Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 19

    May 14, 2025

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಬೆಂಗಳೂರಿನ ವಿವಿಧೆಡೆ ಹಾಗೂ ಮೈಸೂರಿನಲ್ಲಿ ಯಕ್ಷಗಾನ ಪ್ರದರ್ಶನ | ಮೇ 17ರಿಂದ 22

    May 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಆಯ್ಕೆಯಾದ ಪುಸ್ತಕಗಳ ಪಟ್ಟಿ ಪ್ರಕಟ
    Awards

    ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಆಯ್ಕೆಯಾದ ಪುಸ್ತಕಗಳ ಪಟ್ಟಿ ಪ್ರಕಟ

    February 15, 2025No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು 2023ರ ಜನವರಿಯಿಂದ ಡಿಸಂಬರ್ ಅಂತ್ಯದವರೆಗೂ ಪ್ರಕಟವಾದ ಕೃತಿಗಳನ್ನು ಒಟ್ಟು 52 ದತ್ತಿಗಳ 56 ಪ್ರಶಸ್ತಿಗಳಿಗೆ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಿತ್ತು. ಇದರಲ್ಲಿ ವಸುದೇವ ಭೂಪಾಲಂ ದತ್ತಿಯಲ್ಲಿ ನಾಲ್ಕು ಪುಸ್ತಕಗಳಿಗೂ ಮತ್ತು ರತ್ನಾಕರವರ್ಣಿ-ಮುದ್ದಣ ಅನಾಮಿಕ ದತ್ತಿಯಲ್ಲಿ ಎರಡು ಪುಸ್ತಕಗಳಿಗೂ ಬಹುಮಾನ ನೀಡಲಾಗುತ್ತದೆ. ಇದಕ್ಕೆ ರಾಜ್ಯ, ದೇಶ ಮತ್ತು ವಿದೇಶಗಳಿಂದಲೂ ನಾಲ್ಕು ಸಾವಿರ ಕೃತಿಗಳು ಬಂದಿದ್ದು ಅವುಗಳಲ್ಲಿ ಹನ್ನೆರಡು ಜನ ಪರಿಣಿತರ ಸಮಿತಿ ಪ್ರಾಥಮಿಕವಾಗಿ ಆಯ್ಕೆ ಮಾಡಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದ ಸಮಿತಿ ಪಾರದರ್ಶಕವಾಗಿ ಕೆಳಕಂಡ ಅಂತಿಮ ಪಟ್ಟಿಯನ್ನು ಆಯ್ಕೆ ಮಾಡಿದ್ದು, ಶೀಘ್ರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಈ ಪುಸ್ತಕ ದತ್ತಿ ಪ್ರಶಸ್ತಿಗಳಿಂದ ‘ಪುಸ್ತಕ ಸಂಸ್ಕೃತಿ ನಮ್ಮಲ್ಲಿ ಇನ್ನಷ್ಟು ಬೆಳೆಯಲಿದೆ ಎಂದು ಆಶಿಸಿರುವ ಅವರು ಯುವಜನರು ಪುಸ್ತಕಗಳನ್ನು ಪ್ರಕಟಿಸಲು ಇದು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದಿದ್ದಾರೆ. ಬರಹಗಾರರ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕನ್ನಡಾಭಿಮಾನಿಗಳು ಇನ್ನಷ್ಟು ‘ಪುಸ್ತಕ ದತ್ತಿ’ಗಳನ್ನು ಸ್ಥಾಪಿಸಲು ನಾಡೋಜ ಡಾ. ಮಹೇಶ ಜೋಶಿಯವರು ಕೋರಿದ್ದಾರೆ. ಒಂದು ಲಕ್ಷ ರೂಪಾಯಿಗಳಿಗೆ ಕಡಿಮೆ ಇಲ್ಲದಂತೆ ಪರಿಷತ್ತಿನಲ್ಲಿ ದತ್ತಿ ಇಟ್ಟು ಅದರ ಬಡ್ಡಿಯಿಂದ ಪುಸ್ತಕ ಬಹುಮಾನವನ್ನು ಆಸಕ್ತರು ನೀಡಬಹುದಾಗಿದೆ. ಈ ಕುರಿತ ವಿವರಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಿಂದ ಪಡೆಯಬಹುದು.

    ಕನ್ನಡ ಸಾಹಿತ್ಯ ಪರಿಷತ್ತಿನ 2023ನೆಯ ಸಾಲಿನ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಕೃತಿಗಳು ಮತ್ತು ಆ ಕೃತಿಗಳ ಲೇಖಕರು :
    01) ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ – ‘ಕರ್ನಾಟಕ ಜಲವಿಜ್ಞಾನ ತಂತ್ರಜ್ಞಾನ’ – ಡಾ. ಹರಿಹರ ಶ್ರೀನಿವಾಸರಾವ್, ಬೆಂಗಳೂರು
    02) ಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ – ‘ಗತಾನುಶೀಲನ’ – ಡಾ. ಅಮರೇಶ ಯತಗಲ್, ವಿಜಯನಗರ ಜಿಲ್ಲೆ
    03) ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ `ಅನುವಾದ ಸಾಹಿತ್ಯಕ್ಕಾಗಿ’ : ಅನುವಾದ ಸಾಹಿತ್ಯ ಕೃತಿಗೆ – ‘ಅಂಬೇಡ್ಕರ್ ಜಗತ್ತು’ – ವಿಕಾಸ್ ಆರ್. ಮೌರ್ಯರ
    04) ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ ದತ್ತಿ : ಜೈನ ಸಾಹಿತ್ಯ ಧರ್ಮಕ್ಕೆ ಸಂಬಂಧಪಟ್ಟ ಕೃತಿಗೆ – ‘ಕಂಬದಹಳ್ಳಿ ಕಂಬಾಪುರಿಯ ಪಂಚಕೂಟ ಬಸದಿ’ – ಡಾ. ಎಸ್. ಗುರುಮೂರ್ತಿ, ಬೆಂಗಳೂರು
    05) ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ – ‘ಸೀತಕಲ್ಲು ಬಸದಿ’ – ರತ್ನಾಕರ್ ಪಿ., ಬೆಂಗಳೂರು
    06) ವಸುದೇವ ಭೂಪಾಲಂ ದತ್ತಿ :
    2023ರಲ್ಲಿ ಪ್ರಕಟವಾದ ಅತ್ಯುತ್ತಮ ಕಾದಂಬರಿ ಕೃತಿಗೆ – ಕಾದಂಬರಿ : ‘ಅಪರ್ಣಾ’ – ಮಧುಮಾಲ ಬಿ. ಲಿಗಾಡೆ, ಸೊಲ್ಲಾಪುರ
    2023ರಲ್ಲಿ ಪ್ರಕಟವಾದ ಸಣ್ಣಕಥಾ ಸಂಕಲನಗಳು – ಸಣ್ಣಕಥೆ : ‘ಬೆಳಕು ಹರಿವ ಮುನ್ನ’ – ಟಿ.ಎಸ್. ಶ್ರವಣ ಕುಮಾರಿ, ಶಿವಮೊಗ್ಗ
    2023ರಲ್ಲಿ ಪ್ರಕಟವಾದ ಮಕ್ಕಳ ಸಾಹಿತ್ಯ ಕೃತಿಗೆ – ಮಕ್ಕಳ ಸಾಹಿತ್ಯ : ‘ನಲುಗದಿರಲಿ ಪರಿಸರ’ – ಮೌಲಾಲಿ ಕೆ. ಆಲಗೂರ, ಬೆಂಗಳೂರು
    2023ರಲ್ಲಿ ಪ್ರಕಟವಾದ ವೈಚಾರಿಕ ಲೇಖನಗಳ ಕೃತಿಗೆ – ವೈಚಾರಿಕ ಲೇಖನಗಳು : ‘ಬೆತ್ತಲೆಯ ಬದುಕಿಗಾಗಿ ಕತ್ತಲೆ ಕಾದಾಟ’ – ಶಶಿಧರ ಉಬ್ಬಳಗುಂಡಿ, ವಿಜಯನಗರ
    07) ದಿ. ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ – ‘ನೆನಪಿಸಿಕೊಂಡ ವಿನೋದ ಪ್ರಸಂಗಗಳು’ – ಬುಕ್ಕಾಂಬುಧಿ ಕೃಷ್ಣಮೂರ್ತಿ, ಬೆಂಗಳೂರು
    08) ದಿ. ಡಾ. ಎ.ಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ – ‘ಶಿಕ್ಷಕ-ಅರಿವಿನ ಅಕ್ಷಯಪಾತ್ರೆ’ – ಶ್ರೀಕಾಂತ ಹುಲಮನಿ, ಹಾವೇರಿ
    09) ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ: ಕಾದಂಬರಿ ಕೃತಿಗೆ – ‘ನೀಲಿನಕ್ಷೆ’ – ಅಮಿತಾ ಭಾಗವತ್, ಮಹಾರಾಷ್ಟ್ರ
    10) ಶ್ರೀಮತಿ ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ : ಕಥೆ – ‘ಆಯಾಮ’ – ಶ್ವೇತಾ ನರಗುಂದ, ಬೆಳಗಾವಿ
    11) ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ : ಕಥಾ ಸಂಕಲನ ಪ್ರಕಾರದ ಪ್ರಕಾಶನ ಸಂಸ್ಥೆಗೆ – ‘ಚೋದ್ಯ’ – ಪ್ರಕಾಶನ ಸಂಸ್ಥೆ : ಅಮೂಲ್ಯ ಪುಸ್ತಕ ಪ್ರಕಾಶನ, ಬೆಂಗಳೂರು
    12) ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿ (ಎಲ್. ಬಸವರಾಜು ದತ್ತಿ) : ಉತ್ತಮ ದಲಿತ ಸಾಹಿತ್ಯ ಕೃತಿಗೆ –‘ಟ್ರಂಕು ತಟ್ಟೆ’ – ಶ್ರೀ ಗುರುಪ್ರಸಾದ್ ಕಂಟಲಗೆರೆ, ತುಮಕೂರು
    13) ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ : ಶ್ರೇಷ್ಠ ಕೃತಿಗೆ ‘ಅಂತರಂಗ’ – ಡಾ. ಹಾ.ಮ. ನಾಗಾರ್ಜುನ, ಶಿವಮೊಗ್ಗ
    14) ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ : ಕಾದಂಬರಿಗೆ – ‘ಸೂಫಿ ಚರಿತ್ರೆ-ಚಿಂತನೆ’ – ಪ್ರೊ. ಸಿ. ಚಂದ್ರಪ್ಪ, ಬೆಂಗಳೂರು
    15) ಶ್ರೀಮತಿ ಗೌರುಭಟ್ ದತ್ತಿ ಪ್ರಶಸ್ತಿ : ಮಹಿಳೆಯರ ಲೇಖನಗಳಿಗೆ – ‘ಅವಳ ಪಥ’ – ಡಾ. ಚೇತನಾ ಹೆಗಡೆ, ಬೆಂಗಳೂರು
    16) ಶ್ರೀಮತಿ ಗಂಗಮ್ಮ ಶ್ರೀ ಟಿ. ಶಿವಣ್ಣ ದತ್ತಿ : ‘ಮಂಗಳವಾದ್ಯ’ – ಡಾ. ಎಂ.ಎಸ್. ಮುತ್ತುರಾಜ್, ಬೆಂಗಳೂರು
    17) ಡಾ. ಹಾ.ಮಾ. ನಾಯಕ ಸ್ಮಾರಕ ದತ್ತಿ ಪ್ರಶಸ್ತಿ – ‘ನಿಮ್ಮೊಡನಿದ್ದೂ’ – ಡಾ. ರಿಯಾಜ್ ಪಾಷ, ಬೆಂಗಳೂರು
    18) ಡಾ. ವೀಣಾ ಶಾಂತೇಶ್ವರ ದತ್ತಿ : ಕಥಾ ಸಂಕಲನಕ್ಕೆ – ‘ಪರಿವರ್ತನೆ’ – ನೂರ್ ಜಹಾನ್, ಹೊಸಪೇಟೆ
    19) ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿ – ‘ಮೂರನೇ ಕಾಲು’ – ಸರಸ್ವತಿ ರಾ. ಭೋಸಲೆ, ಧಾರವಾಡ
    20) ಪಳಕಳ ಸೀತಾರಾಮಭಟ್ಟ ದತ್ತಿ – ‘ಚಿಲಿಪಿಲಿ ಕನ್ನಡ ಕಲಿ’ – ಶ್ರೀಮತಿ ಸವಿತಾ ರವಿಶಂಕರ, ಬೆಂಗಳೂರು
    21) ಶ್ರೀಮತಿ ಜಯಲಕ್ಷ್ಮೀ ಮತ್ತು ಶ್ರೀ ಬಾಪು ರಾಮಣ್ಣ ದತ್ತಿ ಪ್ರಶಸ್ತಿ : ಸಣ್ಣ ಕಥಾ ಸಂಕಲನಕ್ಕೆ – ‘ಬೆನ್ನೇರಿದ ಬಯಲು’ – ಶ್ರೀ ಶಂಕರ ಸಿಹಿಮೊಗ್ಗೆ, ಶಿವಮೊಗ್ಗ
    22) ದಿ. ಗೌರಮ್ಮ ಹಾರ್ನತಹಳ್ಳಿ ಕೆ. ಮಂಜಪ್ಪ ದತ್ತಿ : ಲೇಖಕಿಯರ ಕೃತಿಗೆ ‘ಲೋಕಾಮೃತ’ – ಜಯಶ್ರೀ ಭ. ಭಂಡಾರಿ, ಬಾಗಲಕೋಟೆ
    23) ಶ್ರೀಮತಿ ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ : ಪ್ರಾಚೀನ ಸಂಪಾದಿತ ಕೃತಿಗೆ – ‘ಮೂರು ಮಹಾ ಶಾಸನಗಳು’ – ಡಾ. ತಾ.ನಂ. ಕುಮಾರಸ್ವಾಮಿ, ತುಮಕೂರು
    24) ಜಿ.ಆರ್. ರೇವಯ್ಯ ದತ್ತಿ : ದೀನ ದಲಿತರ ಮತ್ತು ಶೋಷಿತ ವರ್ಗಗಳ ರಕ್ಷಣೆಗೆ ಶ್ರಮಿಸುವ ವ್ಯಕ್ತಿಗಳ ಬಗ್ಗೆ ಸಾಹಿತ್ಯ ಕೃತಿಗೆ ‘ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್’ – ಅರವಿಂದ ಚೊಕ್ಕಾಡಿ, ದಕ್ಷಿಣ ಕನ್ನಡ
    25) ಡಾ. ಆರ್.ಜೆ. ಗಲಗಲಿ ದತ್ತಿ : ಬೆಳಗಾವಿ ಜಿಲ್ಲೆಯ ಬರಹಗಾರರ ಉತ್ತಮ ಕವನ ಸಂಕಲನಕ್ಕೆ – ‘ಹೂವು ಉದುರುವ ಸದ್ದು’ – ಡಾ. ಮಲ್ಲಿಕಾರ್ಜುನ ಛಬ್ಬಿ, ಬೆಳಗಾವಿ
    26) ದಿ. ಕಾಕೋಳು ಸರೋಜಮ್ಮ ದತ್ತಿ : ನಾಟಕ ಪ್ರಕಾರಕ್ಕೆ – ‘ಜನಮಿತ್ರ ಅರಸು’ – ಡಿ.ಎಸ್. ಚೌಗಲೆ, ಬೆಳಗಾವಿ
    27) ನಾ.ಕು. ಗಣೇಶ್ ದತ್ತಿ : ಪ್ರಥಮ ಕವನ ಸಂಕಲನಕ್ಕೆ ‘ತೇಲಿ ಬಂದಿದೆ ದೋಣಿ’ – ಎಲ್.ಪಿ. ಕುಮಾರ್, ಚಿಕ್ಕಬಳ್ಳಾಪುರ
    28) ಶ್ರೀಮತಿ ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿ : ಕವನ ಸಂಕಲನಕ್ಕೆ – ‘ಮೌನಧ್ವನಿ’ – ಹೊನ್ನಪ್ಪಯ್ಯ ಗುನಗಾ, ಉತ್ತರ ಕನ್ನಡ
    29) ಶ್ರೀ ಹೇಮರಾಜ್ ಜಿ.ಎನ್. ಕುಶಾಲನಗರ ದತ್ತಿ ಪ್ರಶಸ್ತಿ: ಸಣ್ಣ ಕಥಾ ಸಂಕಲನಕ್ಕೆ – ‘ಸೇವಂತಿ’ – ವಿಶ್ವಪ್ರದೀಪ್ ಹಾಗಲವಾಡಿ, ಬೆಂಗಳೂರು
    30) ಮಲ್ಲಿಕಾ ಪ್ರಶಸ್ತಿ ದತ್ತಿ : ಅತ್ಯುತ್ತಮ ಲೇಖಕಿಯರ ಕೃತಿಗೆ ‘ಜ್ಞಾನವಾರಿಧಿ’ – ಸೀತಾ ಎಸ್. ನಾರಾಯಣ ಹರಿಹರ, ದಾವಣಗೆರೆ
    31) ಅಂತರರಾಷ್ಟ್ರೀಯ ಮಹಿಳಾ ವರ್ಷದ ‘ಮಹಿಳಾ ದತ್ತಿ’: ಮಹಿಳೆಯರ ಅತ್ಯುತ್ತಮ ಕೃತಿಗೆ – ‘ಮೊರಸು ಒಕ್ಕಲಿಗರ ಪ್ರದಾನ ಸಂಪ್ರದಾಯಗಳು’ – ಶ್ರೀಮತಿ ಲೀಲ ವಾಸುದೇವ್, ಬೆಂಗಳೂರು
    32) ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ : ಲೇಖಕಿ ಒಬ್ಬರ ಮಹತ್ವದ ಕೃತಿಗೆ – ‘ಹುಡುಕಾಟದ ಮಿಡುಕು’ – ಡಾ. ಪುಷ್ಪ ಭಾರತಿ ಆರ್.ಎ., ಬೆಂಗಳೂರು
    33) ಲಿಂ. ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ : (ಮಹಿಳೆಯರನ್ನು ಕುರಿತು ಅಥವಾ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ರಚಿತವಾದ) ಕೃತಿಗೆ – ‘ನಾತಿಚರಾಮಿ’ – ವಿನುತ ಹಂಚಿನಮನಿ, ಧಾರವಾಡ
    34) ಶ್ರೀಮತಿ ನೀಲಗಂಗಾ ದತ್ತಿ : ಮಹಿಳೆಯರ ಪ್ರಬಂಧ, ಕವನ, ಕಾವ್ಯ ಮತ್ತು ಸಮಕಾಲೀನ ಮೌಲಿಕ ವಿಚಾರವುಳ್ಳ ಗ್ರಂಥಕ್ಕೆ – ‘ಚಿರಂತನ’ – ಎಸ್.ಎನ್. ಚಂದ್ರಕಲಾ, ಚಿಕ್ಕಮಗಳೂರು
    35) ಶ್ರೀಮತಿ ಶಾರದಾ ಆರ್. ರಾವ್ ದತ್ತಿ : ಉದಯೋನ್ಮುಖ ಮಹಿಳಾ ಬರಹಗಾರರ ಅತ್ಯುತ್ತಮ ಕೃತಿಗೆ – ‘ಸೂಜಿಮೊಗದ ಸುಂದರಿ’ – ಚಾಂದಿನಿ ಖಲೀದ್, ಚಿತ್ರದುರ್ಗ
    36) ದಿ. ಎಚ್. ಕರಿಯಣ್ಣ ದತ್ತಿ : ಲೇಖಕಿಯರಿಂದ ರಚಿತವಾಗಿರುವ ಮಕ್ಕಳ ಪುಸ್ತಕಕ್ಕೆ – ‘ನಾನು ಮಳೆಯಾದರೆ’ – ಕು. ಪ್ರಣತಿ ಆರ್. ಗಡಾದ, ಗದಗ
    37) ಡಾ. ಎಚ್. ನರಸಿಂಹಯ್ಯ ದತ್ತಿ : ‘ಮಸ್ಕಿಶ್ರೀ ಭ್ರಮರಾಂಬದೇವಿ ಸಹಿತ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದರ್ಶನ’ – ಪಂಪಯ್ಯಸ್ವಾಮಿ ಸಾಲಿಮಠ, ರಾಯಚೂರು
    38) ದಿವಂಗತ ಶ್ರೀಮತಿ ಕೆ.ವಿ. ರತ್ನಮ್ಮ ದತ್ತಿ : ಅತ್ಯುತ್ತಮ ಚೊಚ್ಚಲ ಪದ್ಯಕೃತಿಗೆ ‘ಪೋಸ್ಟ್ ಬಾಕ್ಸ್’ – ಚೇತನ್ ಗವಿಗೌಡ, ಬೆಂಗಳೂರು
    39) ರತ್ನಾಕರವರ್ಣಿ- ಮುದ್ದಣ – ಅನಾಮಿಕ ದತ್ತಿ :
    ಪದ್ಯಕೃತಿ : ‘ಮುಕ್ತಕ ಮಂದಾರ’ – ಶ್ರೀ ಟಿ.ವಿ. ಸುರೇಶಗುಪ್ತ, ಚಿತ್ರದುರ್ಗ
    ಗದ್ಯಕೃತಿ : ‘ಬಾಲ್ಯ ಕಾಣಿಸದ ಕನ್ನಡಿ’ – ಶಾಂತಿವಾಸು, ಬೆಂಗಳೂರು
    40) ಪಿ. ಶಾಂತಿಲಾಲ್ ದತ್ತಿ : ಜೈನ ಸಾಹಿತ್ಯಕ್ಕೆ – ‘ಪುಣ್ಯಗಾಥೆ’ – ಡಾ. ಹೆಚ್.ಡಿ. ಜಯಪದ್ಮಕುಮಾರ್, ಬೆಂಗಳೂರು
    41) ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ : ಜಾನಪದ ಸಾಹಿತ್ಯ ಕೃತಿಗೆ – ‘ತುಳುನಾಡಿನ ಜನಪದ ವಾದ್ಯಗಳು ಮತ್ತು ಪಾರಂಪರಿಕ ವೃತ್ತಿಗಳು’ – ಮುದ್ದು ಮೂಡುಬೆಳ್ಳೆ, ಮಂಗಳೂರು
    42) ಕುಂಬಾಸ ಪ್ರಶಸ್ತಿ ದತ್ತ್ತಿ : ಹಾಸ್ಯ ಸಾಹಿತ್ಯ ಕೃತಿಗೆ ‘ಪೆಣ್ಣೆತ್ತ ಖುಷಿಗೆ’ – ಗುಂಡುರಾವ್ ದೇಸಾಯಿ, ಕಲಬುರಗಿ
    43) ಪ್ರೊ. ಡಿ.ಸಿ. ಅನಂತಸ್ವಾಮಿ ದತ್ತಿ : ಕವನ ಸಂಕಲನಕ್ಕೆ – ‘ಸಂಜೆ ಐದರ ಸಂತೆ’ – ಶ್ರೀಮತಿ ಸೌಮ್ಯ ದಯಾನಂದ, ದಾವಣಗೆರೆ
    44) ‘ಸಿಸ’ ಸಂಗಮೇಶ ದತ್ತಿ : ಮಕ್ಕಳ ಸಾಹಿತ್ಯ ಕೃತಿಗೆ – ‘ಪಾಟಿ ಚೀಲ’ – ಪಿ.ಆರ್. ನಾಯ್ಕ, ಉತ್ತರ ಕನ್ನಡ
    45) ಶ್ರೀಮತಿ ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ : ರಾಯಚೂರು ಜಿಲ್ಲೆಯ ಬರಹಗಾರರ ಉತ್ತಮ ಸಾಹಿತ್ಯ ಕೃತಿಗೆ – ‘ಒಡಲು ಉರಿದಾಗ’ – ಶಿವಶಂಕರ ಕಡದಿನ್ನಿ, ರಾಯಚೂರು
    46) ಶ್ರೀ ಕೆ. ವಾಸುದೇವಾಚಾರ್ ದತ್ತಿ : ಸಣ್ಣಕಥಾ ಸಂಕಲನ ಕೃತಿಗೆ – ‘ಕೋಮಲಮ್ಮನ ಕಠೋರ ಕಾಳಜಿ ಮತ್ತು ಇತರ ಕಥೆಗಳು’ – ಮಹೇಶ್ ಭಾರದ್ವಾಜ್ ಹಂದ್ರಾಳು, ಹಾಸನ
    47) ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ : ಹರಿದಾಸ ಸಾಹಿತ್ಯ ಕುರಿತ ಕೃತಿಗೆ – ‘ಭಕ್ತಿ ಪುಷ್ಪಮಾಲಿಕಾ’ – ಶ್ರೀಮತಿ ಶೋಭಾ ರಾಜೇಂದ್ರ ಕಲ್ಕೂರ್, ಉಡುಪಿ
    48) ಜಿ.ಪಿ. ರಾಜರತ್ನಂ ಸಂಸ್ಮರಣ ದತ್ತಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರ ಅತ್ಯುತ್ತಮ ಮಕ್ಕಳ ಪುಸ್ತಕ ಕೃತಿಗೆ – ‘ಸತ್ಯದರ್ಶನ’ – ಸುಲೋಚನಾ ಪಿ.ಕೆ., ದಕ್ಷಿಣ ಕನ್ನಡ
    49) ಡಾ. ಜಿ. ಚಂದ್ರಮೌಳೇಶ್ವರ ದತ್ತಿ : 2023ರಲ್ಲಿ ಪ್ರಕಟವಾದ ಶ್ರೇಷ್ಠ ಕಾವ್ಯ ಪ್ರಕಾರ ಕೃತಿಗೆ – ‘ಈ ಕಣ್ಣುಗಳಿಗೆ ಸದಾ ನೀರಡಿಕೆ’ – ಸುಮಿತ ಮೇತ್ರಿ, ವಿಜಯಪುರ
    50) ಶ್ರೀಮತಿ ಬೋರಮ್ಮ ಗೋವಿಂದಪ್ಪ ದತ್ತಿ : 2023 ಶ್ರೇಷ್ಠ ಸಣ್ಣ ಕಥಾ ಸಂಕಲನ ಪ್ರಕಾರದ ಕೃತಿಗೆ – ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ – ಗೋವಿಂದರಾಜು ಎಂ. ಕಲ್ಲೂರು, ತುಮಕೂರು
    51) ಡಾ. ರಮಾನಂದ ಬನಾರಿ ಮತ್ತು ಶ್ರೀಮತಿ ಶಾಂತಕುಮಾರಿ ದತ್ತಿ : 2023ರಲ್ಲಿ ಪ್ರಕಟವಾದ ಕಾಸರಗೋಡು ಜಿಲ್ಲೆಗೆ ಕನ್ನಡ ಭಾಷೆಯ ಕಾವ್ಯ, ಕಥೆ, ಪ್ರಬಂಧ ಸಂಕಲನಕ್ಕೆ ‘ಅವಲಕ್ಕಿ – ಪವಲಕ್ಕಿ’ – ಅಕ್ಷತಾರಾಜ್ ಪೆರ್ಲ, ಕಾಸರಗೋಡು
    52) ಡಾ. ಹೆಚ್.ಎಸ್. ಮದನಕೇಸರಿ ಮತ್ತು ಶ್ರೀಮತಿ ಎಂ.ಪಿ. ಗುಣಮಾಲ ದತ್ತಿ : 2023ರಲ್ಲಿ ಪ್ರಕಟವಾದ ಜೈನಧರ್ಮದ ಲೇಖಕರು ಬರೆದ ಸೃಜನಾತ್ಮಕ ಕೃತಿಗಳ ಪ್ರಕಾರವಾದ ಕಾದಂಬರಿ, ಕಾವ್ಯ, ನಾಟಕ, ಪ್ರಬಂಧ ಮತ್ತು ಜನಪದಕ್ಕೆ – ‘ಸಾಗರದಿಂದ ಸಾಗರದಾಚೆಗೆ’ – ವೀಣಾ ಇಂದ್ರಕುಮಾರ್, ಬೆಂಗಳೂರು.

    award Literature
    Share. Facebook Twitter Pinterest LinkedIn Tumblr WhatsApp Email
    Previous Articleಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿಗೆ ‘ಸಾಕುತಂದೆ ರೂಮಿ’ ನಾಟಕ ಕೃತಿ ಆಯ್ಕೆ
    Next Article ಕೊಡಿಯಾಲ್ ಗುತ್ತು ಕಲೆ ಸಂಸ್ಕೃತಿ ಕೇಂದ್ರದಲ್ಲಿ ಖ್ಯಾತ ಕವಿ ಬಿ.ಆರ್.ಎಲ್. ಅವರೊಂದಿಗಿನ ಸಂವಾದ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.