ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಡಾ. ಪಿ. ದಯಾನಂದ ಪೈ – ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಆಯೋಜಿಸುವ ‘ಅಕಾಡೆಮಿಡ್ ಒಂಜಿ ದಿನ’ ಬಲೆ ತುಳು ಓದುಗ ಸರಣಿಯ 3ನೇ ಕಾರ್ಯಕ್ರಮವು ದಿನಾಂಕ 27 ಫೆಬ್ರವರಿ 2025ನೇ ಗುರುವಾರದಂದು ಬೆಳಿಗ್ಗೆ ಘಂಟೆ 10.00ಕ್ಕೆ ಉದ್ಘಾಟನೆಗೊಳ್ಳಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸೆಂಟ್ರಲ್ ಬ್ಯುರೋ ಆಫ್ ಕಮ್ಯುನಿಕೇಷನ್, ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ಜಿತು ನಿಡ್ಲೆ ಉದ್ಘಾತಿಸಲಿದ್ದು, ಮುಖ್ಯ ಅತಿಥಿಯಾಗಿ ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಆನಂದ ಶೆಟ್ಟಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿನ ಸಹ ಪ್ರಾಧ್ಯಾಪಕರಾದ ಡಾ. ಜ್ಯೋತಿ ಪ್ರಿಯಾ ಭಾಗವಹಿಸಲಿದ್ದಾರೆ.
ಬೆಳಿಗ್ಗೆ ಘಂಟೆ 10.30 ರಿಂದ 1.30ರ ವರೆಗೆ ಓದು ಮತ್ತು ಚರ್ಚೆ ಹಾಗೂ ಅಪರಾಹ್ನ ಘಂಟೆ 2.00 ರಿಂದ 3.00ರ ವರೆಗೆ ಓದಿನ ಬಗೆಗೆ ಅವಲೋಕನ ನಡೆಯಲಿದೆ.

