ಬೆಂಗಳೂರು : ಸಂಸ್ಕಾರ ಭಾರತಿ ಆಯೋಜಿಸುವ ‘ಅಖಿಲ ಭಾರತೀಯ ಕಲಾಸಾಧಕ ಸಂಗಮ 2024’ ಕಾರ್ಯಕ್ರಮವು ದಿನಾಂಕ 01-02-2024ರ ಗುರುವಾರದಿಂದ 04-02-2024ರ ಭಾನುವಾರದವರೆಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರಿನಲ್ಲಿ ನಡೆಯಲಿದೆ.
ದಿನಾಂಕ 01-02-2024ರ ಗುರುವಾರ ಸಂಜೆ ಘಂಟೆ 4.30ಕ್ಕೆ ಯದುಕುಲತಿಲಕ ಮೈಸೂರಿನ ಶ್ರೀಮನ್ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇವರ ಘನ ಉಪಸ್ಥಿತಿಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಲೋಕಕಲಾ ಕಲಾವಿದರಾದ ಪದ್ಮಶ್ರೀ ಮಂಜಮ್ಮ ಜೋಗತಿ, ಯು.ಕೆ. ಯಲ್ಲಿನ ರಾಯಲ್ ಹಿಸ್ಟಾರಿಕಲ್ ಸೊಸೈಟಿ ಇದರ ಸದಸ್ಯರು, ಲೇಖಕರು ಮತ್ತು ಇತಿಹಾಸ ತಜ್ಞರಾದ ಡಾ. ವಿಕ್ರಂ ಸಂಪತ್ ಹಾಗೂ ಖ್ಯಾತ ತಬಲಾ ವಿದ್ವಾಂಸರು ಮತ್ತು ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರಾದ ಪಂಡಿತ್ ಶ್ರೀ ರವೀಂದ್ರ ಯಾವಗಲ್ ಗೌರವ ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ವಿಜಯನಗರ ರಾಜವಂಶಸ್ಥರಾದ ಶ್ರೀ ಕೃಷ್ಣದೇವರಾಯ ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ವಿವರ :
ಫೆಬ್ರವರಿ 1 ಗುರುವಾರ ಸಂಜೆ 7.00ರಿಂದ – ‘ಈಶಾನ್ಯ ರಾಜ್ಯಗಳ ಲೋಕನೃತ್ಯ ಪ್ರಸ್ತುತಿ’
ಫೆಬ್ರವರಿ 2 ಶುಕ್ರವಾರ ಬೆಳಿಗ್ಗೆ 10.00ರಿಂದ ವಿಚಾರ ಸಂಕಿರಣ, ವಿಷಯ – ‘ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಮಾಜಿಕ ಸಮರಸತೆಯ ಪಾತ್ರ’ ಹಾಗೂ ಸಂಜೆ ಘಂಟೆ 4.00ರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಫೆಬ್ರವರಿ 3 ಶನಿವಾರ ಬೆಳಿಗ್ಗೆ ಘಂಟೆ 10.00ರಿಂದ- ‘ಭರತಮುನಿ ಸಮ್ಮಾನ ಸಮಾರಂಭ’ ಹಾಗೂ ಸಂಜೆ ಘಂಟೆ 4.00ರಿಂದ ಸಾಂಸ್ಕೃತಿಕ ಕಾರ್ಯಕ್ರಮ.
ಫೆಬ್ರವರಿ 2 ಮತ್ತು 3ರಂದು ಬೆಳಿಗ್ಗೆ ಘಂಟೆ 10.00ರಿಂದ ಸಂಜೆ 08.00ರವರೆಗೆ ಚಿತ್ರಕಲೆ, ಹಸ್ತಪ್ರತಿ, ಛಾಯಾಚಿತ್ರ ಹಾಗೂ ರಂಗೋಲಿಯ ಕಲಾ ಪ್ರದರ್ಶನ ನಡೆಯಲಿರುವುದು.
ಫೆಬ್ರವರಿ 4, ಭಾನುವಾರ ಬೆಳಿಗ್ಗೆ 10.00ರಿಂದ ‘ಸಮರಸತಾ ಯಾತ್ರೆ’ ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮ ಪೂಜನೀಯ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಇವರ ಮುಖ್ಯ ಉಪಸ್ಥಿತಿಯಲ್ಲಿ ಹಾಗೂ ಆರ್ಟ್ ಆಫ್ ಲಿವಿಂಗ್ ಇದರ ಸಂಸ್ಥಾಪಕರಾದ ಆಧ್ಯಾತ್ಮಗುರು ಗುರುದೇವ್ ಶ್ರೀ ಶ್ರೀ ರವಿಶಂಕರ್ ಇವರ ದಿವ್ಯ ಸಾನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿರುವುದು.