ಶಿವಮೊಗ್ಗ : ಎಸ್. ಬಂಗಾರಪ್ಪ ವಿಚಾರ ವೇದಿಕೆ ನೀಡುವ 2025ನೇ ಸಾಲಿನ ‘ಸಾಹಿತ್ಯ ಬಂಗಾರ’ ಪ್ರಶಸ್ತಿಗೆ ಮೈಸೂರಿನ ಕಾಳೇಗೌಡ ನಾಗವಾರ, ‘ಜಾನಪದ ಬಂಗಾರ’ ಪ್ರಶಸ್ತಿಗೆ ಬೆಳಗಾವಿಯ ರಾಧಾಬಾಯಿ ಮಾದರ, ‘ರಂಗ ಬಂಗಾರ’ ಪ್ರಶಸ್ತಿಗೆ ಕಲಬುರಗಿಯ ಜೇವರ್ಗಿ ರಾಜಣ್ಣ ಹಾಗೂ ‘ಸೇವಾ ಬಂಗಾರ’ ಪ್ರಶಸ್ತಿಗೆ ಬೆಂಗಳೂರಿನ ಶ್ರೀತೋಟದಪ್ಪ ಧರ್ಮಸಂಸ್ಥೆ ಆಯ್ಕೆಯಾಗಿದೆ.
ಪ್ರಶಸ್ತಿಯು ತಲಾ ರೂ.1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಎಸ್. ಬಂಗಾರಪ್ಪ ವಿಚಾರ ವೇದಿಕೆ ಹಾಗೂ ಬಂಗಾರಪ್ಪ ಪ್ರತಿಷ್ಠಾನದ ಸಹಯೋಗದಲ್ಲಿ ದಿನಾಂಕ 26 ಅಕ್ಟೋಬರ್ 2025ರಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ವೇದಿಕೆಯ ಪ್ರಧಾನ ಸಂಚಾಲಕ ಕೆ.ವಿ. ನಾಗರಾಜಮೂರ್ತಿತಿಳಿಸಿದ್ದಾರೆ.