ಕವಲಕ್ಕಿ : ಅಭಿನೇತ್ರಿ ಆರ್ಟ್ ಟ್ರಸ್ಟ್ (ರಿ.) ನೀಲ್ಕೋಡ್ ಅರ್ಪಿಸುವ ‘ಅಭಿನೇತ್ರಿ ಯಕ್ಷೋತ್ಸವ’ವನ್ನು ದಿನಾಂಕ 21 ಡಿಸೆಂಬರ್ 2024 ಮತ್ತು 22 ಡಿಸೆಂಬರ್ 2024ರಂದು ಕವಲಕ್ಕಿ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 21 ಡಿಸೆಂಬರ್ 2024ರಂದು ಪ್ರಾಚಾರ್ಯರಾದ ಡಾ. ನಾಗಪತಿ ಭಟ್ ಇವರಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಸಭಾ ಕಾರ್ಯಕ್ರಮದ ಬಳಿಕ ಗಜಪುರ ನಾಗಪ್ಪಯ್ಯ ವಿರಚಿತ ‘ನಳದಮಯಂತಿ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ದಿನಾಂಕ 22 ಡಿಸೆಂಬರ್ 2024ರಂದು ಮಧ್ಯಾಹ್ನ 3-00 ಗಂಟೆಗೆ ‘ಕರ್ಣಭೇದನ’ ತಾಳಮದ್ದಳೆ ಮತ್ತು ಸಂಜೆ 6-00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ‘ಅಭಿನೇತ್ರಿ ಪ್ರಶಸ್ತಿ’, ‘ಬೆಳೆಯೂರು ಕೃಷ್ಣಮೂರ್ತಿ ಪ್ರಶಸ್ತಿ’ ಮತ್ತು ‘ಕಣ್ಣಿ ಪ್ರಶಸ್ತಿ’ ಪ್ರದಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಶಿರಿಯಾರ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ‘ಮಹಾಕಲಿ ಮಗಧೇಂದ್ರ’ ಯಕ್ಷಗಾನ ಪ್ರಸ್ತುತಗೊಳ್ಳಲಿದೆ.