ಮಂಗಳೂರು : ರಾಮಕೃಷ್ಣ ಮಿಷನ್ ಮಂಗಳೂರು ಇದರ ಅಮೃತ ವರ್ಷಾಚರಣೆಯನ್ನು ದಿನಾಂಕ 11, 12, 13 ಮತ್ತು 14 ಸೆಪ್ಟೆಂಬರ್ 2025ರಂದು ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ದಿನಾಂಕ 11, 12 ಮತ್ತು 13 ಸೆಪ್ಟೆಂಬರ್ 2025ರಂದು ಪ್ರತಿದಿನ ಬೆಳಗ್ಗೆ 9-00 ಗಂಟೆಗೆ ಶ್ರಾದ್ಧ, ಮೇಧಾ ಮತ್ತು ಪ್ರಜ್ಞಾ ವಿಚಾರ ಸಂಕಿರಣಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ. ದಿನಾಂಕ 14 ಸೆಪ್ಟೆಂಬರ್ 2025ರಂದು 10-00 ಗಂಟೆಗೆ ಅಮೃತ ಭವನ ಹಾಲ್ ನ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಧ್ಯಾಹ್ನ 2-00 ಗಂಟೆಗೆ ‘ಸಂತವಾಣಿ’ ಪಂಡಿತ್ ಆನಂದ ಭಾಟೆ ಇವರಿಂದ ಪ್ರಸ್ತುತಗೊಳ್ಳಲಿದ್ದು, ನರೇಂದ್ರ ನಾಯಕ್ ಹಾರ್ಮೋನಿಯಂನಲ್ಲಿ, ಗುರುಮೂರ್ತಿ ವೈದ್ಯ ಪಖವಾಜ್ ನಲ್ಲಿ, ರೂಪಕ್ ವೈದ್ಯ ತಬಲಾದಲ್ಲಿ ಮತ್ತು ವಿಘ್ನೇಶ್ ನಾಯಕ್ ಮಂಜೂರದಲ್ಲಿ ಸಾಥ್ ನೀಡಲಿದ್ದಾರೆ.