ಬಜಪೆ: ತುಳುನಾಡಿನ ಜನಪದ ಸಾಹಿತ್ಯ ಪ್ರಕಾರವಾದ ಸಾಕಷ್ಟು ಅಜ್ಜಿ ಕತೆಗಳನ್ನು ಸಂಗ್ರಹಿಸಿ, ಆಯ್ದ 40 ಕತೆಗಳನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಿ ತುಳು ಕನ್ನಡ ಎರಡೂ ಭಾಷೆಗಳಲ್ಲಿ ಪ್ರಕಟಿಸಿದ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಡಾ.ವಿ.ಕೆ.ಯಾದವ್ ಸಸಿಹಿತ್ತು ಅವರ ಐನ್ ಕೈ ಅಜ್ಜಿ ಕತೆ ಕೃತಿಯ ಬಿಡುಗಡೆ ಕಾರ್ಯಕ್ರಮ ಸೆ.20ರಂದು ಬೆಳಗ್ಗೆ ಕಟೀಲು ದೇವಳ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯ ಶಾಲೆಯಲ್ಲಿ ತೃತೀಯ ಭಾಷೆಯಾಗಿ ತುಳು ಕಲಿಯುವ ವಿದಾರ್ಥಿ `ಗಳಿಂದ ಏನ್ ಕೈ ಅಜ್ಜಿಕತೆ ಬಿಡುಗಡೆಗೊಳ್ಳಲಿದೆ. ಮೂಲ್ಕಿ- ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಸಂಯೋಜನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತುಳು- ಕನ್ನಡ ಸಾಹಿತಿ ಡಾ.ಪದ್ಮನಾಭ ಭಟ್ ಎಕ್ಕಾರು, ಜಾನಪದ ವಿದ್ಯಾರ್ಥಿ ಎಸ್.ಆರ್.ಪ್ರದೀಪ್, ಕೃತಿಕಾರ ಡಾ.ವಿ.ಕೆ.ಯಾದವ್ ಸಸಿಹಿತ್ತು ಕಟೀಲು ಪ್ರೌಢಶಾಲಾ ವೈಸ್ ಬನ್ನಿಪಾಲ್ రాజా లేటుగా ಪಾಲ್ಗೊಳ್ಳಲಿದ್ದಾರೆ ಎಂದು ಮೂಲ್ಕಿ ತಾಲೂಕು ಕಸಾಪ ಅಧ್ಯಕ್ಷ ಮಿಥುನ ಉಡುಪ ಕೊಡೆತ್ತೂರು ತಿಳಿಸಿದ್ದಾರೆ.