ದೆಹಲಿ : ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ‘ಫೆಸ್ಟಿವಲ್ ಆಫ್ ಲೆಟರ್ಸ್’ ಸಾಹಿತ್ಯೋತ್ಸವ ಕಾರ್ಯಕ್ರಮ ದೆಹಲಿಯ ರವೀಂದ್ರ ಭವನದಲ್ಲಿ ಮಾರ್ಚ್ 7ರಿಂದ 12ರ ತನಕ ಆಯೋಜಿಸಿದ್ದು ದೇಶದ 50ಕ್ಕೂ ಮಿಕ್ಕಿದ ಬೇರೆ ಬೇರೆ ಭಾಷೆಗಳ ಸಾಹಿತಿಗಳನ್ನು ಆಹ್ವಾನಿಸಿತ್ತು. ಈ ಬಾರಿ ತುಳು ಭಾಷೆಯಿಂದ ಅಕ್ಷತಾ ರಾಜ್ ಪೆರ್ಲ ಹಾಗೂ ಆತ್ರಾಡಿ ಅಮೃತಾ ಶೆಟ್ಟಿಯವರನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಆಯ್ಕೆ ಮಾಡಿದೆ.
ದಿನಾಂಕ 11 ಮಾರ್ಚ್ 2025ರಂದು ಹಿರಿಯ ಸಾಹಿತಿಗಳಾದ ಕಿರಣ್ ಕುಮಾರ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಟೇಸ್ಟಿ ರೌಂಡ್ – ಉತ್ತರ ಪೂರ್ವ ಹಾಗೂ ದಕ್ಷಿಣಾದಿ ಕವಿಗೋಷ್ಠಿಯಲ್ಲಿ ಅಕ್ಷತಾ ರಾಜ್ ಪೆರ್ಲ ಅವರು ತಮ್ಮ ತುಳು ಕವಿತೆಗಳನ್ನು ತುಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ತನಕ ತುಳು ಮತ್ತು ಕನ್ನಡದಲ್ಲಿ ಒಟ್ಟು 13 ಕೃತಿಗಳನ್ನು ರಚಿಸಿದ್ದು, ಈ ಮೊದಲು ಮೈಸೂರು ದಸರಾ ಕವಿಗೋಷ್ಠಿಯಲ್ಲೂ ತುಳು ಭಾಷೆಯ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ.

