗಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ತೆಂಕು ಬಡಗಿನ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಶ್ರೀ ಅಶೋಕ ಭಟ್ ಎನ್. ಉಜಿರೆ, ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಶ್ರೀ ಶಿವಾನಂದ ರಾವ್ ಕಕ್ಕಿನೇಜಿ, ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷರಾದ ರೊ. ಅನಂತ ಭಟ್ ಮಚ್ಚಿಮಲೆ ತಿಳಿಸಿದ್ದಾರೆ.