Subscribe to Updates

    Get the latest creative news from FooBar about art, design and business.

    What's Hot

    ಕೊಲ್ಯದ ನಾಟ್ಯನಿಕೇತನದ ನೃತ್ಯಾಂಗಣದಲ್ಲಿ ‘ನಾಟ್ಯಮೋಹನ ನವತ್ಯುತ್ಸಹ’ ನೃತ್ಯ ಸರಣಿ 25 | ಜನವರಿ 30

    January 29, 2026

    ಪ್ರಸಿದ್ಧ ಹಾಸ್ಯಗಾರ ಮಹೇಶ ಮಣಿಯಾಣಿಯವರು ‘ವನಜ-ಸುಜನಾ ರಂಗಮನೆ ಪ್ರಶಸ್ತಿ’ಗೆ ಆಯ್ಕೆ

    January 29, 2026

    ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಬಾವಿ ಸಭೆ

    January 29, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಅನಂತ ಹರಿಹರ ಸಂಸ್ಮರಣೆಯಲ್ಲಿ ‘ಅನಂತ ಸ್ವರ ನಮನ’ ಸಂಗೀತೋತ್ಸವ ಆಗಸ್ಟ್ 23ರಿಂದ 25
    Music

    ಅನಂತ ಹರಿಹರ ಸಂಸ್ಮರಣೆಯಲ್ಲಿ ‘ಅನಂತ ಸ್ವರ ನಮನ’ ಸಂಗೀತೋತ್ಸವ ಆಗಸ್ಟ್ 23ರಿಂದ 25

    August 20, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರು ಹಾಗೂ ಶ್ರೋತೃವರ್ಗದ ಕೊಂಡಿಯಾದವರು ಅನಂತ ಹರಿಹರ ಇವರು. ಅನೇಕ ಯುವ ಕಲಾವಿದರಿಗೆ ಸ್ಫೂರ್ತಿಯನ್ನು ತುಂಬಿದವರು, ವೇದಿಕೆಗಳನ್ನೊದಗಿಸಿದ ಯಶಸ್ವಿ ಸಂಘಟಕ, ಸಂಸ್ಕೃತಿಯ ರಾಯಭಾರಿಯಾಗಿ ಎಲ್ಲರ ಮನದಲ್ಲಿ ವಿಶೇಷ ಛಾಪನ್ನು ಮೂಡಿಸಿದವರು ‘ಧಾರವಾಡ ಸಂಗೀತ’ದ ಪರಿಚಾರಕ ಅನಂತ ಹರಿಹರರಾಗಿದ್ದಾರೆ. ಇವರಿಗೆ ಧಾರವಾಡದ ಯುವ-ಪ್ರಬುದ್ಧ ಕಲಾವಿದರು ಮೂರು ದಿನ ನಡೆಯುವ ಸಂಗೀತೋತ್ಸವದ ಮೂಲಕ ನಮನ ಸಲ್ಲಿಸಲಿದ್ದಾರೆ. ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಪ್ರೇರಿತ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳ ಜಂಟಿಯಾಗಿ ‘ಅನಂತ ಸ್ವರ ನಮನ’ ಮೂರು ದಿನಗಳ ಈ ಸಂಗೀತೋತ್ಸವವನ್ನು ಆಯೋಜಿಸಿವೆ.

    ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ದಿನಾಂಕ 23-08-2024ರಿಂದ 25-08-2024ರವರೆಗೆ ಪ್ರತಿದಿನ ಸಂಜೆ ಗಾಯನ-ವಾದನಗಳ ನಿನಾದ ರಿಂಗಣಿಸಲಿದೆ. ಈ ಸಂಗೀತೋತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ, ಬೆಂಗಳೂರಿನ ನಿತೀನ ಢವಳೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಹಾಗೂ ಕ್ಯಾನರಾ ಬ್ಯಾಂಕ್ ಕೈಜೋಡಿಸಿವೆ.

    ದಿನಾಂಕ 23 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಸಂಗೀತೋತ್ಸವದ ಉದ್ಘಾಟನಾ ಸಮಾರಂಭ ಜರುಗಲಿದೆ. ಖ್ಯಾತನಾಮ ಕಲಾವಿದರಾದ ಪದ್ಮಶ್ರೀ ಎಂ. ವೆಂಕಟೇಶಕುಮಾರ, ಪಂಡಿತ್ ಗಣಪತಿ ಭಟ್ ಹಾಸಣಗಿ, ಪಂಡಿತ್ ಶ್ರೀನಿವಾಸ ಜೋಶಿ, ಪಂಡಿತ್ ಕೈವಲ್ಯಕುಮಾರ ಗುರವ, ಶಾಸಕ ಅರವಿಂದ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಚೆನ್ನೂರ ಹಾಗೂ ಕ್ಷಮತಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿನಾಂಕ 25 ಆಗಸ್ಟ್ 2024ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಪ್ರಹ್ಲಾದ ಜೋಶಿ, ಆಹಾರ ಮತ್ತು ಸರಬರಾಜು ಹಾಗೂ ನವೀಕರಿಸಬಹುದಾದ ಇಂಧನ ಸಚಿವರು, ಭಾರತ ಸರಕಾರ, ಶ್ರೀ ಈರೇಶ ಬ. ಅಂಚಟಗೇರಿ, ಪಂಡಿತ್ ಶ್ರೀಪಾದ ಹೆಗಡೆ ಕಂಪ್ಲಿ ಹಾಗೂ ಹಿರಿಯ ವಯೋಲಿನ್ ವಾದಕ ಪಂಡಿತ್ ಬಿ.ಎಸ್. ಮಠ ಅವರು ಭಾಗವಹಿಸಲಿದ್ದಾರೆ.

    ದಿನಾಂಕ 23 ಆಗಸ್ಟ್ 2024ರಂದು ಹುಬ್ಬಳ್ಳಿಯ ಸುಜಯೀಂದ್ರ ಕುಲಕರ್ಣಿ, ಹುಬ್ಬಳ್ಳಿ-ನವನಗರದ ಶುಭಾಂಗಿ ಜಾಧವ, ಧಾರವಾಡದ ಡಾ. ವಿಜಯ್ ಕುಮಾರ್ ಪಾಟೀಲ ಇವರಿಂದ ಗಾನಸುಧೆ ಹರಿದುಬರಲಿದೆ. ದಿನಾಂಕ 24 ಆಗಸ್ಟ್ 2024ರಂದು ಹುಬ್ಬಳ್ಳಿಯ ಪಂಡಿತ್ ಕೃಷ್ಣೇಂದ್ರ ವಾಡೀಕರ ಹಾಗೂ ಧಾರವಾಡದ ಅಯ್ಯಪ್ಪಯ್ಯ ಹಲಗಲಿಮಠ ಇವರ ಗಾಯನ ಬೆಂಗಳೂರಿನ ಸರಫರಾಜ್ ಖಾನ್ ಇವರ ಸಾರಂಗಿ ವಾದನ ಹಾಗೂ ಶ್ರೀಮತಿ ವೀಣಾ ಮಠ ಅವರಿಂದ ವಯೋಲಿನ್ ವಾದನ ಝೇಂಕರಿಸಲಿದೆ. ದಿನಾಂಕ 25 ಆಗಸ್ಟ್ 2024ರಂದು ಗಾಯನ ಹಾಗೂ ಸಿತಾರ ವಾದನಗಳ ನಿನಾದ ಹರಿದುಬರಲಿದೆ. ಹುಬ್ಬಳ್ಳಿ ನಿಖಿಲ್ ಜೋಶಿ, ಧಾರವಾಡದ ಉ. ಮೊಹಸೀನ್ ಖಾನ್ ಅವರಿಂದ ಸಿತಾರವಾದನ ಹಾಗೂ ಬೆಂಗಳೂರಿನ ಶಿವಾನಿ ಮಿರಜಕರ ಜೈನ್ ಹಾಗೂ ಧಾರವಾಡದ ಕುಮಾರ ಮರಡೂರ ಇವರಿಂದ ಗಾನಸುಧೆ ರಿಂಗಣಿಸಲಿದೆ.

    ಮೂರು ದಿನಗಳ ಈ ಸಂಗೀತೋತ್ಸವದಲ್ಲಿ ಬೆಂಗಳೂರಿನ ಕೇಶವ ಜೋಶಿ, ಧಾರವಾಡದ ಉ. ನಿಸ್ಸಾರ ಅಹ್ಮದ, ಶ್ರೀಧರ ಮಾಂಡ್ರೆ, ಡಾ. ಶ್ರೀಹರಿ ದಿಗ್ಗಾವಿ, ಜಯತೀರ್ಥ ಪಂಚಮುಖಿ, ಅಕ್ಷಯ ಭಟ್ಟ, ಹೇಮಂತ ಜೋಶಿ ತಬಲಾ ಸಾಥ್ ನೀಡಲಿದ್ದಾರೆ. ಸತೀಶ ಭಟ್ಟ ಹೆಗ್ಗಾರ, ಸಾರಂಗ ಕುಲಕರ್ಣಿ, ಬಸವರಾಜ ಹಿರೇಮಠ, ವಿನೋದ ಪಾಟೀಲ ಅವರು ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ. ಮೂರು ದಿನಗಳ ಸಂಗೀತೋತ್ಸವದ ನೇರಪ್ರಸಾರವನ್ನು https://www.facebook.com/vividlipi/live ಹಾಗೂ https://www.youtube.com/vividlipi/live ಮಾಡಲಿವೆ.

    Share. Facebook Twitter Pinterest LinkedIn Tumblr WhatsApp Email
    Previous Articleಕಯ್ಯಾರರ ‘ಏರುತಿಹುದು ಹಾರುತಿಹುದು…’ ಹೊಸ ಹಾಡು ಬಿಡುಗಡೆ
    Next Article ಭರವಸೆಯ ನೃತ್ಯ ಕಲಾವಿದೆ ಧೃತಿ ರಾಮಚಂದ್ರ ರಂಗಪ್ರವೇಶ
    roovari

    Comments are closed.

    Related Posts

    ಕೊಲ್ಯದ ನಾಟ್ಯನಿಕೇತನದ ನೃತ್ಯಾಂಗಣದಲ್ಲಿ ‘ನಾಟ್ಯಮೋಹನ ನವತ್ಯುತ್ಸಹ’ ನೃತ್ಯ ಸರಣಿ 25 | ಜನವರಿ 30

    January 29, 2026

    ಉರ್ವ ಅಂಬೇಡ್ಕರ್ ಭವನದಲ್ಲಿ ‘ಬಸಂತ್ ಉತ್ಸವ್’ ಸಂಗೀತ ಕಾರ್ಯಕ್ರಮ | ಫೆಬ್ರುವರಿ 01

    January 29, 2026

    ನೃತ್ಯ ವಿಮರ್ಶೆ | ಹೃದಯಸ್ಪರ್ಶೀ ರೂಪಕಗಳ ‘ಬಹುಳ’ ನೃತ್ಯೋತ್ಸವ

    January 29, 2026

    ಮಂಗಳೂರಿನ ಪುರಭವನದಲ್ಲಿ ‘ಕಾಣದ ಕಡಲಿಗೆ’ ಗಾನದಲೆಗಳ ಮಧುರ ಸಂಜೆ | ಜನವರಿ 30 

    January 28, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.