ಮಡಿಕೇರಿ : ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ವತಿಯಿಂದ ರಾಷ್ಟ್ರೀಯ ಶಿಶು ಕಲ್ಯಾಣ ಸಂಸ್ಥೆಯ ಕಾರ್ಯಕ್ರಮದ ಅಂಗವಾಗಿ ‘ರಾಷ್ಟ್ರೀಯ ವರ್ಣಚಿತ್ರ ಸ್ಪರ್ಧೆ’ಯು (ಕೊಡಗು ಜಿಲ್ಲೆಯವರಿಗೆ ಮಾತ್ರ) ದಿನಾಂಕ 27-08-2023ರಂದು ನಡೆಯಲಿದೆ.
ಸ್ಪರ್ಧೆಗೆ ಹೆಸರು ನೋಂದಾಯಿಸಲು 25-08-2023 ಕೊನೆಯ ದಿನಾಂಕವಾಗಿದೆ. ಸ್ಪರ್ಧಾ ವಿವರ ಮತ್ತು ಹೆಚ್ಚಿನ ಮಾಹಿತಿಗೆ ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ‘ಚೇತನ ಚಿಲುಮೆ’ (ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದ ಹತ್ತಿರ) ದೂ.ಸಂ.9880985939, 9480745776ನ್ನು ಸಂಪರ್ಕಿಸಬಹುದು.