ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ‘ಬಂಗಾರ್ ಪರ್ಬದ ಸರಣಿ ವೈಭವೊ-6’ ಇದರ ಅಂಗವಾಗಿ ದಿನಾಂಕ 18-08-2023ರಂದು ‘ತುಳುವರೆ ಹಳ್ಳಿ ಗೊಬ್ಬುಲು’ ಹಾಗೂ ದಿನಾಂಕ 19-08-2023ರಂದು ‘ತುಳು ಪ್ರತಿಭಾ ಪುರಸ್ಕಾರ ಪ್ರದಾನ -2023’ ಈ ಎರಡೂ ಕಾರ್ಯಕ್ರಮಗಳು ಕೊಡ್ಮಾಣ್ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ.
ದಿನಾಂಕ 18-08-2023ರಂದು ತುಳು ಕೂಟದ ಅಧ್ಯಕ್ಷರಾದ ಶ್ರೀ ಬಿ. ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯುವುದು. ಮಂಗಳೂರಿನ ಅಳಪೆಯಲ್ಲಿರುವ ಜ್ಞಾನ ವಿಕಾಸ ಕೇಂದ್ರದ ಸಂಯೋಜಕರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸರಳಾ ಕುಲಾಲ್ ಇವರು ದೀಪ ಪ್ರಜ್ವಲನೆ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯರಾದ ಶ್ರೀ ಬಿ. ಪದ್ಮನಾಭ ಕೋಟ್ಯಾನ್, ಮೇರಮಜಲು ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀ ಸತೀಶ ನಾಯಗ ಮತ್ತು ಕೊಡ್ಮಾಣ್ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಟಿ. ಭಾಸ್ಕರ್ ರಾವ್ ಭಾಗವಹಿಸಲಿದ್ದಾರೆ.
ದಿನಾಂಕ 19-08-2023ರಂದು ಶ್ರೀ ಬಿ. ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ‘ತುಳು ಪ್ರತಿಭಾ ಪುರಸ್ಕಾರ ಪ್ರದಾನ -2023’ ನಡೆಯಲಿದೆ. ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯರಾದ ಶ್ರೀ ಬಿ. ಪದ್ಮನಾಭ ಕೋಟ್ಯಾನ್ ಇವರು ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಮೇರಮಜಲು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಎಂ. ಕರ್ಕೇರ, ಉಪಾಧ್ಯಕ್ಷರಾದ ಶ್ರೀ ಪದ್ಮನಾಭ ಶೆಟ್ಟಿ ಹಾಗೂ ಕೊಡ್ಮಾಣ್ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಟಿ. ಭಾಸ್ಕರ್ ರಾವ್ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಕೊಡ್ಮಾಣ್ ಸರಕಾರಿ ಪ್ರೌಢ ಶಾಲೆಯ ಕು.ಶುಭೀಕ್ಷಾ, ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಗಗನ್ ಜೆ. ಸುವರ್ಣ ಹಾಗೂ ಮಂಗಳೂರು ಕೆನರಾ ಪದವಿ ಪೂರ್ವ ಕಾಲೇಜಿನ ಮಾನಸ್ ಎಸ್. ಇವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ‘ತುಳು ಪದರಂಗಿತೊ’.