ಬಂಟ್ವಾಳ : ಆಭಿರುಚಿ ಜೋಡುಮಾರ್ಗ ಸಾಹಿತ್ಯಕ ಸಾಂಸ್ಕೃತಿಕ ವೇದಿಕೆ ಬಂಟ್ವಾಳ ಹಾಗೂ ಬಿ.ವಿ. ಕಾರಂತ ರಂಗ ಭೂಮಿಕಾ ಟ್ರಸ್ಟ್ (ರಿ.) ಮಂಚಿ ಇವರ ಸಹಯೋಗದಲ್ಲಿ ನಾಟಕ ಪ್ರದರ್ಶನವನ್ನು ದಿನಾಂಕ 15 ಫೆಬ್ರವರಿ 2026ರಂದು ಸಂಜೆ 6-30 ಗಂಟೆಗೆ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ತೀರ್ಥಹಳ್ಳಿಯ ನಟಮಿತ್ರರು ಹವ್ಯಾಸಿ ಕಲಾ ಸಂಘ (ರಿ.) ಇವರು ಭಾರತ್ ರಂಗ ಮಹೋತ್ಸಹಕ್ಕೆ ಆಯ್ಕೆಯಾದ ‘ಆ ಊರು – ಈ ಊರು’ ನಾಟಕವನ್ನು ಅಭಿನಯಿಸಲಿದ್ದು, ಜಿ.ಬಿ. ಜೋಷಿ ರಚಿಸಿರುವ ಹರಿವಿನಾಯಕ ಸಂಗೀತ ಹಾಗೂ ಹುಲುಗಪ್ಪ ಕಟ್ಟೀಮನಿ ನಿರ್ದೇಶನ ಮಾಡಿರುತ್ತಾರೆ.

