ಬಾಗಲಕೋಟೆ : ಚೇತನ ಫೌಂಡೇಶನ್ ಧಾರವಾಡ ಇದರ ವತಿಯಿಂದ ‘ಅಖಿಲ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನ’ವನ್ನು ದಿನಾಂಕ 25 ಜನವರಿ 2026ರಂದು ಬಾಗಲಕೋಟೆಯಲ್ಲಿ ಆಯೋಜಿಸಲಾಗಿದೆ. ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ರಮೇಶ ಕಮತಗಿ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ.
ಜಾನಪದ ಕಲಾ ಪ್ರದರ್ಶನ, ಪುಸ್ತಕ ಬಿಡುಗಡೆ, ಯುವಕವಿಗಳಿಗಾಗಿ ಕವಿಗೋಷ್ಠಿ, ವಿಚಾರ ಮಂಡನೆ, ಸರ್ವಾಧ್ಯಕ್ಷರು-ಹಿರಿಯ ಲೇಖಕರ ಸಂವಾದ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ‘ವೀರ ಪುಲಿಕೇಶಿ ಹೆಮ್ಮೆಯ ಕನ್ನಡಿಗ ಪ್ರಶಸ್ತಿ’, ಯುವ ಕವಿಗಳಿಗೆ, ಶಿಕ್ಷಕರಿಗೆ, ಸಮಾಜ ಸೇವಕರಿಗೆ ‘ಚಾಲುಕ್ಯ ಯುವ ಪ್ರಶಸ್ತಿ’, ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಅತ್ಯುತ್ತಮ ಯುವ ಶಿಕ್ಷಕರಿಗೆ ‘ಆದರ್ಶ ಶಿಕ್ಷಕ ಪ್ರಶಸ್ತಿ’ ಹಾಗೂ ಹಿರಿಯ ಸಾಹಿತಿಗಳು, ಶಿಕ್ಷಕರಿಗೆ ಕಿರಿಯ ಸಾಹಿತಿ, ಶಿಕ್ಷಕರಿಂದ ಗೌರವಾರ್ಪಣೆ ಗುರುವಂದನಾ ಸಮಾರಂಭ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

