ಮಂಗಳೂರು : ತನ್ನ ಮೂರೂವರೆ ವರ್ಷ ವಯಸ್ಸಿನಿಂದಲೇ ತಂದೆಯ ಪ್ರೇರಣೆಯಿಂದ ತಬಲಾದತ್ತ ಆಕರ್ಷಿತಳಾದವಳು ಆದ್ಯಾ ಯು. ಉಡುಪಿಯ ಖ್ಯಾತ ತಬಲಾ ವಾದಕರಾದ ಎನ್. ಮಾಧವ ಆಚಾರ್ಯ ಇವರ ಪ್ರೋತ್ಸಾಹದೊಂದಿಗೆ ತಬಲಾ ಶಿಕ್ಷಣವನ್ನು ಪ್ರಾರಂಭಿಸಿದ ಆದ್ಯಾ, 2024-25ನೇ ಸಾಲಿನ ಕರ್ನಾಟಕ ಸರಕಾರದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಕಲಾ ವಿಶ್ವ ವಿದ್ಯಾಲಯ ಮೈಸೂರು ಇವರು ನಡೆಸಿದ ಹಿಂದೂಸ್ತಾನಿ ತಾಳವಾದ್ಯ, ತಬಲಾ ಜ್ಯೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಶೇ.91 ಅಂಕಗಳನ್ನು ಪಡೆದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಪ್ರಸ್ತುತ ತಬಲಾದಲ್ಲಿ ಸೀನಿಯರ್ ಗ್ರೇಡ್ ಪಾಠಗಳನ್ನು ಅಭ್ಯಾಸ ಮಾಡುತ್ತಿರುವ ಇವರು ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲಿನ 6ನೇ ತರಗತಿಯ ವಿದ್ಯಾರ್ಥಿನಿ ಹಾಗೂ ಎಂ.ಆರ್.ಪಿ.ಎಲ್.ನ ಡೆಲ್ಲಿ ಪಬ್ಲಿಕ್ ಸ್ಕೂಲ್ ಇಲ್ಲಿನ ಹಳೆ ವಿದ್ಯಾರ್ಥಿನಿಯಾಗಿರುತ್ತಾರೆ. ತಬಲಾ ಶಿಕ್ಷಣದ ಜೊತೆಗೆ ‘ಥಂಡರ್ ಕಿಡ್ಸ್’ ಎಂಬ ವಾದ್ಯಗೋಷ್ಠಿ ತಂಡದಲ್ಲಿ ಖಾಯಂ ತಬಲಾ ಸದಸ್ಯರಾಗಿ ಜಿಲ್ಲೆಯ ಹಲವೆಡೆ ಕಾರ್ಯಕ್ರಮಗಳನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಇವರು ‘ರಾಗ ತರಂಗ’ ಮಂಗಳೂರು ಸಂಸ್ಥೆಯವರು ನಡೆಸುವ ತಬಲಾ ಸೋಲೋ ಸ್ಪರ್ಧೆಯಲ್ಲಿ ಸತತ 3ನೇ ಬಾರಿಗೆ ಪ್ರಥಮ ಸ್ಥಾನವನ್ನು ಗಳಿಸಿರುವ ಹೆಗ್ಗಳಿಕೆ ಇವರದು. ಜೊತೆಗೇ ಟೇಬಲ್ ಟೆನ್ನಿಸ್ ಆಟದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಹಲವಾರು ಬಹುಮಾನಗಳನ್ನು ಪಡೆದಿರುತ್ತಾರೆ. ಓದಿನಲ್ಲಿಯೂ ಸದಾ ಮುಂದಿದ್ದು, ಶಿಕ್ಷಕ ವೃಂದದ ಮೆಚ್ಚಿನ ವಿದ್ಯಾರ್ಥಿನಿಯಾಗಿರುವ ಇವರು ಕಾವೂರು ಗಾಂಧಿನಗರದ ನಿವಾಸಿ ಶ್ರೀ ಉದಯ ಕುಮಾರ್ ಹಾಗೂ ಅರ್ಚನಾ ಬಿ. ದಂಪತಿಗಳ ಸುಪುತ್ರಿ.