ಬೆಂಗಳೂರು : ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2022ನೇ 2023ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2023ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ ಹದಿನೆಂಟನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2024ಕ್ಕೆ ಶಿಲ್ಪಕಲಾ ಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಿರುತ್ತದೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಈ ಕೆಳಕಂಡಂತೆ ಶಿಲ್ಪಿಗಳನ್ನು 2022ನೇ ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿರುತ್ತದೆ. ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.50,000/- ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
2022ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು
1. ಶ್ರೀ ವೀರಭದ್ರಪ್ಪ ಕಾಳಪ್ಪ ಕವಲೂರು (ಸಂಪ್ರದಾಯ ಶಿಲ್ಪ) – ಗದಗ ಜಿಲ್ಲೆ
2. ಶ್ರೀ ಎಸ್.ಪಿ. ಪಣಿಯಾಚಾರ್ (ಸಂಪ್ರದಾಯ ಶಿಲ್ಪ) – ಚಿಕ್ಕಮಗಳೂರು ಜಿಲ್ಲೆ
3. ಶ್ರೀ ಬನಪ್ಪ ಬಡಿಗೇರ (ಜಾನಪದ ಶಿಲ್ಪ) – ಯಾದಗಿರಿ ಜಿಲ್ಲೆ
4. ಶ್ರೀ ಗೋಪಿನಾಥ್ ಎಸ್. (ಸಮಕಾಲೀನ ಶಿಲ್ಪ) – ಬೆಂಗಳೂರು
5. ಶ್ರೀ ಸಿ.ವಿ. ರಾಮಕೃಷ್ಣ (ಸಿಮೆಂಟ್ ಶಿಲ್ಪ) – ಶಿವಮೊಗ್ಗ ಜಿಲ್ಲೆ
2023ನೇ ಸಾಲಿನ ಗೌರವ ಪ್ರಶಸ್ತಿ, ಪುರಸ್ಕೃತರು
1. ಶ್ರೀ ಅಲ್ಲಿಸಾಬ್ ಸೈ ನಧಾಪ್ (ಸಂಪ್ರದಾಯ ಶಿಲ್ಪ) – ಬಾಗಲಕೋಟೆ ಜಿಲ್ಲೆ
2. ಶ್ರೀ ಮಾನಪ್ಪ ಷಣ್ಮುಖಪ್ಪ ಬಡಿಗೇರ (ಸಂಪ್ರದಾಯ ಶಿಲ್ಪ) – ಹಾವೇರಿ ಜಿಲ್ಲೆ
3. ಶ್ರೀ ವೀರಣ್ಣ ಶಿಲ್ಪಿ (ಸಂಪ್ರದಾಯ ಶಿಲ್ಪ) – ಕಲಬುರಗಿ ಜಿಲ್ಲೆ
4. ಶ್ರೀಮತಿ ಶಾಂತಮಣಿ ಎಂ. (ಸಮಕಾಲೀನ ಶಿಲ್ಪ) – ಬೆಂಗಳೂರು
5. ಶ್ರೀ ಟಿ. ಶ್ರೀನಿವಾಸ್ (ಸಿಮೆಂಟ್ ಶಿಲ್ಪ) – ದಾವಣಗೆರೆ ಜಿಲ್ಲೆ
ಸರ್ವ ಸದಸ್ಯರ ಸಭೆಯಲ್ಲಿ ಈ ಕೆಳಕಂಡಂತೆ ಶಿಲ್ಪಿಗಳನ್ನು 2023ನೇ ಸಾಲಿನ ‘ಶಿಲ್ಪಶ್ರೀ ಪ್ರಶಸ್ತಿ’ ಸರ್ವಾನುಮತದಿಂದ ಆಯ್ಕೆ ಮಾಡಲಾಗಿರುತ್ತದೆ. ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.25,000/- ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
2023ನೇ ಸಾಲಿನ ‘ಶಿಲ್ಪಶ್ರೀ ಪ್ರಶಸ್ತಿ’ ಪುರಸ್ಕೃತರು
1. ಶ್ರೀ ಬಸವರಾಜ್ ಕೆ. ಮಾಯಾಚಾರಿ – ವಿಜಯಪುರ ಜಿಲ್ಲೆ
2. ಶ್ರೀ ಮಹೇಶ್‌ಕುಮಾರ್ ಡಿ. ತಳವಾರ್ – ಕಲಬುರಗಿ ಜಿಲ್ಲೆ
3. ಶ್ರೀ ಸುರೇಶ್ ಎಸ್. ಕಮ್ಮಾರ – ಧಾರವಾಡ ಜಿಲ್ಲೆ
4. ಶ್ರೀ ಬಾಬುಚರಣ್ ಎನ್.ಕೆ. – ಚಿತ್ರದುರ್ಗ ಜಿಲ್ಲೆ
5. ಶ್ರೀ ಮರಿಯಪ್ಪ ಡಿ. ಹೊನ್ನಮ್ಮನವರ್ – ಹಾವೇರಿ ಜಿಲ್ಲೆ
6. ಶ್ರೀ ಶ್ರೀಧರಮೂರ್ತಿ ಕೆ. – ಶಿವಮೊಗ್ಗ ಜಿಲ್ಲೆ
7. ಶ್ರೀ ಹೆಚ್.ಕೆ. ಅಣ್ಣಯ್ಯಚಾರ್ – ಮಂಡ್ಯ ಜಿಲ್ಲೆ
8. ಶ್ರೀ ಆರ್. ವೇಣುಗೋಪಾಲ್ – ಬೆಂಗಳೂರು
9. ಶ್ರೀ ರಘು ಎಂ. – ಬೆಂಗಳೂರು ಗ್ರಾಮಾಂತರ ಜಿಲ್ಲೆ
10. ವಿಚಾರ್ ಬಿ.ಎನ್. – ಮೈಸೂರು ಜಿಲ್ಲೆ
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಹದಿನೆಂಟನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2024ಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬಂದಂತಹ ಸಾಂಪ್ರದಾಯಿಕ ಮತ್ತು ಸಮಕಾಲೀನ, ಜಾನಪದ ಶೈಲಿಯ ಕಲಾಕೃತಿಗಳಲ್ಲಿ ಆಯ್ಕೆ ಮತ್ತು ನಿರ್ಣಾಯಕ ಸಮಿತಿಯು ಈ ಕೆಳಕಂಡ 06 ಶಿಲ್ಪಿಗಳ ಶಿಲ್ಪಕಲಾಕೃತಿಗಳನ್ನು ಅಕಾಡೆಮಿ ಬಹುಮಾನಕ್ಕೆ ಆಯ್ಕೆ ಮಾಡಲಾಗಿದ್ದು ಹಾಗೂ ಮೈಸೂರಿನ ರಾಮ್‌ಸನ್ಸ್ ಕಲಾ ಪ್ರತಿಷ್ಠಾನ, ಶ್ರೀ ಮನೋಹರ ಕಾಳಪ್ಪ ಪತ್ತಾರ, ವಿಜಯಪುರ ಇವರು ಶಿಲ್ಪಕಲಾ ಅಕಾಡೆಮಿಯು ಏರ್ಪಡಿಸುವ ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ ಬಂದಿರುವ ಶಿಲ್ಪಕಲಾಕೃತಿಗಳಲ್ಲಿ ತಲಾ ಒಂದೊಂದು ಶಿಲ್ಪಕಲಾಕೃತಿಗೆ ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.
ಹದಿನೆಂಟನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ – 2024ಕ್ಕೆ ಬಹುಮಾನ ವಿಜೇತರ ವಿವರ
ಶಿಲ್ಪಿಗಳ ಹೆಸರು ಶೀರ್ಷಿಕೆ ಮಾಧ್ಯಮ
1. ಶ್ರೀ ನಾರಾಯಣ (ಮೈಸೂರು ಜಿಲ್ಲೆ) – ಹಂಸವಾಹಿನಿ – ಕಲ್ಲು
2. ಶ್ರೀ ಶಶಿಧರ ಆಚಾರ್ಯ (ದಕ್ಷಿಣ ಕನ್ನಡ ಜಿಲ್ಲೆ) – ಕನ್ನಿಕಾ ಪರಮೇಶ್ವರಿ – ಮರ
3. ಶ್ರೀ ಎಸ್. ಮಹೇಶ್ (ಮೈಸೂರು ಜಿಲ್ಲೆ) – ಬಾಲರಾಮ – ಮರ
4. ಶ್ರೀ ವಿನ್ಯಾಸ್ ಎಸ್. ಕಾಟೇನಹಳ್ಳಿ (ಬೆಂಗಳೂರು) – ನಮ್ಮ ಯಾತ್ರೆ – ಟೆರ್ರಾಕೋಟಾ
5. ಶ್ರೀ ಹರಾಳು ಪತ್ತಾರಿ ಪ್ರಮೋದ್‌ಕುಮಾರ್ (ವಿಜಯನಗರಜಿಲ್ಲೆ) – ಗೋಲ್ಡನ್ ನಂದಿ – ಕಂಚು
6. ಶ್ರೀ ಚೇತನ್‌ಕುಮಾರ್ ಹಳ್ಳಿಹೊಳೆ (ಉಡುಪಿ ಜಿಲ್ಲೆ) – ಮಧುರ – ಕಲ್ಲು, ರಬ್ಬರ್
ರಾಮ್‌ಸನ್ಸ್ ಕಲಾ ಪ್ರತಿಷ್ಠಾನ ಮೈಸೂರು, ಇವರ ಬಹುಮಾನಕ್ಕೆ ಆಯ್ಕೆಯಾದ ಶಿಲ್ಪಕಲಾ ಕೃತಿ
ಶ್ರೀ ಮಂಜುನಾಥ್ ಆರ್. (ತುಮಕೂರು ಜಿಲ್ಲೆ) – ಹೊಯ್ಸಳ ಶೈಲಿ ಗಣಪತಿ – ಕಲ್ಲು
ಶ್ರೀ ಮನೋಹರ ಕಾಳಪ್ಪ ಪತ್ತಾರ ವಿಜಯಪುರ ಇವರ ಬಹುಮಾನಕ್ಕೆ ಆಯ್ಕೆಯಾದ ಶಿಲ್ಪಕಲಾ ಕೃತಿ
ಶ್ರೀ ಪ್ರಕಾಶ ಆಚಾರ್ಯ (ಉಡುಪಿ ಜಿಲ್ಲೆ) – ಧನ್ವಂತರಿ – ಮರ
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2022ನೇ 2023ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2023ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ ಹದಿನೆಂಟನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2024ರ ಬಹುಮಾನ ವಿತರಣಾ ಸಮಾರಂಭ ಹಾಗೂ ಶಿಲ್ಪಕಲಾ ಪ್ರದರ್ಶನವನ್ನು ಡಿಸೆಂಬರ್-2024ರ ಮಾಹೆಯಲ್ಲಿ ಏರ್ಪಡಿಸಲಾಗುವುದು.