ಕಾಸರಗೋಡು : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು(ರಿ) ನೇತೃತ್ವದಲ್ಲಿ ಆಯೋಜಿಸುವ ಖ್ಯಾತ ಸಾಹಿತಿ, ನಿವೃತ್ತ ಮುಖ್ಯೋಪಾಧ್ಯಾಯ ವೈ. ಸತ್ಯನಾರಾಯಣ ಇವರ ‘ಆಕಾಶದಿಂದ ಪಾತಾಳಕ್ಕೆ’ ಕಥಾ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 13 ಸೆಪ್ಟೆಂಬರ್ 2025ರ ಶನಿವಾರದಂದು ಕಾಸರಗೋಡಿನ ಕರೆಂದಕ್ಕಾಡಿನಲ್ಲಿರುವ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ಅಪರಾಹ್ನ ಘಂಟೆ 3:00ಕ್ಕೆ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಕೆ. ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ಹಾಗೂ ರಂಗಕರ್ಮಿಗಳಾದ ಕಾಸರಗೋಡು ಚಿನ್ನಾ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ. ಖ್ಯಾತ ಸಾಹಿತಿಗಳಾದ ಡಾ. ಪ್ರಮೀಳಾ ಮಾಧವ್ ಪುಸ್ತಕದ ಕುರಿತು ಮಾತನಾಡಲಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೇಖಕರಾದ ವೈ. ಸತ್ಯನಾರಾಯಣ, ಕಾಸರಗೋಡು ಕನ್ನಡ ಲೇಖಕರ ಬಳಗದ ಕಾರ್ಯಾಧ್ಯಕ್ಷರು ಹಾಗೂ ಸಾಹಿತಿಗಳಾದ ಪ್ರೊ. ಪಿ. ಎನ್. ಮೂಡಿತ್ತಾಯ, ಕನ್ನಡ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ. ಟಿ. ಎ. ಎನ್. ಖಂಡಿಗೆ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ನಿವೃತ್ತ ಅಧ್ಯಾಪಕರು ಹಾಗೂ ವ್ಯಂಗ್ಯಚಿತ್ರಗಾರರಾದ ಬಾಲ ಮಧುರ ಕಾನನ ಇವರಿಗೆ ಗೌರವಾರ್ಪಣೆ ನಡೆಯಲಿದ್ದು, ಬಾಲ ಮಧುರ ಕಾನನರ ಕುರಿತು ಖ್ಯಾತ ಸಾಹಿತಿ ಹಾಗೂ ನಾಟಕಕಾರರಾದ ರಾಂ ಎಲ್ಲಂಗಳ ಮಾತನಾಡಲಿದ್ದಾರೆ.