ಮೂದಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ 29 ನೇ ವರ್ಷದ ಆಳ್ವಾಸ್ ವಿರಾಸತ್ ಕಾರ್ಯಕ್ರಮವು ದಿನಾಂಕ 14-12-2023 ರಿಂದ 17-12-2023ರ ವರೆಗೆ ಮೂದಬಿದಿರೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ.
ದಿನಾಂಕ 14-12-2023 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಗೌರವಾನ್ವಿತ ರಾಜ್ಯಪಾಲರಾದ ಡಾ. ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ 100ಕ್ಕಿಂತಲೂ ಅಧಿಕ ದೇಶೀಯ ಜಾನಪದ ತಂಡಗಳ 3000ಕ್ಕೂ ಮಿಕ್ಕಿದ ಕಲಾವಿದರಿಂದ ವೈವಿಧ್ಯಮಯ ‘ಭವ್ಯ ಸಾಂಸ್ಕೃತಿಕ ಮೆರವಣಿಗೆ’ ಮತ್ತು ವೇದಘೋಷಗಳು, ಭಜನ್‌ಗಳು, ಪುಷ್ಪಪಲ್ಲಕ್ಕಿಗಳು ಮಂಗಳವಾದ್ಯಗಳೊಂದಿಗೆ ವಿಘ್ನನಿವಾರಕ ವಿನಾಯಕ, ಸರಸ್ಕೃತಿ, ಶ್ರೀ ಲಕ್ಷ್ಮೀ, ಹನುಮಂತ, ಶ್ರೀರಾಮ, ಶ್ರೀಕೃಷ್ಣಾದಿ ಆರೂಢ ದೇವರ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ನಡೆಯಲಿದೆ.
ದಿನಾಂಕ 15-12-2023 ರಂದು ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕರಾದ ಬೆನ್ನಿ ದಯಾಲ್ ಇವರಿಂದ ‘ಗಾನ ವೈಭವ’ ಬಳಿಕ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿರುವುದು.
ದಿನಾಂಕ 16-12-2023ರಂದು ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕರಾದ ಶ್ರೇಯಾ ಘೋಷಾಲ್ ರಿಂದ ‘ಭಾವ ಲಹರಿ’ ಹಾಗೂ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿರುವುದು.
ದಿನಾಂಕ 17-12-2023ರಂದು ಡಾ. ಮೈಸೂರು ಮಂಜುನಾಥ್, ಡಾ. ಪ್ರವೀಣ್ ಗೋಡ್ಖಿಂಡಿ ಮತ್ತು ಶ್ರೀ ವಿಜಯ ಪ್ರಕಾಶ್ ಇವರಿಗೆ ಆಳ್ವಾಸ್ ವಿರಾಸತ್ -2023 ಪ್ರಶಸ್ತಿ ಪ್ರದಾನ ನಡೆಯಲಿರುವುದು. ಬಳಿಕ ಡಾ. ಮೈಸೂರು ಮಂಜುನಾಥ್, ಡಾ. ಪ್ರವೀಣ್ ಗೋಡ್ಖಿಂಡಿ ಮತ್ತು ಶ್ರೀ ವಿಜಯ ಪ್ರಕಾಶ್ ಇವರಿಂದ ತಾಳ-ವಾದ್ಯ ಸಂಗೀತ ಕಾರ್ಯಕ್ರಮ, ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕರಾದ ಶ್ರೀ ವಿಜಯ ಪ್ರಕಾಶ್ ಇವರಿಂದ ಸಂಗೀತ ರಸಸಂಜೆ ಮತ್ತು ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿರುವುದು.
ಆಳ್ವಾಸ್ ವಿರಾಸತ್ 2023ರ ವಿಶೇಷತೆಗಳು:
ಕೃಷಿ ಮೇಳ : ಹಣ್ಣು-ತರಕಾರಿ-ಹೂವಿನ ಬೀಜಗಳು, ನರ್ಸರಿಗಳು, ಸಾವಯವ-ರಾಸಾಯನಿಕ ಗೊಬ್ಬರಗಳು, ನೀರು- ನೆಲಗಳಲ್ಲಿ ಬೆಳೆಯುವ ವಿವಿಧ ಹೂಗಿಡಗಳು, ಕೃಷಿ ಉಪಕರಣ-ಯಂತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು.
ಆಹಾರ ಮೇಳ : ಸಸ್ಯಾಹಾರ-ಮಾಂಸಾಹಾರಗಳ ವೈವಿಧ್ಯಮಯ ತಿನಿಸುಗಳ ಹಾಗೂ ವಿವಿಧ ಪಾನೀಯಗಳ ಸಿದ್ಧ ಮತ್ತು ಸ್ಥಳದಲ್ಲೇ ತಯಾರಿಸುವ ಆಹಾರ ಮಳಿಗೆಗಳು.
ಫಲಪುಷ್ಪ ಮೇಳ : ದೇಶ ವಿದೇಶಗಳ 2ಲಕ್ಷಕ್ಕೂ ಮಿಕ್ಕಿದ ಫಲ-ಪುಷ್ಪ ಗಿಡಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು.
ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ : ವಸ್ತ್ರಗಳು, ಸಾಂಪ್ರದಾಯಿಕ ಆಭರಣಗಳು, ವಿವಿಧ ಕೆತ್ತನೆಯ ಮೂರ್ತಿಗಳು, ಆಟಿಕೆಗಳೇ ಮೊದಲಾದ ಕರಕುಶಲ ವಸ್ತುಗಳು ಹಾಗೂ ವೈವಿಧ್ಯಮಯ ಪ್ರಾಚ್ಯವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು.
ಚಿತ್ರ ಕಲಾ ಮೇಳ : ದೇಶದ ಖ್ಯಾತ ಚಿತ್ರಕಲಾವಿದರ ಪ್ರಸಿದ್ಧ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ,
ಕಲಾಕೃತಿಗಳ ಪ್ರದರ್ಶನ : ಆವರಣದ ತುಂಬಾ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರನ್ನೂ ಆಕರ್ಷಿಸುವ ವಿಶೇಷ ಕಲಾಕೃತಿಗಳ ಬೃಹತ್ ಪ್ರದರ್ಶನ.
ಛಾಯಾಚಿತ್ರಗಳ ಪ್ರದರ್ಶನ : ವಿಶ್ವಮಾನ್ಯ ಪರಿಸರ ಮತ್ತು ವನ್ಯಜೀವಿಗಳ 2000ಕ್ಕೂ ಮಿಕ್ಕಿದ ಛಾಯಾಚಿತ್ರಗಳ ಪ್ರದರ್ಶನ
ಸೂಚನೆಗಳು :
ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ಆರಂಭವಾಗುತ್ತವೆ.
ಕಾರ್ಯಕ್ರಮಗಳು ಆರಂಭಗೊಳ್ಳುವ 15 ನಿಮಿಷಗಳ ಮೊದಲು ಆಸನ ಸ್ವೀಕರಿಸಿ.
ಮೂಡುಬಿದಿರೆಯ ಪ್ರಕೃತಿರಮಣೀಯ ಪ್ರಶಾಂತ ವಾತಾವರಣದ ವಿಶಾಲ ಬಯಲು ರಂಗಮಂದಿರದಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು.
40 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ.
ಕಣ್ಮನ ಸೆಳೆಯುವ ದೀಪಾಲಂಕಾರದ ವೈಭವ.
ವಾಹನ ನಿಲುಗಡೆಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ.
ಮಕ್ಕಳಾದಿಯಾಗಿ ವಿದ್ಯಾರ್ಥಿಗಳು, ಯುವ ಸಮುದಾಯ, ವಯೋವೃದ್ಧರವರೆಗೆ ಗಂಡು-ಹೆಣ್ಣೆಂಬ ಭೇದವಿಲ್ಲದೆ ಕುಟುಂಬ ಸಮೇತ ನೋಡಲೇಬೇಕಾದ ಅಪೂರ್ವ ಸಾಂಸ್ಕೃತಿಕ ಉತ್ಸವ.