16-03-2023,ಮಂಗಳೂರು: ರಂಗಭೂಮಿ ಮತ್ತು ನಟನೆಯ ಕಲಾಸಕ್ತರಿಗಾಗಿ ಖ್ಯಾತ ರಂಗಕರ್ಮಿ ಮೈಮ್ ರಾಮದಾಸ್ ನಿರ್ದೇಶನದಲ್ಲಿ ಅಭಿನವ ನಟನಾ ಶಾಲೆ ಪ್ರಾರಂಭಗೊಂಡಿದ್ದು ಉರ್ವಾ ಸ್ಟೋರ್ ನಲ್ಲಿರುವ ರಘು ಬಿಲ್ಡಿಂಗಿನ ಯುವ ವಾಹಿನಿ ಸಭಾಂಗಣದಲ್ಲಿ ಪ್ರತಿ ಗುರುವಾರ ಸಂಜೆ 6ರಿಂದ ತರಗತಿಗಳು ನಡೆಯಲಿದೆ. ನಾಡಿನ ಹೆಸರಾಂತ ಸಿನಿಮಾ ಹಾಗೂ ರಂಗಭೂಮಿ ನಿರ್ದೇಶಕರುಗಳಿಂದ ವಿಶೇಷ ತರಗತಿಗಳು ನಡೆಯಲಿದ್ದು. ಕಲಾವಿದರು ಹಾಗೂ ಕಲಾಸಕ್ತರು ಇದರ ಪ್ರಯೋಜನವನ್ನು ಪಡೆಯಬಹುದು.
ಮೈಮ್ ರಾಮ್ ದಾಸ್: ಬಹುಮುಖ ಪ್ರತಿಭೆಯ ಮೈಮ್ ರಾಮ್ ದಾಸ್ ಇವರು ಅಭಿನವ ಹೆಸರಿನ ಮೂಕಾಭಿನಯ ತಂಡವನ್ನು ಕಟ್ಟಿ ರಾಜ್ಯದಾದ್ಯಂತ ಪ್ರದರ್ಶನಗಳು ಹಾಗೂ ತರಗತಿಗಳನ್ನು ನೀಡಿದವರು. ಮಕ್ಕಳ ಸೃಜನಶೀಲತೆ ಹಾಗೂ ಕಲಾಸಕ್ತಿ ಬೆಳವಣಿಗೆಗೆ ‘ರಜಾ ಮಜಾ’ ಮಕ್ಕಳ ಶಿಬಿರಗಳನ್ನು ಆಯೋಜಿಸಿ ಸಾವಿರಾರು ಮಕ್ಕಳಿಗೆ ನಟನಾ ತರಗತಿಗಳನ್ನು ನೀಡಿದವರು. ಉತ್ತಮ ಜಾನಪದ ಗಾಯಕರೂ ಆದ ರಾಮದಾಸ್ ‘ಸಿರಿ’ ಚಾನೆಲ್ ಸುರತ್ಕಲ್ ಜೊತೆಗೂಡಿ ‘ದೀಪನಲಿಕೆ’, ‘ಬೆರಿಕ್ ಪಾಡ್ದ್ ಡೋಲು’, ‘ಬೊಂಟೆ’, ‘ಸಡಂಗರ’, ‘ದೂಜಿ ಕಮೇರ’ ಹೀಗೆ ಹಲವು ತುಳು ಹಾಡುಗಳ ಧ್ವನಿಸುರಳಿಗಳನ್ನು ನಾಡಿಗೆ ಕೊಡುಗೆಯಿತ್ತವರು.’ ಒಂದು ಮೊಟ್ಟೆಯ ಕಥೆ’, ‘777ಚಾರ್ಲಿ’, ‘ಕಂತಾರ’ ಮುಂತಾದ ಹಲವು ಪ್ರಸಿದ್ಧ ಚಲನಚಿತ್ರಗಳಲ್ಲಿ ನಟಿಸಿ ಮನೆ ಮಾತಾಗಿರುವ ರಾಮದಾಸ್ ಉತ್ತಮ ಮಾತುಗಾರರೂ ಹೌದು Etv ಕನ್ನಡ, ಸ್ಪಂದನ, v4ನ್ಯೂಸ್ ಹೀಗೆ ಹಲವು ಸುದ್ದಿ ಮಾಧ್ಯಮಗಳಲ್ಲಿ ನಿರೂಪಕರಾಗಿ ಹಲವು ನಿರೂಪಕರನ್ನು ನಾಡಿಗೆ ನೀಡಿ ಖ್ಯಾತಿ ಪಡೆದವರು ಇವರು.
ಹೆಚ್ಚಿನ ಮಾಹಿತಿಗಾಗಿ ಚಂದ್ರಶೇಖರ್ -9686917406,7892714510