ಬೆಂಗಳೂರು : ರಂಗಾಯಣ ಧಾರವಾಡ, ಶ್ರಮಣ ಸಂಸ್ಕೃತಿ ಟ್ರಸ್ಟ್ (ರಿ.) ದೊಡ್ಡಬಳ್ಳಾಪುರ ಸಹಕಾರದಲ್ಲಿ ಧಾರವಾಡ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸುವ ‘ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ’ ನಾಟಕ ಪ್ರದರ್ಶನ ದಿನಾಂಕ 29 ಡಿಸೆಂಬರ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಈ ನಾಟಕದ ರಂಗರೂಪ ಮತ್ತು ನಿರ್ದೇಶನ ಪ್ರಕಾಶ ಗರುಡ, ಸಂಗೀತ ಸಂಯೋಜನೆ ರಾಘವ ಕಮ್ಮಾರ, ರಂಗವಿನ್ಯಾಸ ಶ್ವೇತಾರಾಣಿ ಎಚ್.ಕೆ., ವಸ್ತ್ರವಿನ್ಯಾಸ ರಜನಿ ಗರುಡ, ರಂಗವಿನ್ಯಾಸ ವೆಂಕಟೇಶ ಬಡಿಗೇರ, ಬೆಳಕಿನ ವಿನ್ಯಾಸ ಮಧು ಮಳವಳ್ಳಿ ಇವರದ್ದು.

