Subscribe to Updates

    Get the latest creative news from FooBar about art, design and business.

    What's Hot

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ರಾಣಿ ಅಬ್ಬಕ್ಕ ಅಧ್ಯಯನ ಪೀಠದಿಂದ ‘ವಿಚಾರಗೋಷ್ಠಿ’
    Literature

    ರಾಣಿ ಅಬ್ಬಕ್ಕ ಅಧ್ಯಯನ ಪೀಠದಿಂದ ‘ವಿಚಾರಗೋಷ್ಠಿ’

    May 27, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠ, ಡಾ.ಜಿ.ಶಂಕರ್‌ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕನ್ನಡ ವಿಭಾಗ ಮತ್ತು ಅಜ್ಜರಕಾಡು ಸಾಹಿತ್ಯ ಸಂಘದ ಸಹಯೋಗದಲ್ಲಿ ದಿನಾಂಕ 24-05-2023ರಂದು ಡಾ.ಜಿ.ಶಂಕರ್‌ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಡಾ.ಗಣನಾಥ ಶೆಟ್ಟಿ ಎಕ್ಕಾರು “ರಾಣಿ ಅಬ್ಬಕ್ಕ ತುಳುನಾಡಿನಲ್ಲಿ ಕೇವಲ ಪ್ರತಿಮೆಯಾಗಿ ಉಳಿದಿಲ್ಲ ಮಹಿಳಾ ಸ್ವಾಭಿಮಾನದ ಸಂಕೇತವಾಗಿ ತುಳುವರ ಬದುಕಿನ ಭಾಗವಾಗಿ ಇತಿಹಾಸದ ಪುಟಗಳಲ್ಲಿ ಕಾಣಿಸಿಕೊಳ್ಳುವ ವೀರ ಮಹಿಳೆ” ಎಂದು ಅಭಿಪ್ರಾಯಪಟ್ಟರು.

    ಪ್ರೊ. ಭಾಸ್ಕರ ಶೆಟ್ಟಿ ಎಸ್. ಇವರ ಅಧ್ಯಕ್ಷತೆಯಲ್ಲಿ ‘ರಾಣಿ ಅಬ್ಬಕ್ಕ ಮತ್ತು ತುಳುನಾಡಿನ ಸಾಂಸ್ಕೃತಿಕ ಅನನ್ಯತೆ’ ಎಂಬ ವಿಷಯದ ಕುರಿತು ಡಾ.ಜ್ಯೋತಿ ಚೇಳಾಯರು ಉಪನ್ಯಾಸ ನೀಡಿದರು. ತುಳುನಾಡಿನಲ್ಲಿ ಸಮೃದ್ಧ ಜಾನಪದ ಇತಿಹಾಸ ಇದೆ. ಆದರೆ, ತುಳುನಾಡಿನ ಪಾಡ್ಡನಗಳಲ್ಲಿ ಎಲ್ಲಿಯೂ ಅಬ್ಬಕ್ಕ ರಾಣಿಯ ಕುರಿತು ಪ್ರಸ್ತಾಪ ಬಾರದಿರಲು ಕಾರಣ ಏನು ಎಂಬ ಪ್ರಶ್ನೆಯನ್ನು ಮುಂದಿಟ್ಟರು.

    ವಿದ್ಯಾರ್ಥಿ ಪ್ರತಿನಿಧಿ ಮಂಗಳ ಗೌರಿ ‘ತುಳುನಾಡಿನ ಮಹಿಳಾ ಸಬಲೀಕರಣದಲ್ಲಿ ರಾಣಿ ಅಬ್ಬಕ್ಕ’ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದರು.

    ಡಾ.ಸೌಮ್ಯಲತಾ ಪಿ. ಮತ್ತು ರೇವತಿ ಬರೆದ ‘ಮಹಿಳಾ ಪದ’ ಎನ್ನುವ ಕವನ ಸಂಕಲನ ಬಿಡುಗಡೆಯಾಯಿತು. ರಾಷ್ಟ್ರಮಟ್ಟದ ವೈಚಾರಿಕ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬಡಗ ಎಕ್ಕಾರು ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ನಯನಾ ಅವರನ್ನು ಅಭಿನಂದಿಸಲಾಯಿತು.

    ಪ್ರೊ. ಸೋಜನ್ ಕೆ.ಜಿ., ಬಡಗ ಎಕ್ಕಾರು ಪ್ರೌಢಶಾಲೆಯ ಅಧ್ಯಾಪಕಿ ಚಿತ್ರಶ್ರೀ ಉಪಸ್ಥಿತರಿದ್ದರು. ಡಾ.ಗಣೇಶ್ ಅಮೀನ್ ಸಂಕಮಾರ್ ‌ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ನಿಕೇತನ ವಂದಿಸಿ, ಡಾ.ಪಿ.ಬಿ.ಪ್ರಸನ್ನ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ಅವಿಭಜಿತ ದ.ಕ.ಜಿಲ್ಲಾ ಮಟ್ಟದ ‘ಕುಣಿತ ಭಜನಾ ಸ್ಪರ್ಧೆ -2023’
    Next Article ಕನ್ನಡ ಸಾಹಿತ್ಯ ಪರಿಷತ್ತು – ಕವನ ಸ್ಪರ್ಧೆ ಕಾರ್ಯಕ್ರಮ
    roovari

    Add Comment Cancel Reply


    Related Posts

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    ಸುಳ್ಳದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ವಿಚಾರಗೋಷ್ಠಿ

    February 26, 2026

    ಪುಸ್ತಕ ವಿಮರ್ಶೆ | ಪೌರಾಣಿಕ ಕಥೆಗಳಲ್ಲಿ ಆಸಕ್ತಿ ಮೂಡಿಸುವ ‘ಕಿರಿಯರ ಸಚಿತ್ರ ರಾಮಾಯಣ’

    February 26, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.