ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗ ಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-90’ ಕಾರ್ಯಕ್ರಮದಡಿಯಲ್ಲಿ ನೀನಾಸಂ ಹೆಗ್ಗೋಡು ತಿರುಗಾಟದ ನಾಟಕ ಪ್ರದರ್ಶನ ದಿನಾಂಕ 27 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಭಾರತದ ಮಾಜಿ ಪ್ರಧಾನ ಮಂತ್ರಿ ಶ್ರೀ ಮನಮೋಹನ್ ಸಿಂಗ್ ಇವರಿಗೆ ಪುಷ್ಪನಮನ ಸಲ್ಲಿಸಿದ ಸಿನ್ಸ್ 1999 ಶ್ವೇತಯಾನದ ಕಾರ್ಯಾಧ್ಯಕ್ಷ ಸುಜಯ್ ಶೆಟ್ಟಿ ಮಾತನಾಡಿ “ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ ಹಾಗೂ ಅಧಿಕಾರಿಯಾಗಿದ್ದ ಮನಮೋಹನ್ ಸಿಂಗ್ 10 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿ, ದೇಶದ ಆರ್ಥಿಕ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿಸಿದವರು. ಸಂಸತ್ತಿನಲ್ಲಿ ಅದ್ಭುತ ಮಧ್ಯಸ್ಥಿಕೆಯನ್ನು ವಹಿಸಿ, ಜನರ ಜೀವನವನ್ನು ಸುಧಾರಿಸಲು ವ್ಯಾಪಕ ಪ್ರಯತ್ನ ಮಾಡಿದವರು. ಭಾರತವನ್ನು ಅಪಾರ ಬುದ್ಧಿವಂತಿಕೆಯಿಂದ, ಸಮಗ್ರತೆಯಿಂದ ಮುನ್ನಡೆಸಿ ಇದೀಗ ಅಗಲಿರುವುದು ಅತೀವ ನೋವು ತಂದಿದೆ.” ಎಂದರು.
ಉಪನ್ಯಾಸಕ ಮೋಹನ್‌ಚಂದ್ರ ಪಂಜಿಗಾರು, ಮುಖ್ಯೋಪಾಧ್ಯಾಯ ದಿವಾಕರ್ ರಾವ್, ಉಪನ್ಯಾಸಕ ಕಿಶೋರ್ ಹಂದೆ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನೀನಾಸಂ ತಿರುಗಾಟದ ನಾಟಕ ‘ಅಂಕದ ಪರದೆ’ ಪ್ರದರ್ಶನ ಕಂಡಿತು.