Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಿಂಗಳ ಸರಣಿ ತಾಳಮದ್ದಲೆ

    February 5, 2026

    ಉದ್ಯಾವರದ ಸರಕಾರಿ ಕಾಲೇಜಿನಲ್ಲಿ ಬಹುಭಾಷಾ ನಿರಂತರ್ ನಾಟಕೋತ್ಸವ | ಫೆಬ್ರವರಿ 05ರಿಂದ 08

    February 4, 2026

    ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನತೆ ಉಪನ್ಯಾಸ ಮಾಲಿಕೆ | ಫೆಬ್ರವರಿ 05

    February 4, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಿಕ್ಕಿರಿದ ಪ್ರೇಕ್ಷಕರಿಂದ `ಅಲನಿ ಮೆಲೊಡಿ ನೈಟ್’ ಸಂಪನ್ನ
    Music

    ಕಿಕ್ಕಿರಿದ ಪ್ರೇಕ್ಷಕರಿಂದ `ಅಲನಿ ಮೆಲೊಡಿ ನೈಟ್’ ಸಂಪನ್ನ

    January 9, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    musicಮಂಗಳೂರು : ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 277ನೇ ಹಾಗೂ 24ನೇ ವರ್ಷದ ಮೊದಲ ಕಾರ್ಯಕ್ರಮ 05 ಜನವರಿ 2025ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಸಮಾರಂಭದಲ್ಲಿ ಸಂಗೀತ ರಸಮಂಜರಿ ನೀಡಿದ ಒಂಬತ್ತರ ಹರಯದ ಬಾಲೆ ಅಲನಿ ಡಿ’ಸೋಜ ಒಂಬತ್ತು ಹಾಡುಗಳನ್ನು ಹಾಡಿ ಮನ ರಂಜಿಸಿದಳು.

    ಕಾರ್ಯಕ್ರಮದಲ್ಲಿ ಮೊದಲಿಗೆ ಮಾಂಡ್ ನಾಟಕ ತಂಡದ ರಜತ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸುವ ಕೊಂಕಣಿ ನಾಟಕ `ಸರ್ದಾರ್ ಸಿಮಾಂವ್’ ಇದರ ಬ್ಯಾನರ್ ಅನ್ನು ಕಲಾಂಗಣದ ಚೇರ್’ಮ್ಯಾನ್ ಆಗಿರುವ ರೊನಾಲ್ಡ್ ಮೆಂಡೊನ್ಸಾ ಲೋಕಾರ್ಪಣೆಗೊಳಿಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ `ಗುಮಟ್’ ಸಂಗೀತ ವಾದ್ಯವನ್ನು ಅಲನಿಗೆ ನೀಡಿ ಕೊಂಕಣಿ ಗಾಯನ ಪರಂಪರೆಯನ್ನು ಮುಂದುವರೆಸುವಂತೆ ಕೋರಿ ಶುಭ ಹಾರೈಸಿದರು. ದುಬಾಯಿಯ ಉದ್ಯಮಿ ಮತ್ತು ದಾನಿ ವಿಜಯ್ ಡಿ’ಸೋಜ ಗಂಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಲುವಿ ಜೆ. ಪಿಂಟೊ, ಕೇರನ್ ಮಾಡ್ತಾ ಹಾಗೂ ಮಾಂಡ್ ನಾಟಕ ತಂಡದ ಪರವಾಗಿ ಅರುಣ್ ರಾಜ್ ರೊಡ್ರಿಗಸ್, ವಿದ್ದು ಉಚ್ಚಿಲ್ ಮತ್ತು ವಿಕಾಸ್ ಕಲಾಕುಲ್ ಉಪಸ್ಥಿತರಿದ್ದರು.

    ನಂತರ ತಾಕೊಡೆಯ ಒಂಬತ್ತು ವರ್ಷದ ಬಾಲ ಗಾಯಕಿ ಆಲನಿ ಲಿಯೊರಾ ಡಿ’ಸೋಜ ಇವರು ಮೇರು ಗೀತರಚನಕಾರರಾದ ಚಾಫ್ರಾ ಡಿಕೋಸ್ತಾ, ವಿಲ್ಫಿ ರೆಬಿಂಬಸ್, ಕ್ಲೊಡ್ ಡಿ’ಸೋಜ, ಕ್ರಿಸ್ ಪೆರಿ, ಎರಿಕ್ ಒಝೇರಿಯೊ, ಮೆಲ್ವಿನ್ ಪೆರಿಸ್ ಮತ್ತು ಲೋಯ್ಡ್ ರೇಗೊ ಇವರ ಒಂಬತ್ತು ಹಾಡುಗಳನ್ನು ಹಾಡಿ ಕಲಾಂಗಣದಲ್ಲಿ ಕಿಕ್ಕಿರಿದು ತುಂಬಿದ ಜನರ ಮನ ರಂಜಿಸಿದಳು. ಮೇವಿಶ್ ಇವರ ಸಂಗೀತ ನಿರ್ದೇಶನದಲ್ಲಿ ಡ್ರಮ್ಸ್ ನಲ್ಲಿ ಸಚಿನ್ ಸಿಕ್ವೇರಾ, ಲೀಡ್ ಗಿಟಾರ್ ನಲ್ಲಿ ಜೇಸನ್ ಡಿ’ಸೋಜ, ಬೇಸ್ ಗಿಟಾರ್ ನಲ್ಲಿ ಆಶ್ವಿನ್ ಕೊರೆಯಾ, ವಯೊಲಿನ್ ನಲ್ಲಿ ಶೊನ್ ಬ್ರಾಸ್ಲಿನ್ ಮತ್ತು ಕೀಬೋರ್ಡ್ ನಲ್ಲಿ ಅಶ್ವಿಲ್ ಕುಲಾಸೊ ಇವರು ಸಹಕರಿಸಿದರು.

    ತರಬೇತುದಾರರಾದ ಶಿಲ್ಪಾ ಕುಟಿನ್ಹಾ, ಯುವ ಗಾಯಕ ಆರ್ವಿನ್ ಡಿಕುನ್ಹಾ, ಮತ್ತು ಬ್ಲೂ ಏಂಜಲ್ಸ್ ಗಾಯನ ತಂಡವು ಗಾಯನದಲ್ಲಿ ಸಹಕರಿಸಿದರು. ರೋಶನ್ ಕುಲ್ಶೇಕರ್ ಇವರ ಸಂಗಡ ಮಕ್ಕಳಾದ ಸಂಜನಾ ಮತಾಯಸ್, ಏಂಜಲ್ ಕುಟಿನ್ಹಾ, ಅನಿಕಾ ಡಿ’ಸೋಜ ಮತ್ತು ಶನನ್ ಡಿಕೋಸ್ತಾ ಇವರು ಸುಂದರವಾಗಿ ನಿರೂಪಿಸಿದರು. ಅಲನಿಯ ತಾಯಿ ಲೊಲಿಟಾ ಸಲ್ಡಾನ್ಹಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ನೆನಪಿನ ಕಾಣಿಕೆ ನೀಡಿದರು. ತಂದೆ ಅಜಯ್ ಗ್ಲೆನ್ ಡಿ’ಸೋಜ ಧನ್ಯವಾದವನ್ನಿತ್ತರು.

    Music
    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ | ವಕೀಲರಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಎಚ್.ಆರ್. ಶಂಕರನಾರಾಯಣ
    Next Article ಮಂಗಳೂರು ಪುರಭವದಲ್ಲಿ ಸಂಪನ್ನಗೊಂಡ ಹವ್ಯಾಸಿ ಬಳಗ ಕದ್ರಿಯ ‘ತ್ರಿಂಶತಿ ಸಂಭ್ರಮ’
    roovari

    Add Comment Cancel Reply


    Related Posts

    ನೃತ್ಯ ವಿಮರ್ಶೆ | ಸಭಾದಲ್ಲಿ ಸಭೆಯ ಮನಗೆದ್ದ ನೃತ್ಯ ಮಾರ್ಗಂ

    February 4, 2026

    ‘ಕಾವ್ಯಾಂ ವ್ಹಾಳೊ- 11’ ಕೊಂಕಣಿ ಕವಿಗೋಷ್ಟಿ | ಫೆಬ್ರವರಿ 07

    February 4, 2026

    ಮಂಗಳೂರಿನ ಡಾನ್‌ಬಾಸ್ಕೊ ಹಾಲ್‌ನಲ್ಲಿ ‘ಸಮರ್ಪಣ್’ ನೃತ್ಯೋತ್ಸವ | ಫೆಬ್ರುವರಿ 7 ಮತ್ತು 8

    February 4, 2026

    ಕಲಾಂಗಣದಲ್ಲಿ ಸುರ್ ಸೊಭಾಣ್ ಮಕ್ಕಳಿಂದ ‘ಸುರ್ ಸುರಾಯ್’

    February 3, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.