ಮಂಗಳೂರು : ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಮೈಸೂರಿನ ಅಂಬಾರಿ ಪ್ರಕಾಶನ ‘ಯಕ್ಷ ದೀವಟಿಗೆ’ ಕೃತಿಯ ಲೋಕಾರ್ಪಣೆಯು ದಿನಾಂಕ 14-08-2023ರ ಸಂಜೆ 5.30ಕ್ಕೆ ನಡೆಯಲಿದೆ.
ಹೆಚ್. ಸುಜಯೀಂದ್ರ ಹಂದೆಯವರ ಯಕ್ಷ ಪ್ರಬಂಧಗಳ ಸಂಕಲನದ ಅನಾವರಣ ಕಾರ್ಯಕ್ರಮವು ಮಂಗಳೂರಿನ ಎಂ.ಜಿ. ರಸ್ತೆ ಯಲ್ಲಿರುವ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ನಡೆಯಲಿದೆ.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯಕ್ಷಗಾನ ವಿದ್ವಾಂಸರಾದ ಡಾ.ಎಂ.ಪ್ರಭಾಕರ್ ಜೋಶಿಯವರು ಕೃತಿಯನ್ನು ಬಿಡುಗಡೆ ಗೊಳಿಸಲಿದ್ದಾರೆ.