Subscribe to Updates

    Get the latest creative news from FooBar about art, design and business.

    What's Hot

    ರಾಯಚೂರು ಕನ್ನಡ ಭವನದಲ್ಲಿ ‘ಮಹಿಳಾ ಪರಿಷತ್’ ಇದರ ಉದ್ಘಾಟನಾ ಕಾರ್ಯಕ್ರಮ | ಜನವರಿ 04

    January 1, 2026

    ಕರಾವಳಿ ಉತ್ಸವದಲ್ಲಿ ಕರ್ನಾಟಕ ಯಕ್ಷ ಭಾರತಿ ತಂಡದಿಂದ ತಾಳಮದ್ದಳೆ

    January 1, 2026

    ಜಾನಪದ ಅಕಾಡೆಮಿಯ ಜಾನಪದ ತಜ್ಞ, ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಕಟ

    January 1, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಜಾನಪದ ಅಕಾಡೆಮಿಯ ಜಾನಪದ ತಜ್ಞ, ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಕಟ
    Awards

    ಜಾನಪದ ಅಕಾಡೆಮಿಯ ಜಾನಪದ ತಜ್ಞ, ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಕಟ

    January 1, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕರ್ನಾಟಕ ಜಾನಪದ ಅಕಾಡೆಮಿಯು 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ತುಮಕೂರಿನ ಜಾನಪದ ವಿದ್ವಾಂಸರಾದ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಇವರು ‘ಡಾ. ಜೀ.ಶಂ.ಪ. ತಜ್ಞ ಪ್ರಶಸ್ತಿ’ ಹಾಗೂ ಕಲಬುರಗಿಯ ಡಾ. ಎಚ್.ಟಿ. ಪೋತೆ ಇವರು ‘ಡಾ. ಬಿ.ಎಸ್. ಗದ್ದಗಿಮಠ ತಜ್ಞ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ರಿಜಿಸ್ಟ್ರಾರ್ ಎನ್. ನಮ್ರತಾ ಇವರು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ‘ಜಾನಪದ ತಜ್ಞ ಪ್ರಶಸ್ತಿ’ಯು ತಲಾ ರೂ.50,000/- ನಗದು ಒಳಗೊಂಡಿದೆ. ‘ವಾರ್ಷಿಕ ಗೌರವ ಪ್ರಶಸ್ತಿ’ಗೆ 31 ಜಿಲ್ಲೆಗಳಿಂದ 30 ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಯು ತಲಾ ರೂ.25,000/- ನಗದು ಒಳಗೊಂಡಿದೆ. ಪ್ರಶಸ್ತಿ ಮೊತ್ತದ ಜತೆಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು.

    ಗೌರವ ಪ್ರಶಸ್ತಿಗೆ ಬೆಂಗಳೂರಿನ ಸಿದ್ದರಾಜು (ನೀಲಗಾರರ ಪದ ಮತ್ತು ತಂಬೂರಿ ಪದ), ಬೆಂಗಳೂರು ಗ್ರಾಮಾಂತರದ ಬಚ್ಚಮ್ಮ (ಸೋಬಾನೆ ಪದ, ತತ್ವಪದ, ಸಂಪ್ರದಾಯ ಪದ), ರಾಮನಗರದ ಬಿ. ಸಿದ್ದರಾಜಯ್ಯ (ಜಾನಪದ ಗಾಯನ), ಕೋಲಾರದ ಸೀತಮ್ಮ (ತತ್ವಪದ), ಚಿಕ್ಕಬಳ್ಳಾಪುರದ ಕೆ.ಎಂ. ನಾರಾಯಣ ಸ್ವಾಮಿ (ಕೀಲು ಕುದುರೆ), ತುಮಕೂರಿನ ರೇವಣ್ಣ (ಅಲಗು ಕುಣಿತ), ದಾವಣಗೆರೆಯ ಜಿ. ಪರಮೇಶ್ವರಪ್ಪ ಕತ್ತಿಗೆ (ತತ್ವಪದ), ಚಿತ್ರದುರ್ಗದ ಜಿ.ಎನ್. ವಿರೂಪಾಕ್ಷಪ್ಪ (ಜಾನಪದ ಸಂಗೀತ), ಶಿವಮೊಗ್ಗದ ಕೆ.ಎಸ್. ಲಿಂಗಪ್ಪ (ಅಂಟಿಕೆ ಪಂಟಿಕ), ಮೈಸೂರಿನ ಚನ್ನಾಜಮ್ಮ (ಸೋಬಾನೆ ಪದ ಮತ್ತು ಜಾನಪದ ಗಾಯನ) ಮಂಡ್ಯದ ಹೊನ್ನಯ್ಯ (ಕೋಲಾಟ), ಹಾಸನದ ಯೋಗೇಂದ್ರ ದುದ್ದ (ಗೀಗೀ ಪದ, ಲಾವಣಿ, ತತ್ವಪದ ಮತ್ತು ಭಜನೆ), ಚಿಕ್ಕಮಗಳೂರಿನ ಎಚ್.ಎಂ. ರವಿ (ವೀರಗಾಸೆ), ಚಾಮರಾಜ ನಗರದ ಬಸವರಾಜು ಯರಕನಗದ್ದೆ (ಗೊರುಕನ ನೃತ್ಯ), ದಕ್ಷಿಣ ಕನ್ನಡದ ಸುಮತಿ ಕೊರಗ (ಕೊರಗರ ಡೋಲು), ಉಡುಪಿಯ ಗುಲಾಬಿ ಗೌಡ್ತಿ (ನಾಟಿ ವೈದ್ಯ), ಕೊಡಗಿನ ಅಮ್ಮಣಿ (ಸೂಲಗಿತ್ತಿ, ಕುಡಿಯ ಜನಾಂಗದ ಹಾಡುಗಾರಿಕೆ), ಬೆಳಗಾವಿಯ ಭೀಮಪ್ಪ ಸಿದ್ಧಪ್ಪ ಮುತ್ನಾಳ್ (ಪುರವಂತಿಕೆ), ಧಾರವಾಡದ ಪ್ರಕಾಶ ಮಲ್ಲಿಗವಾಡ (ಜಾನಪದ ನೃತ್ಯ), ವಿಜಯಪುರದ ಜ್ಯೋತಿರ್ಲಿಂಗ ಹೊನಕಟ್ಟಿ (ಜಾನಪದ ಗಾಯನ), ಬಾಗಲಕೋಟೆಯ ಚಂದ್ರಲಿಂಗಪ್ಪ ನಿಂಗಪ್ಪ ಬಸರಕೋಡ (ಪುರವಂತಿಕೆ), ಉತ್ತರ ಕನ್ನಡದ ಗೌರಿ ನಾಗಪ್ಪ ನಾಯ್ಕ (ಸುಗ್ಗಿ ಹಾಡುಗಳು, ಜಾನಪದ ಕಥೆ, ಸಂಪ್ರದಾಯದ ಪದಗಳು), ಹಾವೇರಿಯ ಭಿಕ್ಷಾಪತಿ ಮೋತಿ (ಹಗಲುವೇಷ), ಗದಗದ ಕಾಶೀಮಸಾಬ ಹುಸೇನಸಾಬ (ಹೆಜ್ಜೆ ಮೇಳ), ಕಲಬುರಗಿಯ ಭಾಗಪ್ಪ (ತತ್ವಪದ), ಬೀದರ್‌ನ ಇಂದ್ರಮ್ಮ (ಮೋಹರಂ ಪದ), ರಾಯಚೂರಿನ ಯಂಕನಗೌಡ (ತತ್ವಪದ), ಕೊಪ್ಪಳದ ರಾಮಣ್ಣ (ಹಗಲು ವೇಷ), ವಿಜಯನಗರದ ಕಿಂಡ್ರಿ ಲಕ್ಷ್ಮೀಪತಿ (ಸುಡುಗಾಡು ಸಿದ್ದರು) ಹಾಗೂ ಯಾದಗಿರಿಯ ಹಣಮಂತ (ತತ್ವಪದ).

    ಜಾನಪದ ಅಕಾಡೆಮಿಯು 2024ನೇ ಸಾಲಿನ ಪುಸ್ತಕ ಬಹುಮಾನವನ್ನೂ ಘೋಷಿಸಿದ್ದು, ಬೆಂಗಳೂರಿನ ಡಾ. ವೀರಾಸಾಬಿಹಳ್ಳಿ ಶಿವಣ್ಣ ಇವರ ‘ಕಾಡುಗೊಲ್ಲರ ಸಂಸ್ಕೃತಿ ಮತ್ತು ಕಾವ್ಯಗಳು’ ವಿಚಾರ ವಿಮರ್ಶಾ ಕೃತಿ ಹಾಗೂ ಕೂಡ್ಲಗಿಯ ಡಾ. ಇಮಾಮ್ ಸಾಹೇಬ್ ಹಡಗಲಿ ಇವರ ‘ಕನಕಗಿರಿ ಸೀಮೆಯ ಸ್ಥಳನಾಮಗಳು’ ಸಂಶೋಧನಾ ಕೃತಿ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ. ಈ ಬಹುಮಾನವು ತಲಾ ರೂ.25,000/- ನಗದು ಒಳಗೊಂಡಿದೆ.

    award baikady folk Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಕದ್ರಿ ಪಾರ್ಕಿನಲ್ಲಿ ‘ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ’ | ಜನವರಿ 10
    Next Article ಕರಾವಳಿ ಉತ್ಸವದಲ್ಲಿ ಕರ್ನಾಟಕ ಯಕ್ಷ ಭಾರತಿ ತಂಡದಿಂದ ತಾಳಮದ್ದಳೆ
    roovari

    Add Comment Cancel Reply


    Related Posts

    ರಾಯಚೂರು ಕನ್ನಡ ಭವನದಲ್ಲಿ ‘ಮಹಿಳಾ ಪರಿಷತ್’ ಇದರ ಉದ್ಘಾಟನಾ ಕಾರ್ಯಕ್ರಮ | ಜನವರಿ 04

    January 1, 2026

    ಕರಾವಳಿ ಉತ್ಸವದಲ್ಲಿ ಕರ್ನಾಟಕ ಯಕ್ಷ ಭಾರತಿ ತಂಡದಿಂದ ತಾಳಮದ್ದಳೆ

    January 1, 2026

    ಮಂಗಳೂರಿನ ಕದ್ರಿ ಪಾರ್ಕಿನಲ್ಲಿ ‘ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ’ | ಜನವರಿ 10

    January 1, 2026

    ನೃತ್ಯ ವಿಮರ್ಶೆ | ನೃತ್ಯಲೋಕದೊಳಗೆ ಏಕತೆಯ ಮಂತ್ರ ಸಾರಿದ ‘ಐಕ್ಯಂ’

    January 1, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.