Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನಲ್ಲಿ ಕಲಾಭಿ ಯಕ್ಷಗಾನ ಅಧ್ಯಯನ ಕೇಂದ್ರ ಆರಂಭ

    June 9, 2025

    ಲೋಕರ್ಪಣೆಗೊಂಡ ‘ಕನ್ನಡಿಯಲ್ಲಿ ಕನ್ನಡಿಗ’ ಇದರ 3 ಮತ್ತು 4ನೇ ಸಂಚಿಕೆ

    June 9, 2025

    ಬಡಿಯಡ್ಕದಲ್ಲಿ ಪ್ರಾರಂಭಗೊಂಡ ಯಕ್ಷಗಾನ ತರಬೇತಿ

    June 9, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪ್ರಸಾರ ಭಾರತಿಯಿಂದ ಎ-ಗ್ರೇಡ್ ಮಾನ್ಯತೆ ಪಡೆದ ಅಂಕುಶ್ ಎನ್. ನಾಯಕ್
    Music

    ಪ್ರಸಾರ ಭಾರತಿಯಿಂದ ಎ-ಗ್ರೇಡ್ ಮಾನ್ಯತೆ ಪಡೆದ ಅಂಕುಶ್ ಎನ್. ನಾಯಕ್

    December 27, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ದೇಶದ ಹೆಮ್ಮೆಯ ಯುವ ಸಿತಾರ್ ವಾದಕ ಮಂಗಳೂರಿನ ಅಂಕುಶ್ ಎನ್. ನಾಯಕ್ ಇವರು ಹಿಂದೂಸ್ತಾನಿ ಶಾಸ್ತ್ರೀಯ ವಾದ್ಯ ವಿಭಾಗದಲ್ಲಿ ಪ್ರಸಾರ ಭಾರತಿಯಿಂದ ಎ-ಗ್ರೇಡ್ ಮಾನ್ಯತೆ ಪಡೆದಿದ್ದಾರೆ.

    ದೂರದರ್ಶನ ಹಾಗೂ ಆಕಾಶವಾಣಿಯಿಂದ ಎ-ಗ್ರೇಡ್ ಪಡೆಯುವುದು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಅತ್ಯುನ್ನತ ಮಟ್ಟದ ಕಲಾ ಶ್ರೇಷ್ಠತೆ ಹಾಗೂ ಮಾನ್ಯತೆಯಾಗಿದೆ. ಈ ಮೂಲಕ ಪ್ರಸಾರ ಭಾರತಿಯ ಸಹಯೋಗದೊಂದಿಗೆ ನಡೆಯುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಗೀತ ವೇದಿಕೆಗಳಿಗೆ ನುಡಿಸುವ ಅರ್ಹತೆಯನ್ನು ಅಂಕುಶ್ ಎನ್. ನಾಯಕ್ ಪಡೆದಿದ್ದಾರೆ.

    ಈ ಪ್ರಮಾಣೀಕರಣವನ್ನು ಶೇ. 10ಕ್ಕಿಂತ ಕಡಿಮೆ ಪ್ರದರ್ಶನ ಕಲಾವಿದರಿಗೆ ಸಾಮಾನ್ಯವಾಗಿ ನೀಡಲಾಗುತ್ತದೆ. ಇದು ಒಬ್ಬರ ಸಂಗೀತ ವೃತ್ತಿ ಜೀವನದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಸಂಗೀತದ ಪ್ರಕಾರಗಳಲ್ಲಿ ಸಾರ್ವಕಾಲಿಕ ಶ್ರೇಷ್ಠತೆಗಾಗಿ ನಿರಂತರವಾಗಿ ಅಧ್ಯಯನ ನಡೆಸಿ, ಆ ಮೂಲಕ ಸಂಗೀತಕ್ಕಾಗಿ ಜೀವನ ಸಮರ್ಪಣೆ ಮಾಡಿ, ಸಂಗೀತದ ಪಾಂಡಿತ್ಯ ಸಾಧನೆಗೆ ಈ ಗ್ರೇಡ್ ಸಾಕ್ಷಿಯಾಗಿರುತ್ತದೆ.

    ಪ್ರಸ್ತುತ ಅಂಕುಶ್ ಎನ್. ನಾಯಕ್ ಇವರು ಮಂಗಳೂರಿನ ಎಕ್ಸಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕರಾಗಿದ್ದಾರೆ. ಧಾರವಾಡ ಘರಾನಾದ ಆರನೇ ತಲೆಮಾರಿನ ಖಾಂದಾನಿ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಅವರ ಶಿಷ್ಯರಾಗಿರುವ ಅಂಕುಶ್ ಎನ್. ನಾಯಕ್ ಇವರು ಗುರುವಿನ ಮಾರ್ಗದರ್ಶನದಂತೆ ಗುರಿಯನ್ನು ಮುಂದಿಟ್ಟುಕೊಂಡು ಬಾಲ್ಯದಿಂದಲೇ ಸಿತಾರ್‌ನ ತಂತಿಗಳನ್ನು ಬೆರಳಿನ ತುದಿಗಳಲ್ಲಿ ಮೀಟಿದ ಕಲಾವಿದ. 9ನೇ ವಯಸ್ಸಿನಲ್ಲಿ ಸಿತಾರ್ ಕಲಿಯಲು ಆರಂಭಿಸಿದ ಇವರು ಸಾಂಪ್ರದಾಯಿಕ ಉತ್ತರಾದಿ ಸಂಗೀತ ಕಚೇರಿಯೊಂದಿಗೆ ಫ್ಯೂಷನ್ ತಂಡವನ್ನು ಕಟ್ಟಿಕೊಂಡು, ದೇಶ ವಿದೇಶದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಅಂಕುಶ್ ಇವರು ಘಟಂ ಮಾಂತ್ರಿಕ ವಿದ್ವಾನ್ ತಿರುಚ್ಚಿ ಕೆ. ಆರ್. ಕುಮಾರ್ ಅವರಿಂದ ಕರ್ನಾಟಕ ಸಂಗೀತ ತಾಳ ಪದ್ಧತಿಯ ಪಾಠ ಹಾಗೂ ಸರೋದ್ ಕಲಾವಿದ ಪಂ. ಬುದ್ಧದೇವ್ ದಾಸ್ ಗುಪ್ತಾ ಅವರಿಂದಲೂ ತರಬೇತಿ ಪಡೆದಿದ್ದಾರೆ.

    ಇವರು ಇಂಟರ್ ನ್ಯಾಷನಲ್ ಫೌಂಡೇಶನ್ ಫಾರ್ ಫೈನ್ ಆರ್ಟ್ಸ್ ನೀಡುವ ಪ್ರತಿಷ್ಠಿತ ‘ರವಿ ಕೊಪ್ಪಿಕರ್ ಪ್ರಶಸ್ತಿ’ ಮತ್ತು ‘ಅವಿನಾಶ್ ಹೆಬ್ಬಾರ್ ಸ್ಮಾರಕ ಯುವ ಪುರಸ್ಕಾರ’, ದಕ್ಷಿಣ ಕನ್ನಡ ‘ರಾಜ್ಯೋತ್ಸವ ಪ್ರಶಸ್ತಿ’ ಮತ್ತು ‘ಕಲಾ ಅಪರಂಜಿ ಪ್ರಶಸ್ತಿ’ ಮುಂತಾದ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

    ಅಮೆರಿಕದ ಅರಿಜೋನಾ ವಿಶ್ವವಿದ್ಯಾಲಯದಿಂದ ಮೆಟೀರಿಯಲ್ಸ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಎಂ. ಎಸ್. ಪದವಿ ಮತ್ತು ಸುರತ್ಕಲ್‌ನ ಎನ್‌. ಐ. ಟಿ. ಕೆ. ಯಿಂದ ಮೆಟಲರ್ಜಿಕಲ್ ಮತ್ತು ಮೆಟೀರಿಯಲ್ಸ್ ಎಂಜಿನಿಯರಿಂಗ್‌ನಲ್ಲಿ ಬಿ. ಟೆಕ್ ಪದವಿ ಪಡೆದಿದ್ದಾರೆ. ವರ್ಜೀನಿಯಾ ವಿಶ್ವವಿದ್ಯಾಲಯದ ಡಾರ್ಡನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಡಿಜಿಟಲ್ ಟ್ರಾನ್ಸ್ಫಾರ್ಮೇಷನ್‌ನಲ್ಲಿ ಪ್ರಮಾಣಪತ್ರವನ್ನು ಪಡೆದಿದ್ದಾರೆ

    Share. Facebook Twitter Pinterest LinkedIn Tumblr WhatsApp Email
    Previous Articleಬೆಳಗಾವಿಯಲ್ಲಿ ಡಾ. ಡಿ.ಎಸ್. ಕರ್ಕಿಯವರ ಜನ್ಮ ದಿನೋತ್ಸವ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ | ಡಿಸೆಂಬರ್ 29
    Next Article ಲೀಲಾವತಿ ಬೈಪಾಡಿತ್ತಾಯರಿಗೆ ‘ಗಾನ ನಮನ’
    roovari

    Add Comment Cancel Reply


    Related Posts

    ಕಾಸರಗೋಡಿನ ಕನ್ನಡ ಭವನದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ

    June 9, 2025

    ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ-3’ ಕೊಂಕಣಿ ಕವಿಗೋಷ್ಟಿ

    June 9, 2025

    ನಾಡೋಜ ಡಾ. ಸಿದ್ಧಲಿಂಗಯ್ಯನವರ ಪರಿನಿಬ್ಬಾಣ ಸ್ಮರಣಾ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣ | ಜೂನ್ 11

    June 9, 2025

    ಮೈಸೂರಿನಲ್ಲಿ ‘ರಾಜ್ಯಮಟ್ಟದ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ -2025’ | ಜೂನ್ 08

    June 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.