ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಎಂ.ಸಿ.ಸಿ. ಬ್ಯಾಂಕ್ ಲಿ. ಇದರ ಪ್ರಾಯೋಜಕತ್ವದಲ್ಲಿ ʼಕೊಂಕಣಿ ಸಾಹಿತ್ಯ ಸ್ಪರ್ಧೆʼ ಹೆಸರಿನಲ್ಲಿ ಕೊಂಕಣಿ ಕಾದಂಬರಿ ಹಾಗೂ ಕಿರು ನಾಟಕ ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ದೇಶದ ವಿವಿಧ ಕಡೆ ವಾಸವಿರುವ, ಕರ್ನಾಟಕ ಮೂಲದ ಕೊಂಕಣಿ ಜನರಿಗಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕೊಂಕಣಿ ಕಾದಂಬರಿ ಸ್ಪರ್ಧೆಯಲ್ಲಿ 5 ಕಾದಂಬರಿಗಳು ಹಾಗೂ ಕೊಂಕಣಿ ಕಿರು ನಾಟಕ ಬರೆಯುವ ಸ್ಪರ್ಧೆಯಲ್ಲಿ 3 ಕಿರು ನಾಟಕಗಳು ಸ್ಪರ್ಧೆಗೆ ಬಂದಿದ್ದವು. ಕಿರು ನಾಟಕ ಸ್ಪರ್ಧೆಯಲ್ಲಿ ಒಂದು ನಾಟಕವು ಈಗಾಗಲೇ ಪ್ರದರ್ಶನಗೊಂಡಿದ್ದರಿಂದ ಆ ನಾಟಕವನ್ನು ತಡೆಹಿಡಿಯಲಾಗಿದೆ.
ಸ್ಪರ್ಧಾ ವಿಜೇತರಿಗೆ ದಿನಾಂಕ 19 ಅಕ್ಟೋಬರ್ 2025ರಂದು ಬೆಳಿಗ್ಗೆ ಗಂಟೆ 10–30ಕ್ಕೆ ಹಂಪನ್‌ಕಟ್ಟೆಯ ಎಂ.ಸಿ.ಸಿ. ಬ್ಯಾಂಕ್‌ನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಕೊಂಕಣಿ ಕಾದಂಬರಿ ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ ರೂ.25,000/-, ಸ್ಮರಣಿಕೆ ಹಾಗೂ ಪ್ರಮಾಣಪತ್ರ, ದ್ವಿತೀಯ ಬಹುಮಾನ ರೂ.15,000/- ಸ್ಮರಣಿಕೆ ಹಾಗೂ ಪ್ರಮಾಣಪತ್ರ, ತೃತೀಯ ಬಹುಮಾನ ರೂ.10,000/- ಸ್ಮರಣಿಕೆ ಹಾಗೂ ಪ್ರಮಾಣಪತ್ರವನ್ನು ಹಾಗೂ ಕೊಂಕಣಿ ಕಿರು ನಾಟಕ ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ ರೂ.5,000/-, ಸ್ಮರಣಿಕೆ ಹಾಗೂ ಪ್ರಮಾಣಪತ್ರ, ದ್ವಿತೀಯ ಬಹುಮಾನ ರೂ.3,000/-, ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಲಾಗುವುದು. ಇದೇ ಸಂದರ್ಭದಲ್ಲಿ ಕೊಂಕಣಿ ಭಾಷೆಯ ವಿವಿಧ ಸಾಹಿತ್ಯ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು.
ಸ್ಪರ್ಧೆಯ ಫಲಿತಾಂಶವು ಕೆಳಕಂಡಂತಿದೆ.
ಕೊಂಕಣಿ ಕಾದಂಬರಿ ಬರೆಯುವ ಸ್ಪರ್ಧೆ:
ಕ್ರ.ಸಂ |
|
ವಿಜೇತರ ಹೆಸರು |
ಕಾದಂಬರಿಯ ಹೆಸರು |
1. |
ಪ್ರಥಮ ಬಹುಮಾನ |
ಶ್ರೀ ರೋಶನ್ ಮೆಲ್ಕಿ ಸಿಕ್ವೇರಾ |
ʼಹೊ ಮ್ಹಜೊ ಅಪ್ರಾದ್ʼ |
2. |
ದ್ವಿತೀಯ ಬಹುಮಾನ |
ಶ್ರೀ ವಿನ್ಸೆಂಟ್ ಪಿಂಟೊ, ಆಂಜೆಲೊರ್ |
ʼಕುದ್ರ್ಯಾಚೊ ರಾಕ್ವಲಿʼ |
3. |
ತೃತೀಯ ಬಹುಮಾನ |
ಶ್ರೀ ಹೇಮಾಚಾರ್ಯ (ಸ್ಟೀಫನ್ ಮಸ್ಕರೇನ್ಹಸ್) |
ʼಆನಿ ಸಾಂಜ್ ಜಾಲಿ ʼ |
ಕೊಂಕಣಿ ನಾಟಕ ಬರೆಯುವ ಸ್ಪರ್ಧೆ:
ಕ್ರ.ಸಂ |
|
ವಿಜೇತರ ಹೆಸರು |
ನಾಟಕದ ಹೆಸರು |
1. |
ಪ್ರಥಮ ಬಹುಮಾನ |
ಶ್ರೀ ಹಿಲರಿ ಡಿಸಿಲ್ವ (ಪ್ರಸನ್ನ ನಿಡ್ಡೋಡಿ) |
ʼಪುಟ್‌ಲ್ಲೊ ಗ್ಲಾಸ್ʼ |
2. |
ದ್ವಿತೀಯ ಬಹುಮಾನ |
ಫಾ| ಅನಿಲ್ ಅವಿಲ್ಡ್ ಲೋಬೊ |
ʼಭರ್ವಶ್ಯಾಚೆಂ ಕೀರ್ಣ್ʼ |