ಕಾಸರಗೋಡು : ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಬೆಳಗಾವಿ ಮತ್ತು ಶಂಪಾ ಪ್ರತಿಷ್ಠಾನ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಆನಂದಕಂದ ಸಾಹಿತ್ಯ ಹಬ್ಬ ಕಾಸರಗೋಡು’ ದಿನಾಂಕ 16-03-2024 ಮತ್ತು 17-03-2024ರಂದು ಕಾಸರಗೋಡಿನ ಚೇವಾರ್ ವಯಾ ಉಪ್ಪಳ, ಕುಡಾಲ್, ಕುಡ್ತಡ್ಕ, ನಿಸರ್ಗ ಧಾಮದಲ್ಲಿ ನಡೆಯಲಿದೆ.
ದಿನಾಂಕ 16-03-2024ರಂದು ಬೆಳಿಗ್ಗೆ 10-00 ಗಂಟೆಗೆ ಈ ಕಾರ್ಯಕ್ರಮವು ಲಕ್ಷ್ಮೀಶ ತೊಳ್ಪಾಡಿಯವರಿಂದ ಉದ್ಘಾಟನೆಗೊಳ್ಳಲಿದೆ. ಗೋಷ್ಠಿ 1ರಲ್ಲಿ ‘ಕವಿತೆ ವಾಚನ, ಗಾಯನ ಮನನ’ ಈ ಕಾರ್ಯಕ್ರಮದಲ್ಲಿ ಯು. ಮಹೇಶ್ವರಿ, ಚಂದ್ರಶೇಖರ ವಸ್ತ್ರದ, ಕಲ್ಲಚ್ಚು ಮಹೇಶ, ಸಿ.ಕೆ. ನಾವಲಗಿ ಮತ್ತು ವಿಭಾಶ್ರೀ ಬೆಳ್ಳಾರೆ ಮತ್ತು ಗೋಷ್ಠಿ 2ರಲ್ಲಿ ‘ಕಥೆ ವಾಚನ – ಮನನ’ ಈ ಕಾರ್ಯಕ್ರಮದಲ್ಲಿ ಪ್ರವೀಣ ಪದ್ಯಾಣ, ಮಹಾದೇವ ಹಡಪದ, ವಿಕಾಸ ಹೊಸಮನಿ ಇವರುಗಳು ಭಾಗವಹಿಸಲಿರುವರು. ಗೋಷ್ಠಿ 3ರಲ್ಲಿ ‘ಕನ್ನಡ ವಿಮರ್ಶೆ ಎತ್ತ ಸಾಗಿದೆ ?’ ಈ ಕಾರ್ಯಕ್ರಮದಲ್ಲಿ ಗಿರೀಶ ಭಟ್ಟ ಅಜಕ್ಕಳ, ಬಾಲಕೃಷ್ಣ ಹೊಸಂಗಡಿ ಮತ್ತು ವಿಕಾಸ ಹೊಸಮನಿ ಚರ್ಚೆಯಲ್ಲಿ ಪಾಲ್ಗೊಳ್ಳುವವರು. ಗೋಷ್ಠಿ 4ರಲ್ಲಿ ‘ಹಿರಿಯ ಲೇಖಕರೊಂದಿಗಿನ ರಸಾನುಭವಗಳು’ ಇದರಲ್ಲಿ ನಾ. ಮೊಗಸಾಲೆ, ರಾಘವೇಂದ್ರ ಪಾಟೀಲ, ಎಂ.ಜಿ. ಹೆಗಡೆ, ಪಿ.ಎನ್. ಮೂಡಿತ್ತಾಯ, ಸುಭಾಷ್ ಪಟ್ಟಾಜೆ, ವಿಕಾಸ ಹೊಸಮನಿ ಇವರುಗಳು ಭಾಗವಹಿಸಲಿರುವರು. ಗೋಷ್ಠಿ 5ರಲ್ಲಿ ರಾಘವೇಂದ್ರ ಪಾಟೀಲರ ‘ಮತ್ತೊಬ್ಬ ಮಾಯಿ’ ಕಥೆಯ ರಂಗ ನಿರೂಪಣೆ ಧಾರವಾಡದ ‘ಆಟ ಮಾಟ’ ತಂಡದ ಮಹಾದೇವ ಹಡಪದ ಮತ್ತು ತಂಡದವರಿಂದ ರಂಗ ಪ್ರಸ್ತುತಿ.
ದಿನಾಂಕ 17-03-2024ರಂದು ಬೆಳಿಗ್ಗೆ 9-45 ಗಂಟೆಗೆ ಗೋಷ್ಠಿ 6ರಲ್ಲಿ ‘ಕನ್ನಡ ಸಂಶೋಧನಾ ಪರಿಕಲ್ಪನೆಗಳ ಸತ್ಯಾಸತ್ಯತೆಗಳು’ ಈ ಕಾರ್ಯಕ್ರಮವನ್ನು ಮೋಹನ ಕುಂಟಾರ್ ನಿರ್ವಹಣೆ ಮಾಡಲಿದ್ದು, ಎ.ವಿ. ನಾವಡ, ಧನಂಜಯ ಕುಂಬಳೆ, ರಾಧಾಕೃಷ್ಣ ಬೆಳ್ಳೂರ, ಗಿರೀಶ ಭಟ್ಟ ಅಜಕ್ಕಳ, ಅರವಿಂದ ಚೊಕ್ಕಾಡಿಯವರು ಭಾಗವಹಿಸಲಿರುವರು. ಗಂಟೆ 11-00ಕ್ಕೆ ಗೋಷ್ಠಿ 7ರಲ್ಲಿ ‘ಆನಂದ ಕಂದರ ನಲ್ವಾಡುಗಳು’ ಧಾರವಾಡದ ಆನಂದ ಕಂದ ಗೆಳೆಯರ ಬಳಗದವರು ಈ ಗೀತ ಗಾಯನವನ್ನು ನಡೆಸಿಕೊಡಲಿರುವರು. ಗೋಷ್ಠಿ 8ರಲ್ಲಿ ವಿಮರ್ಶೆಯ ಹೊರ ಚಾಚುಗಳು – ‘ಪರಿಸರ ವಿಮರ್ಶೆ, ಮಾಧ್ಯಮ ವಿಮರ್ಶೆ, ಭಾಷಣ ಚರ್ಚೆ ವಿಕಾಸ ಹೊಸಮನಿಯವರು ಮಾತನಾಡಲಿದ್ದಾರೆ. ಗೋಷ್ಠಿ 9ರಲ್ಲಿ ‘ಆನಂದ ಕಂದರ ಕಥನ ಸಾಧನೆ’ : ಚರ್ಚೆಯನ್ನು ಪ್ರಮೀಳಾ ಮಾಧವ ನಿರ್ವಹಣೆ ಮಾಡಲಿದ್ದು, ಸುಭಾಷ್ ಪಟ್ಟಾಜೆ, ಪ್ರವೀಣ ಪದ್ಯಾಣ ಮತ್ತು ವಿಕಾಸ ಹೊಸಮನಿ ಇವರುಗಳು ಭಾಗವಹಿಸಲಿರುವರು. ಗೋಷ್ಠಿ 10ರಲ್ಲಿ ಕಥೆ : ‘ವಾಚನ –ಮನನ’ ಮಂಜುನಾಥ ಬಗಲಿ, ಮಹಾದೇವ ಹಡಪದ ಮತ್ತು ಸುಭಾಷ್ ಪಟ್ಟಾಜೆ ಇವರುಗಳು ನಡೆಸಿಕೊಡಲಿದ್ದಾರೆ. ಮಧ್ಯಾಹ್ನ ಗಂಟೆ 2.45ಕ್ಕೆ ಪ್ರಮೀಳಾ ಮಾಧವ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.