ಉಡುಪಿ : ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮೇಳ ಇವರಿಂದ ಶ್ರೀ ರಾಮಕೃಷ್ಣ ಯಕ್ಷಗಾನ ಕಲಾ ಮಂಡಳಿ ಕುತ್ಪಾಡಿ ಇದರ ಸಹಾಯಾರ್ಥವಾಗಿ ದಿನಾಂಕ 13-08-2023 ರವಿವಾರದಂದು ಯಕ್ಷಗಾನ ಪ್ರದರ್ಶನ ನಡೆಯಲಿದೆ. ದೇವದಾಸ್ ಈಶ್ವರಮಂಗಲ ವಿರಚಿತ ಹಾಗೂ ಬೆಳ್ಳಿಹಬ್ಬದ ವರ್ಷಾಚರಣೆಯಲ್ಲಿರುವ ಅಪರೂಪದ ‘ಪವಿತ್ರ ಪದ್ಮಿನಿ’ ಎಂಬ ಪ್ರಸಂಗವು ಮಧ್ಯಾಹ್ನ 2.30ಕ್ಕೆ ಉಡುಪಿಯ ಅಜ್ಜರಕಾಡು ಪುರಭವನದ ವೇದಿಕೆಯಲ್ಲಿ ನಡೆಯಲಿದೆ.
ರಂಗದ ವಿಶೇಷತೆ:
25 ವರ್ಷಗಳ ನಂತರ ಮತ್ತೊಮ್ಮೆ ಪೆರ್ಡೂರು ರಂಗದಲ್ಲಿ “ಪವಿತ್ರ ಪದ್ಮಿನಿ”.
ಮರುಕಳಿಸಿದ ‘ಜನ್ಸಾಲೆ, ಕಡತೋಕ ಮತ್ತು ಮಲ್ಯ’ ಜೋಡಿಯ ಮೋಡಿ.
‘ಬಾಳ್ಕಲ್, ಬಿದ್ಕಲ್ ಕಟ್ಟೆ ಮತ್ತು ಮುಂಡಾಡಿ’ ಇವರ ಹಿಮ್ಮೇಳದ ರಸದೌತಣ.
ಯಕ್ಷ ಸಿಂಹಸ್ವರ ಬಿರುದಾಂಕಿತ ಥಂಡಿಮನೆಯವರ ಗತ್ತುಗಾಂಭಿರ್ಯದ ಕಮಲತೇಜ.
ಆದಿತ್ಯ ಮತ್ತು ಶಶಾಂಕ ಎಂಬ ಕಥಾನಾಯಕರಾಗಿ ರಂಗದ ರಂಗನ್ನು ಹೆಚ್ಚಿಸುವ ‘ಕಡಬಾಳ್ ಮತ್ತು ಕಾ.ಚಿಟ್ಟಾಣಿ’.
ತೊಂಬಟ್ಟು ಮತ್ತು ಬೇರೊಳ್ಳಿ’ ‘ವೈಭವ ಮತ್ತು ಅಮೋಘ’ ಎಂಬ ಖಳನಾಯಕ ಜೋಡಿಯಾಗಿ ಮಿಂಚಿನ ಸಂಚಾರ.
ಪವಿತ್ರ ಪದ್ಮಿನಿಯಾಗಿ ಯಲಗುಪ್ಪ ಹಾಗೂ ಉಪ್ಪೂರು ಮೋಡಿ ಮಾಡಲಿದ್ದಾರೆ.
ವಿಶೇಷ ಪಾತ್ರದಲ್ಲಿ ಸುಕುಮಾರ ಅವರು ರಂಗದಲ್ಲಿ ಮಿಂಚಲಿದ್ದಾರೆ.
ಕಟೀಲು, ದೇವಾಡಿಗರು ಮತ್ತು ಮೂಡ್ಕಣಿ ಈ ತ್ರಿವಳಿ ಹಾಸ್ಯಗಾರರು ಎಲ್ಲರನ್ನೂ ನಗಿಸಲು ಬರುತ್ತಿದ್ದಾರೆ.
ಇನ್ನುಳಿದ ಗೌರವಾನ್ವಿತ ಕಲಾವಿದರು ಪ್ರಸಂಗದ ಅಂದವನ್ನು ಹೆಚ್ಚಿಸಲಿದ್ದಾರೆ.
ಅತಿರಥ ಮಹಾರಥರು ಮೆರೆದ ಪ್ರಸಂಗದಲ್ಲಿ ಇಂದಿನ ಯುವ ಪಡೆ ಪ್ರೇಕ್ಷಕರನ್ನು ರಂಜಿಸಲು ಅಣಿಯಾಗಿದ್ದಾರೆ.
ಪ್ರಸಂಗದಲ್ಲಿ ಶೃಂಗಾರ, ವಿನೋದ, ವೀರರಸ, ಜೊತೆಗೆ ಕುತೂಹಲ ಕೌತುಕ ರೋಮಾಂಚಕ ಎಲ್ಲವೂ ಮೇಳೈಸಲಿದೆ…
ಕಥಾಸಾರ:
ಕೀರ್ತಿಪುರದ ರಾಜಾ ಶಶಾಂಕ ವಿಹಾರಕ್ಕೆ ತೆರಳಿದ ಸಂದರ್ಭದಲ್ಲಿ ಅಮೋಘ ವೈಭವರೆಂಬ ಖಳದ್ವಯರು ಕೊಲೆಯತ್ನ ನಡೆಸುತ್ತಾರೆ. ಏಕಾಂಗಿಯಾಗಿದ್ದ ಶಶಾಂಕ ಅಸಹಾಯಕನಾಗಿರುವ ವೇಳೆ ಆದಿತ್ಯನೆಂಬಾತ ಆಗಮಿಸಿ, ಖಳರನ್ನು ಓಡಿಸುತ್ತಾನೆ. ಆಪತ್ಪಾಂಧವನಾದ ಆದಿತ್ಯನನ್ನು ಆಧರಿಸುವ ಶಶಾಂಕನು ಆತಿಥ್ಯ ನೀಡುವ ಸಲುವಾಗಿ ತನ್ನ ಅರಮನೆಗೆ ಕರೆದುಕೊಂಡು ಹೋಗುತ್ತಾನೆ. ನಂತರ ತನ್ನ ರಾಣಿ ‘ಪದ್ಮಿನಿ’ಯನ್ನು ಪರಿಚಯಿಸುತ್ತಾನೆ. ಪದ್ಮಿನಿಯನ್ನು ಕಂಡ ಆದಿತ್ಯನು ಈಕೆ ತನ್ನ ಮಡದಿಯೆಂದೂ ಈಕೆ ‘ಪವಿತ್ರ’ ಎಂದು ಹೇಳುತ್ತಾನೆ. ಪದ್ಮಿನಿಯು ಇದನ್ನು ವಿರೋಧಿಸಿ ತನಗೆ ಆದಿತ್ಯನ ಪರಿಚಯವೇ ಇಲ್ಲವೆಂದು ಹೇಳುತ್ತಾಳೆ. ಹಾಗಾದರೆ ಪದ್ಮಿನಿಯ ಮಾತು ಸತ್ಯವೊ…!? ಆದಿತ್ಯನ ನುಡಿ ಸತ್ಯವೋ..!? ಆದಿತ್ಯನ ಉದ್ದೇಶವೇನು..?? ಪದ್ಮಿನಿಯ ಹಿನ್ನೆಲೆ ಏನು..?? ಪವಿತ್ರ ಯಾರು..?? ಪವಿತ್ರಳಿಗೂ ಪದ್ಮಿನಿಗೂ ಇರುವ ಸಂಬಂಧವೇನು..?? ಇವರೆಲ್ಲರ ಮೇಲೆ ಅಮೋಘ ವೈಭವರಿಗೆ ಹಗೆಯ ಬಗೆ ಏನು..?? ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ‘ಪವಿತ್ರ ಪದ್ಮಿನಿ’.
ಟಿಕೇಟು ದರ : 1000 /- ಗೌರವ ಪ್ರವೇಶ (ಇಬ್ಬರಿಗೆ), 500 /- ಒಬ್ಬರಿಗೆ ಮತ್ತು 200 /- ಒಬ್ಬರಿಗೆ.
ಹೆಚ್ಚಿನ ಮಹಿತಿಗಾಗೀ ಸಂಪರ್ಕ ಸಂಖ್ಯೆ : 9611099734. 9448529682. 9945187875. 9900767552.