ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಪ್ರಸ್ತುತಪಡಿಸುವ ‘ರಾಮಾಯಣ ಮಾಸಾಚರಣೆ’ ಕಾರ್ಯಕ್ರಮವು ದಿನಾಂಕ 11-08-2023 ರಿಂದ 17-08-2023ರವರೆಗೆ ಕಾಸರಗೋಡಿನ ಸಿರಿಬಾಗಿಲಿನಲ್ಲಿರುವ ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.
ಅಗೋಸ್ತು ತಿಂಗಳ 11ನೇ ತಾರೀಕಿನಿಂದ 17ರವರೆಗೆ ಪ್ರತೀದಿನ ಸಂಜೆ ಘಂಟೆ 7.00ರಿಂದ ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಇವರಿಂದ ‘ರಾಮನಾಮ ಜಪಯಜ್ಞ’ ಪ್ರವಚನ ಕಾರ್ಯಕ್ರಮವು ನಡೆಯಲಿರುವುದು.
ದಿನಾಂಕ 11-08-2023ರ ಶುಕ್ರವಾರ ಮಧ್ಯಾಹ್ನ ಘಂಟೆ 2.30ರಿಂದ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ‘ಪಟ್ಟಾಭಿಷೇಕ’ ನಡೆಯಲಿದ್ದು, ಸಂಜೆ ಘಂಟೆ 6.00ರಿಂದ ಬೆದ್ರಡ್ಕದ ಶ್ರೀ ಅಯ್ಯಪ್ಪ ಮಹಿಳಾ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು.
12-08-2023ರ ಶನಿವಾರ ಮಧ್ಯಾಹ್ನ ಘಂಟೆ 2.30ರಿಂದ ಮಂಗಳೂರಿನ ಶ್ರೀಹರಿ ಯಕ್ಷ ಬಳಗ ಇವರಿಂದ ‘ಭರತಾಗಮನ’ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಘಂಟೆ 6.00ರಿಂದ ಬೆದ್ರಡ್ಕದ ಸನಾತನ ಬಾಲಗೋಕುಲ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು.
13-08-2023ರ ಭಾನುವಾರ ಮಧ್ಯಾಹ್ನ ಘಂಟೆ 2.30ರಿಂದ ಮಂಗಳೂರಿನ ಸರಯೂ ಯಕ್ಷ ಬಾಲ ವೃಂದ ಕೋಡಿಕಲ್ ಇವರಿಂದ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಘಂಟೆ 6ರಿಂದ ದೇಶಮಂಗಲದ ಶ್ರೀ ಶಂಕರನಾರಾಯಣ ಕುಟ್ಟಿಚ್ಚಾತ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು.
14-08-2023ರ ಸೋಮವಾರ ಮಧ್ಯಾಹ್ನ ಘಂಟೆ 2.30ರಿಂದ ಕುಂಬಳೆಯ ಶ್ರೀ ದುರ್ಗಾ ಪಾವನಿ ಯಕ್ಷಕಲಾ ಸಂಘ ಆರಿಕ್ಕಾಡಿ ಇವರಿಂದ ‘ಸೀತಾಪಹಾರ’ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಕುತ್ಯಾಳ ಶ್ರೀ ಅನ್ನಪೂರ್ಣೆಶ್ವರಿ ಮಹಿಳಾ ಭಜನಾ ಸಂಘ, ಕೂಡ್ಲು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು.
15-08-2023ರ ಮಂಗಳವಾರ ಮಧ್ಯಾಹ್ನ ಘಂಟೆ 2.30ರಿಂದ ಸುರತ್ಕಲ್ಲಿನ ಶ್ರೀ ದುರ್ಗಾಂಬ ಮಹಿಳಾ ಯಕ್ಷಗಾನ ತಂಡ ತಡಂಬೈಲು ಇವರಿಂದ ‘ವಾಲಿ ಮೋಕ್ಷ’ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಸಿರಿಬಾಗಿಲು ಶ್ರೀ ಮಹಾದೇವ ಮಹಿಳಾ ಭಜನಾ ಸಂಘ, ಪುಳ್ಕೂರು ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು.
16-08-2023ರ ಬುಧವಾರ ಮಧ್ಯಾಹ್ನ ಘಂಟೆ 2.30ರಿಂದ ಮುಡಿಪು ಇಲ್ಲಿನ ವಿಶ್ವ ಭಾರತಿ ಯಕ್ಷಸಂಜೀವಿನಿ ತಂಡದ ಸದಸ್ಯರಿಂದ ‘ರಾವಣ ವಧೆ’ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಸಂಜೆ ಘಂಟೆ 6.00ರಿಂದ ಕಾಸರಗೋಡಿನ, ವಿದ್ಯಾನಗರದ ಚಿನ್ಮಯ ವಿದ್ಯಾಲಯ ಇಲ್ಲಿನ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು.
17-08-2023ರ ಗುರುವಾರ ಮಧ್ಯಾಹ್ನ ಘಂಟೆ 2.30ಕ್ಕೆ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ‘ಶ್ರೀ ರಾಮ ನಿಜ ಪಟ್ಟಾಭಿಷೇಕ’ ನಡೆಯಲಿದ್ದು, ಸಂಜೆ ಘಂಟೆ 6.00ರಿಂದ ಪುಳ್ಕೂರು ಶ್ರೀ ಮಹಾದೇವ ಭಜನಾ ಸಂಘ, ಸಿರಿಬಾಗಿಲು ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು.
ಈ ಏಳು ದಿನಗಳ ಪರ್ಯಂತ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಅಭಯಲಕ್ಷ್ಮೀನೃಸಿಂಹ ದೇವಸ್ಥಾನ ಹಾದಿಗಲ್ಲು ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಇಲ್ಲಿನ ಧರ್ಮದರ್ಶಿಗಳಾದ ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣ, ಸಂಘದ ಪ್ರವರ್ತಕರಾದ ಶ್ರೀ ಕಜ೦ಪಾಡಿ ಸುಬ್ರಹ್ಮಣ್ಯ ಭಟ್, ಶ್ರೀ ರವೀಜಿ ಅಧಾನಿ ಗ್ರೂಪ್ಸ್, ಶ್ರೀ ಸತ್ಯಶಂಕರ ಭಟ್ ಮೆಗಾ ಇಂಡಸ್ಟ್ರೀಸ್, ಕಲ್ಕೂರ ಪ್ರತಿಷ್ಠಾನದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀ ಅವಿನಾಶ್ ರಾವ್ ಬರಂಗಾಯಿ, ಶ್ರೀ ಕೆ.ಆರ್.ಆಳ್ವ ಕಂಬಾರು, ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಡಾ.ತಲ್ಲೂರು ಶಿವರಾಮ ಶೆಟ್ಟಿ, ಶ್ರೀ ದಿವಾಣ ಗೋವಿಂದ ಭಟ್, ರಶ್ಮಿ ಚಾರಿಟೇಬಲ್ ಟ್ರಸ್ಟಿನ ಶ್ರೀ ಡಿ.ಆರ್.ರಾಜು, ಶ್ರೀ ಚಕ್ರಪಾಣಿ ದೇವಪೂಜಿತ್ತಾಯ ಆರಿಕ್ಕಾಡಿ, ಶ್ರೀ ರವೀಶ ತಂತ್ರಿ ಕುಂಠಾರು, ಶ್ರೀ ಕೃಷ್ಣ ರಾಜ ತಂತ್ರಿ ಕುಡುಪು, ಶ್ರೀ ಪ್ರೇಮನಾಥ್ ಮಾರ್ಲ ಉದ್ಯಮಿಗಳು, ಶ್ರೀ ಶ್ರೀನಿವಾಸ ಶೆಟ್ಟಿಗಾರ್ ಶೆಟ್ಟಿಗಾರ್ ಇಂಡಸ್ಟ್ರೀಸ್, ಪ್ರಗತಿಪರ ಕೃಷಿಕರಾದ ಶ್ರೀ ಜಯಪ್ರಕಾಶ್ ತೊಟ್ಟೆತ್ತೋಡಿ, ಕಲ್ಪತರು ಇಂಡಸ್ಟ್ರೀಸ್ ನ ಶ್ರೀ ಚಂದ್ರಶೇಖರ್, ಹಿರಿಯ ವೈದ್ಯರಾದ ಡಾ.ಬಿ.ಎಸ್.ರಾವ್, ಹೋಟೆಲ್ ಉಡುಪಿ ಗಾರ್ಡನ್ ನ ಶ್ರೀ ರಾಮಪ್ರಸಾದ್, ಧಾರ್ಮಿಕ ಮುಂದಾಳಾದ ಶ್ರೀ ವಸಂತ ಪೈ ಮತ್ತು ಶ್ರೀ ವೆಂಕಟ್ರಮಣ ಹೊಳ್ಳ, ಮಾಂಡೋವಿ ಮೋಟಾರ್ಸ್ ನ ಶ್ರೀ ಶಶಿಧರ ಕಾರಂತ, ಪುರೋಹಿತರಾದ ಶ್ರೀ ದಾಮೋದರ ಶರ್ಮಾ, ಶ್ರೀ ರಾಘವೇಂದ್ರ ಪ್ರಸಾದ್, ಹಿರಿಯ ವಕೀಲರಾದ ಶ್ರೀ ಅರುಣ್ ಬಂಗೇರ, ಡಾ.ಹರಿಕೃಷ್ಣ ಬಂಗೇರ, ಕಲಾಪೋಷಕರಾದ ಶ್ರೀ ಯಂ.ಯಲ್.ಭಟ್, ಪುಳ್ಕೂರು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀ ಶೀನ ಶೆಟ್ಟಿ ಕಜೆ, ಕೂಟ ಮಹಾಜಗತ್ತು ಇದರ ಅಧ್ಯಕ್ಷರಾದ ಶ್ರೀ ಎಸ್.ಎನ್.ಮಯ್ಯ, ಮಧೂರು ದೇವಸ್ಥಾನದ ಕಾರ್ಯದರ್ಶಿಗಳಾದ ಶ್ರೀ ಜಯದೇವ ಖಂಡಿಗೆ, ಕೂಡ್ಲು ದೇವಸ್ಥಾನದ ಮೊಕ್ತೇಸರರಾದ ಶ್ರೀ ಕೆ.ಜಿ.ಶ್ಯಾನುಭೋಗ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಯಾದ ಶ್ರೀ ಮುಖೇಶ್, ಈಶ್ವರ್ ಇಂಡಸ್ಟ್ರೀಸ್ ಪೀಣ್ಯದ ಶ್ರೀ ಆರ್.ಕೆ.ಭಟ್ ಬೆಳ್ಳಾರೆ, ಶ್ರೀ ಸುಧಾಕರ ಆಚಾರ್, ಶ್ರೀ ರಮೇಶ್ ಮಂಜೇಶ್ವರ, ಶ್ರೀ ವಿ.ರಾಘವೇಂದ್ರ ಉಡುಪ ಹಾಗೂ ಶ್ರೀ ಲಕ್ಷ್ಮೀ ನಾರಾಯಣ ಐವರ್ನಾಡು ಭಾಗವಹಿಸಲಿದ್ದಾರೆ.