Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಆಳ್ವಾಸ್ ವಿರಾಸತ್ ನಲ್ಲಿ ಬಿನ್ನಿ ದಯಾಲ್ – ‘ಗಾನ ವೈಭವ’ ಮತ್ತು ಡಾ.ಎಂ. ಮೋಹನ ಆಳ್ವರ ಪರಿಕಲ್ಪನೆಯ ‘ಆಳ್ವಾಸ್ ಸಾಂಸ್ಕೃತಿಕ ವೈಭವ’
    Bharathanatya

    ಆಳ್ವಾಸ್ ವಿರಾಸತ್ ನಲ್ಲಿ ಬಿನ್ನಿ ದಯಾಲ್ – ‘ಗಾನ ವೈಭವ’ ಮತ್ತು ಡಾ.ಎಂ. ಮೋಹನ ಆಳ್ವರ ಪರಿಕಲ್ಪನೆಯ ‘ಆಳ್ವಾಸ್ ಸಾಂಸ್ಕೃತಿಕ ವೈಭವ’

    January 11, 2024No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ : ಪಡುವಣದಲ್ಲಿ ನೇಸರ ಹೊಂಗಿರಣ ಬೀರಿ ಬೈ ಬೈ ಹೇಳುತ್ತಿದ್ದರೆ, ಇತ್ತ ಮೂಡಣ ದಿಕ್ಕಿನ ಬಿದಿರೆಯ ನಾಡಲ್ಲಿ, ಶಿಕ್ಷಣ- ಸಾಂಸ್ಕೃತಿಕ ಕಾಶಿಯ ಬೀಡಲ್ಲಿ ನಾದ ನಿನಾದ ‘ಗಾನ ವೈಭವ’ ಮೊಳಗಿತು. ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಬೆಂಗಾಲಿ, ಗುಜರಾತಿ ಮತ್ತು ಮರಾಠಿ ಸೇರಿದಂತೆ 19ಕ್ಕೂ ಅಧಿಕ ಭಾಷೆಗಳಲ್ಲಿ 3500 ಹಾಡುಗಳನ್ನು ಹಾಡಿದ ಖ್ಯಾತ ಹಿನ್ನೆಲೆ ಗಾಯಕ ಬಿನ್ನಿ ದಯಾಲ್ ಅವರ ಬಾಲಿವುಡ್, ಪಂಜಾಬ್, ತಮಿಳು ಸೇರಿದಂತೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದ ಸ್ವರ ಮಾಧುರ್ಯಕ್ಕೆ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ತುಂಬಿದ ಪ್ರೇಕ್ಷಕರ ಕರತಾಡನ, ಜಯಕಾರ ಮುಗಿಲು ಮುಟ್ಟಿತು.

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ಆಳ್ವಾಸ್ ವಿರಾಸತ್ ನ ಎರಡನೇ ದಿನ ದಿನಾಂಕ 15-12-2023ರಂದು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿದ ಸಭಾಂಗಣದ ಮುಂಭಾಗದ ಭವ್ಯ ವೇದಿಕೆಯಲ್ಲಿ ಬಿನ್ನಿ ಗಾನದ ಬೆಳಕು ಹರಿಯಿತು.

    ‘ಈ ಹಾಡಲ್ಲಿ ನಾನು ಹೆಚ್ಚು ಮಾತನಾಡಬೇಕಾಗುತ್ತದೆ’ ಎಂದು ಹೇಳಿದ ಅವರು, ರಣಬೀರ್ ಕಪೂರ್ ನಟನೆಯ ‘ ‘ಬತ್ತಮೀಸ್ ದಿಲ್.. ಬತ್ತಮೀಸ್ ದಿಲ್…’ ಹಾಡಿದರು. ಇಡೀ ಸಭಾಂಗಣ ಸ್ವರ ಲೋಕದಂತೆ ಭಾಸವಾಯಿತು. ಶಾರುಕ್ ಖಾನ್ ನಟನೆಯ ‘ದಿಲ್’ ಸಿನಿಮಾದ ‘ ಚೈಯ್ಯಂ ಚೈಯ್ಯಂ .. ಹಾಡಿದಾಗ ಸುಖ್ವಿಂದರ್ ಸಿಂಗ್ ಅವರನ್ನು ನೆನಪಿಸಿಕೊಂಡ ಪ್ರೇಕ್ಷಕರು ರೈಲಿನ ಲಯಕ್ಕೆ ದನಿಗೂಡಿಸಿದರು.

    1982ರಲ್ಲಿ ಮಿಥುನ್ ಚಕ್ರವರ್ತಿ ಹೆಜ್ಜೆ ಹಾಕಿದ ‘ಡಿಸ್ಕೊ ಡ್ಯಾನ್ಸರ್’ ಸಿನಿಮಾದ ರಿಮಿಕ್ಸ್ ‘ಐ ಯಾಮೇ ಡಿಸ್ಕೋ ಡ್ಯಾನ್ಸರ್…’ ಹಾಡಿದಾಗ ವಿದ್ಯಾರ್ಥಿಗಳು ಕೈ ಎತ್ತಿ ನಲಿದರು. ಅದೇ ಲಯವನ್ನು ಮುಂದುವರಿಸಿದ ಅವರು, ‘ಯಾದ್ ಆರಾ ಹೇ…’ ಉಲಿದಾಗ ಎಲ್ಲರೂ ನೆನಪುಗಳ ಲಯಕ್ಕೆ ಜಾರಿದರು. ‘ಬಾತ್ ಬಾಕಿ ಹೇ…’ ಸಾಲಿಗೆ ‘ಹ್ಹಾ ಹ್ಹಾ …’ ಎಂದು ಪ್ರೇಕ್ಷಕರು ಸ್ವರ ಸೇರಿಸಿದರು. ನಂತರ ದೀರ್ಘ ಉಚ್ವಾಸದ ‘ಓಂ ಶಾಂತಿ ಓಂ..’ ಮಾಧುರ್ಯ. ಜೊತೆಯಲ್ಲೇ ‘ತೆರಿ ಉಮರ್ ಕೇ ನವ್ ಜವಾನೊ…’ ಹಾಗೂ ‘ಹೇ ಹಸೀನೋ…’. ಅದರೊಂದಿಗೆ ಅಮಿತಾಭ್ ಬಚ್ಚನ್ ನೆನಪಿಸುವ ‘ಚುಮ್ಮಾ ಚುಮ್ಮಾ ದದೇ ದೇ ಚುಮ್ಮಾ’… ಎಲ್ಲವೂ ರಿಮಿಕ್ಸ್ ವಿತ್ ವೆಸ್ಟರ್ನ್ ಬೀಟ್ಸ್.

    80ರ ದಶಕಗಳ ಹಾಡುಗಳನ್ನು ರಿಮಿಕ್ಸ್ ಮೂಲಕ ಪಾಶ್ಚಾತ್ಯ ಫ್ಯೂಷನ್ ನಲ್ಲಿ ನಿರಂತರವಾಗಿ ಹಾಡಿದಾಗ ವಿದ್ಯಾರ್ಥಿಗಳು ಕುಳಿತಲ್ಲೆ ನಲಿದರು. ‘ಗಿಣ್ ಗಿಣ್ ತಾನಾ… ಲೆಟ್ಸ್ ಡ್ಯಾನ್ಸ್…’. ‘ಯು ನೋ ಇಟ್, ಡಿಸ್ಕೊ ದಿವಾನೆ ಹೇ…’ ಹಾಡಿಗೆ ವಿದ್ಯಾರ್ಥಿಗಳ ಚಪ್ಪಾಳೆ ಸುರಿಮಳೆ. ಪಂಜಾಬಿ ಧಾಟಿಯ ‘ಲಂಡನ್ ತೂ ಮಕ್ ದಾ…’ ಹಾಗೂ ‘ಓ ಘೋರಿ ನಾರಿ ಇಷ್ಕ್ ಮಿಠಾ..’ ಬಳಿಕ ‘ದಿಲ್ ಕಾಲಾ ಚಸ್ಮಾ…’ ರಾಗಕ್ಕೆ ಮಕ್ಕಳು ಅನಂದದ ಕಡಲಲ್ಲಿ ತೇಲಿದರು. ‘ಕಲಾ ಚಸ್ಮಾ…’ ಹಾಡಿಗೆ ಬಿನ್ನಿ ಕನ್ನಡಕ್ಕ ತೆಗೆದು ಕಣ್ಣು ಮಿಟಿಕಿಸಿ, ಕುಡಿ ನೋಟ ಬೀರಿದರು. ಬಳಿಕ ‘ಸಿಂಡ್ರೇಲಾ…’ ಎಂದಾಗ ಅಭಿಮಾನಿಗಳ ಜೋಶ್ ‘ಸಿಂಡ್ರೆಲಾ’ ಎಂದು ಪ್ರತಿಧ್ವನಿಸಿತು. ‘ಊಂಚಿ ಹೇ ಬಿಲ್ಡಿಂಗ್, ಲಿಫ್ಟ್ ತೇರೀ ಬಂದ್ ಹೇ.. ಆಜಾ ಆಜಾ ದಿಲ್ ಬಾಜಾ…’ ಎಂಬಿತ್ಯಾದಿ 90ರ ದಶಕದ ಹಾಡುಗಳು ಸಾಲು ಸಾಲಾಗಿ ಮೊಳಗಿದವು. ‘ಯವ್ವಾ ಯವ್ವಾ…’ ಜೊತೆಯಾಯಿತು.

    ಬಳಿಕ ದಕ್ಷಿಣದ ತಮಿಳಿಗೆ ಬಂದ ಅವರು ಪ್ರಭುದೇವ ಬ್ರೇಕ್ ಡ್ಯಾನ್ಸ್ ಖ್ಯಾತಿಯ. ‘ಕಾದಲನ್’ ಸಿನಿಮಾದ ‘ಮುಕ್ಕಾಲಾ ಮುಕ್ಕಾಬುಲಾ ಓ ಲೈಲಾ’ ಹಾಡು ಹಾಡಿದರು. ಹಾಡಿಗೆ ಹೆಜ್ಜೆಯೂ ಹಾಕಿದರು. ಪ್ರಭುದೇವ್ ಮಾದರಿಯ ಹೆಜ್ಜೆಗಳನ್ನು ಪುನರಾವರ್ತಿಸಿದರು. ಬಳಿಕ ಇಂಗ್ಲಿಷ್ ಶೈಲಿಯಲ್ಲಿ ‘ಲೆಟ್ಸ್ ನಾಚೋ..’ ಹಾಡಿನ ಜೊತೆ ‘ವೈ ಆರ್ ವಿ ಹಿಯರ್” ಎಂದು ಸೇರಿದ ವಿದ್ಯಾರ್ಥಿ ಸಾಗರವನ್ನು ಪ್ರಶ್ನಿಸಿ, ಮತ್ತೂ ಹಲವು ಹಾಡನ್ನು ರಿಮಿಕ್ಸ್ ಮಾಡಿದರು. ಗಾನ ವೈಭವ’ದ ಆರಂಭದಲ್ಲಿ ‘ಜೋ ಚಾ ಹೆ ಉಲ್ ಫಕ್ತ್ ಹೋಗಯಾ…’ ‘ಕ್ಯಾ ಕರೂ ಓ ಲೇಡಿ, ಮೈ ಆದತ್ ಸೇ ಮಜಬೂರ್…’, ‘ ದಿನ್ ಮೇ, ರಾತ್ ಬ್ಯಾಂಗ್ ಬ್ಯಾಂಗ್…’ ‘ಸುಭಾಹ್ ತಕ್…’, ‘ಸೋಚ್ ಗಯೇ…’ ಹಾಗೂ ರಣಬೀರ್ ಕಪೂರ್ ಸಿನಿಮಾದ ‘ವೋ ಲೇಡಿಸ್’ ಹಾಡು ಪುಳಕಿತಗೊಳಿಸಿದವು.

    ಶಾರುಕ್ ಖಾನ್ ನಟನೆಯ “ದಿಲ್’ ಸಿನಿಮಾದ ‘ ಚೈಯ್ಯಂ ಚೈಯ್ಯಂ .. ಹಾಡಿದಾಗ ಸುಖ್ವಿಂದರ್ ಅವರನ್ನು ನೆನಪಿಸಿಕೊಂಡ ಪ್ರೇಕ್ಷಕರು ರೈಲಿನ ಲಯಕ್ಕೆ ದನಿಗೂಡಿಸಿದರು. ‘ಐ ಲವ್ ಯೂ ಗೈಸ್, ಐ ಲವ್ ಆಳ್ವಾಸ್.. ‘ಎಂಜಾಯಿಂಗ್ ಶೋ…’ ಎಂದಾಗಲೆಲ್ಲ ಸಾಗರದ ಅಲೆಯಂತೆ ವಿದ್ಯಾರ್ಥಿಗಳ ಸಡಗರ ಹೊನಲಾಗಿ ಬಂತು. ಕೇರಳ ಮೂಲದ ಅಬುದಾಬಿಯಲ್ಲಿ ಬೆಳೆದ ಬಿನ್ನಿ ಗಾಯನಕ್ಕೆ ಬೇಸ್ ನಲ್ಲಿ ಕಾರ್ಲ್, ಲೀಡ್ ಗಿಟಾರ್ ನಲ್ಲಿ ಜೋಶುವಾ, ಡ್ರಮ್ಸ್ ನಲ್ಲಿ ಡೇವಿಡ್ ಜೋಸೆಫ್, ಪರ್ಕರ್ಷನ್ ನಲ್ಲಿ ಆಲ್ವಿನ್, ಕೀ ಬೋರ್ಡ್ ನಲ್ಲಿ ಅಲೋಕ್, ಟ್ರಂಪೆಟ್ ಮತ್ತು ಸ್ಯಾಕ್ಸೋಫೋನ್ ನಲ್ಲಿ ರಾಹುಲ್ ಸಾಥ್ ನೀಡಿದರು. ಇದಕ್ಕೂ ಮೊದಲು ಕ್ಯಾ. ಬ್ರಿಜೇಶ್ ಚೌಟ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಮುಸ್ತಫಾ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉಪಸ್ಥಿತರಿದ್ದರು.

    ಮಹಿಷಾಸುರ ಮರ್ಧಿನಿಯ ಕಥಾನಕವನ್ನು ಹೊಂದಿದ ಭರತನಾಟ್ಯ ನೃತ್ಯರೂಪಕ ಹಾಗೂ ಪುರುಲಿಯೊ ಹಾಗೂ ಆಂಧ್ರಪ್ರದೇಶದ ಬಂಜಾರ ನೃತ್ಯದ ಮೂಲಕ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಮೆರುಗು ನೀಡಿತು. ದೇಶದ ವಿವಿಧ ಪ್ರದೇಶಗಳನ್ನು ಬಿಂಬಿಸುವ ಈ ಮೂರೂ ಕಲಾ ಪ್ರಕಾರವನ್ನು ಪ್ರಸ್ತುತ ಪಡಿಸಿರುವುದು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. ಇದು ಅಪ್ಪಟ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರ ಪರಿಕಲ್ಪನೆಯ ‘ಆಳ್ವಾಸ್ ಸಾಂಸ್ಕೃತಿಕ ವೈಭವ’.

    ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್ ನಿರ್ದೇಶನದಲ್ಲಿ ಆಳ್ವಾಸ್ ಸಾಂಸ್ಕೃತಿಕ ತಂಡದ 36 ವಿದ್ಯಾರ್ಥಿಗಳು ಮಹಿಷಾಸುರ ಮರ್ಧಿನಿ ಭರತನಾಟ್ಯ ನೃತ್ಯರೂಪಕವನ್ನು ಪ್ರಸ್ತುತ ಪಡಿಸಿದರು. ಬೆಂಗಳೂರಿನ ವಿದ್ವಾನ್ ಜಿ. ಗುರುಮೂರ್ತಿ ಸಂಗೀತ ನೀಡಿದ್ದಾರೆ. ಮಹಿಷಾಸುರ ಮೂರು ಲೋಕಗಳಲ್ಲಿ ತೊಂದರೆ ನೀಡಿ ಋಷಿ ಮುನಿಗಳು ಹಾಗೂ ದೇವಾನುದೇವತೆಗಳಿಗೆ ಹಿಂಸೆ ನೀಡಿದಾಗ ಆದಿಶಕ್ತಿ ಸಿಂಹವಾಹಿನಿಯಾಗಿ ಅನೇಕ ಕೈಗಳಲ್ಲಿ ಆಯುಧಧಾರಿಣಿಯಾಗಿ ಬೇರೆ ಬೇರೆ ರಕ್ಕಸರನ್ನು ಅಲ್ಲದೆ ಪುನಃ ಪುನಃ ಉದ್ಭವವಾಗುವ ರಕ್ತಬೀಜಾಸುರನನ್ನು ಸಂಹರಿಸಿ ಕೊನೆಯಲ್ಲಿ ಮಹಿಷ ರೂಪದಲ್ಲಿದ್ದ ಅಸುರನನ್ನು ಮರ್ಧಿಸುತ್ತಾಳೆ. ಲೋಕಕಲ್ಯಾಣ ಮಾಡುವುದು ಕಥಾ ಹಂದರ. ಮಹಿಷ ಮರ್ಧನದ ಕ್ಲೈಮ್ಯಾಕ್ಸ್ ಅತ್ಯುತ್ತಮವಾಗಿ ಮೂಡಿ ಬಂದು, ಭರತನಾಟ್ಯದ ಭಾವಭಂಗಿಗಳ ನಡುವೆ ಮನೋಜ್ಞ ಅಭಿನಯ ನೀಡಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಗಮನ ಸೆಳೆದರು.

    ವಸ್ತುಗಳಿಗೆ ಕನ್ನಡಿ ಇರಿಸಿದ ಕಸೂತಿ ಕಲೆಯ ಬಂಜಾರ ಧಿರಿಸು ವಿಶ್ವಮಾನ್ಯತೆ ಪಡೆದಿದೆ. ಜಗತ್ತಿನ ಕೆಲವೇ ಕೆಲವು ಪರಾಂಪರಿಕ ಬುಡಕಟ್ಟು ಸಂಸ್ಕೃತಿಗಳ ಪೈಕಿ ಬಂಜಾರವೂ ಒಂದು. ಅವರ ಭಾಷೆ, ಆಚರಣೆ, ಉಡುಪು ಎಲ್ಲವೂ ಅನನ್ಯ. ಅಂತಹ ಬಂಜಾರ ಜನರು ಆಂಧ್ರಪ್ರದೇಶದಲ್ಲಿ ಆಚರಿಸುವ ಸಾಂಪ್ರದಾಯಿಕ ಬಂಜಾರ ನೃತ್ಯವನ್ನು ಸುರೇಶ್ ಕುಮಾರ್ ನಿರ್ದೇಶನದಲ್ಲಿ ಆಳ್ವಾಸ್ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಬಿಂದಿಗೆಯನ್ನು ಹೊತ್ತು, ಕೋಲಾಟ ಮಾಡಿದ ಬಾಲಕಿಯರ ನೃತ್ಯ ಖುಷಿ ನೀಡಿತು.

    ಪುರುಲಿಯೊ ಎಂಬುದು ಪಶ್ಚಿಮ ಬಂಗಾಳದ ಒಂದು ಹಳ್ಳಿಯ ಹೆಸರು. ಈ ಹಳ್ಳಿಯ ಜನಪದೀಯ ಕಲೆಯಲ್ಲಿ (ಅರೆ ಶಾಸ್ತ್ರೀಯ ಎನ್ನಲಾಗುತ್ತದೆ) ಮಹಿಷಾಸುರ ಮರ್ಧಿನಿಯೂ ಪ್ರಮುಖವಾಗಿದೆ. ಇದನ್ನು ಪುರುಲಿಯಾ ಛಾವೋ ಎಂದು ನೃತ್ಯ ರೂಪಕದ ಮೂಲಕ ಪ್ರದರ್ಶನ ಮಾಡುತ್ತಾರೆ. ಈ ಕಥಾನಕದ ದುರ್ಗೆಯ ಸಿಂಹದ ಪಾತ್ರವೂ ಪ್ರಮುಖವಾಗಿದೆ. ಡಾ. ಎಂ.ಮೋಹನ ಆಳ್ವ ಅವರ ಸೃಜನಶೀಲತೆಯಂತೆ ರಂಗ ನಿರ್ದೇಶಕ ಜೀವನ್‌ರಾಂ ಸುಳ್ಯ ಅವರು ಸಿಂಹದ ಒಂದು ಪಾತ್ರವನ್ನೇ ತೆಗೆದುಕೊಂಡು ಇಡೀ ನೃತ್ಯರೂಪಕವನ್ನು ಮರುಸೃಷ್ಟಿಸಿದ್ದಾರೆ. ಆರಂಭದಲ್ಲಿ ಒಂದು ಇದ್ದ ಸಿಂಹವು 30ಕ್ಕೂ ಅಧಿಕವಾಗಿವೆ. ಆಳ್ವರ ಕಲ್ಪನೆಯು ಸಿಂಹಗಳು ಕಸರತ್ತು ಮಾಡುವಂತೆ ಮಾಡಿವೆ. ವಿರಾಸತ್ ವೇದಿಕೆಯಲ್ಲಿ ಸಿಂಹಗಳು ಹೆಜ್ಜೆ ಹಾಕುತ್ತಿದ್ದರೆ, ಇತ್ತ ಸಭಾಂಗಣದಲ್ಲಿ ಕುತೂಹಲದಿಂದ ಪುಟಾಣಿಗಳೂ ಕುಣಿಯುತ್ತಿದ್ದ ಚಿತ್ರಣ ಆಕರ್ಷಕವಾಗಿತ್ತು.

    ವಿರಾಸತ್‌ನ ಭವ್ಯ ವೇದಿಕೆಯಲ್ಲಿ ಮೂರೂ ನೃತ್ಯಗಳು ಭಾರತೀಯ ಜನಪದ ಮತ್ತು ಶಾಸ್ತ್ರೀಯ ಕಲಾ ಪ್ರಕಾರಗಳ ರಂಗು ಹೆಚ್ಚಿಸಿತು. ಭವ್ಯ ದೀಪಾಲಂಕಾರದ ನಡುವಿನ ಸುಮಾರು ಐವತ್ತು ಸಾವಿರ ಆಸನದ ಸಭಾಂಗಣದಲ್ಲಿ ಚುಮು ಚುಮು ಚಳಿಯಲ್ಲಿ ಕುಳಿತ ಪ್ರೇಕ್ಷಕರು ನೃತ್ಯ ವೈಭವಕ್ಕೆ ತಲೆದೂಗಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಅದ್ದೂರಿಯಾಗಿ ಚಾಲನೆಗೊಂಡ ‘ಆಳ್ವಾಸ್ ವಿರಾಸತ್’ನಲ್ಲಿ ಶ್ರದ್ಧಾ ಭಕ್ತಿಯ ಮೆರುಗು ನೀಡಿದ ಸಾಂಸ್ಕೃತಿಕ ರಥ ಸಂಚಲನ
    Next Article ಆಳ್ವಾಸ್ ವಿರಾಸತ್‌ನಲ್ಲಿ ಶ್ರೇಯಾ ಘೋಷಾಲ್ ‘ಭಾವ ಲಹರಿ’ ಮತ್ತು ಸಾಹಸ ನೃತ್ಯ ವೈಭವ ಮೆರೆದ ಆಳ್ವಾಸ್ ವಿದ್ಯಾರ್ಥಿಗಳು
    roovari

    Add Comment Cancel Reply


    Related Posts

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ಆಲಾಪ್’ ಶಾಸ್ತ್ರೀಯ ಸಂಗೀತ ಕಛೇರಿ | ಮೇ 10

    May 7, 2025

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.