ಉಡುಪಿ : ರಂಗಭೂಮಿ ಉಡುಪಿ ಸಂಸ್ಥೆಯು ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ. ಮಲ್ಪೆ ಮಧ್ವರಾಜ್ ಸ್ಮಾರಕ ಹಮ್ಮಿಕೊಂಡಿದ್ದ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ
ಪ್ರಥಮ ಬಹುಮಾನವು ‘ಸುಮನಸಾ (ರಿ.) ಕೊಡವೂರು, ಉಡುಪಿ’ ತಂಡದ “ಈದಿ” ನಾಟಕಕ್ಕೆ ಲಭಿಸಿದೆ. ಈ ತಂಡವು ಪಿ.ವಿ.ಎಸ್. ಬೀಡೀಸ್ ಪ್ರಾಯೋಜಿತ ದಿ. ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ನಗದು ಬಹುಮಾನ ರೂ.35,000/- ಮತ್ತು ಸ್ಮರಣಿಕೆ ಹಾಗೂ ಡಾ. ಟಿ.ಎಮ್.ಎ. ಪೈ ಸ್ಮಾರಕ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿದೆ.
ದ್ವಿತೀಯ ಬಹುಮಾನವಾದ ದಿ. ಮಲ್ಪೆ ಮಧ್ವರಾಜ್ ಸ್ಮಾರಕ ಪ್ರಮೋದ್ ಮಧ್ವರಾಜ್ ರವರ ಕೊಡುಗೆಯಾದ ರೂ.25,000/- ನಗದು ಬಹುಮಾನ ಮತ್ತು ಸ್ಮರಣಿಕೆ ಹಾಗೂ ಡಾ. ಆರ್.ಪಿ. ಕೊಪ್ಪೀಕರ್ ಸ್ಮಾರಕವು ‘ಕ್ರಾನಿಕಲ್ಸ್ ಆಫ್ ಇಂಡಿಯಾ (ರಿ.) ಬೆಂಗಳೂರು’ ತಂಡದ ‘ಶಿವೋಹಂ’ ನಾಟಕಕ್ಕೆ ಲಭಿಸಿದೆ.
‘ಸ್ಪಂದನಾ (ರಿ.) ಸಾಗರ’ ತಂಡದ ‘ಪ್ರಾಣಪದ್ಮಿನಿ’ ನಾಟಕವು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದು, ದಿ. ಪಿ. ವಾಸುದೇವ ರಾವ್ ಅವರ ಸ್ಮರಣಾರ್ಥ ಶ್ರೀಮತಿ ಸೀತಾ ವಾಸುದೇವ ರಾವ್ ಅವರ ಕೊಡುಗೆಯಾದ ನಗದು ಬಹುಮಾನವಾದ ರೂ.15,000/- ಮತ್ತು ಸ್ಮರಣಿಕೆಗೆ ಪಾತ್ರವಾಗಿದೆ.
ಬಹುಮಾನಗಳ ವಿವರ :
ಶ್ರೇಷ್ಠ ನಿರ್ದೇಶನ :
ಪ್ರಥಮ : ರಂಗ ನಿರ್ದೇಶಕ ದಿ. ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ಹಾಗೂ ದಿ. ಜಿ.ಕೆ. ಐತಾಳ್ ಸ್ಮಾರಕ ರೂ.10,000 ನಗದು ಮತ್ತು ಡಾ. ಟಿ.ಎಂ.ಎ. ಪೈ ಸ್ಮಾರಕ ಪರ್ಯಾಯ ಫಲಕ –
ನಿರ್ದೇಶಕ – ವಿದ್ದು ಉಚ್ಚಿಲ್, ನಾಟಕ – ಈದಿ, ತಂಡ – ಸಮನಸಾ (ರಿ.) ಕೊಡವೂರು, ಉಡುಪಿ
ದ್ವಿತೀಯ : ದಿ. ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ಮತ್ತು ದಿ. ಜಿ.ಕೆ. ಐತಾಳ್ ಸ್ಮಾರಕ ನಗದು ಬಹುಮಾನ ರೂ.6,000 ಮತ್ತು ಸ್ಮರಣಿಕೆ –
ನಿರ್ದೇಶಕ – ಗಣೇಶ್ ಮಂದಾರ್ತಿ, ನಾಟಕ – ಶಿವೋಹಂ, ತಂಡ – ಕ್ರಾನಿಕಲ್ಸ್ ಆಫ್ ಇಂಡಿಯಾ (ರಿ.) ಬೆಂಗಳೂರು
ತೃತೀಯ : ದಿ. ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ಮತ್ತು ದಿ. ಜಿ.ಕೆ. ಐತಾಳ್ ಸ್ಮಾರಕ ನಗದು ಬಹುಮಾನ ರೂ.4,000 ಮತ್ತು ಸ್ಮರಣಿಕೆ –
ನಿರ್ದೇಶಕ – ಪುನೀತ್ ಎ.ಎಸ್., ನಾಟಕ – ಮಾಯಾದ್ವೀಪ, ತಂಡ – ನೆನಪು ಕಲ್ಚರಲ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು
ಶ್ರೇಷ್ಠ ನಟ :
ಪ್ರಥಮ : ದಿ. ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.3,000 ಮತ್ತು ಸ್ಮರಣಿಕೆ –
ಕ್ರಾನಿಕಲ್ಸ್ ಆಫ್ ಇಂಡಿಯಾ (ರಿ.) ಬೆಂಗಳೂರು ತಂಡದ ‘ಶಿವೋಹಂ’ ನಾಟಕದ ‘ಚನಿಯಣ್ಣ ಹಾಗೂ ದೈವ’ ಪಾತ್ರಧಾರಿ ಮಂಜು ಕಾಸರಗೋಡು
ದ್ವಿತೀಯ : ದಿ. ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.2,000 ಮತ್ತು ಸ್ಮರಣಿಕೆ –
ಸುಮನಸಾ (ರಿ.) ಕೊಡವೂರು ಉಡುಪಿ ತಂಡದ ‘ಈದಿ’ ನಾಟಕದ ‘ಮಹಮ್ಮದ್’ ಪಾತ್ರಧಾರಿ ನಾಗೇಶ್ ಪ್ರಸಾದ್.
ತೃತೀಯ : ದಿ. ಪಾಡಿಗಾರು ಶೀನ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ ರೂ.1,000 ಮತ್ತು ಸ್ಮರಣಿಕೆ –
ಸ್ಪಂದನಾ (ರಿ.) ಸಾಗರ ತಂಡದ ‘ಪ್ರಾಣಪದ್ಮಿನಿ’ ನಾಟಕದ ‘ಅಜ್ಮಲ್ ಖಾನ್’ ಪಾತ್ರಧಾರಿ ಕಾರ್ತಿಕ್ ಕೆ.
ಶ್ರೇಷ್ಠ ನಟಿ :
ಪ್ರಥಮ : ರಂಗನಟಿ ಡಾ. ಮಾಧವಿ ಎಸ್. ಭಂಡಾರಿ ಪ್ರಾಯೋಜಿತ ನಗದು ಬಹುಮಾನ ರೂ.3,000 ಮತ್ತು ಸ್ಮರಣಿಕೆ –
ಸುಮನಸಾ (ರಿ.) ಕೊಡವೂರು ಉಡುಪಿ ತಂಡದ ‘ಈದಿ’ ನಾಟಕದ ‘ರೋಶ್ನಿ’ ಪಾತ್ರಧಾರಿಣಿ ಧೃತಿ ಸಂತೋಷ್.
ದ್ವಿತೀಯ : ರಂಗನಟಿ ಡಾ. ಮಾಧವಿ ಎಸ್. ಭಂಡಾರಿ ಪ್ರಾಯೋಜಿತ ನಗದು ಬಹುಮಾನ ರೂ.2,000 ಮತ್ತು ಸ್ಮರಣಿಕೆ –
ನೇಪಥ್ಯ ರಂಗ ತಂಡ ಮೈಸೂರು ತಂಡದ ‘ಒಡಲಾಳ’ ನಾಟಕದ ‘ಸಾಕವ್ವ’ ಪಾತ್ರಧಾರಿಣಿ ಚೈತನ್ಯ ಶಿವನಂಜ.
ತೃತೀಯ : ಅಭಿನೇತ್ರಿ ಶ್ರೀಮತಿ ವಿನಯಾ ಪ್ರಸಾದ್ ಪ್ರಾಯೋಜಿತ ನಗದು ಬಹುಮಾನ ರೂ.1,000 ಮತ್ತು ಸ್ಮರಣಿಕೆ –
‘ಸ್ಪಂದನಾ (ರಿ.) ಸಾಗರ’ ತಂಡದ ‘ಪ್ರಾಣಪದ್ಮಿನಿ’ ನಾಟಕದ ‘ಪದ್ಮಿನಿ’ ಪಾತ್ರಧಾರಿಣಿ ಭೂಮಿ.
ಶ್ರೇಷ್ಠ ಸಂಗೀತ :
ಪ್ರಥಮ : ರಂಗನಟ ಎನ್. ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.3,000 ಮತ್ತು ಸ್ಮರಣಿಕೆ –
ಗಣೇಶ್ ಮಂದಾರ್ತಿ, ನಾಟಕ – ‘ಶಿವೋಹಂ’, ತಂಡ – ಕ್ರಾನಿಕಲ್ಸ್ ಆಫ್ ಇಂಡಿಯಾ (ರಿ .) ಬೆಂಗಳೂರು
ದ್ವಿತೀಯ : ರಂಗನಟ ಎನ್. ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.2,000 ಮತ್ತು ಸ್ಮರಣಿಕೆ :
ಭಾರ್ಗವ ಹೆಗ್ಗೋಡು & ಅರುಣ್ ಕುಮಾರ್, ನಾಟಕ – ‘ಪ್ರಾಣಪದ್ಮಿನಿ’, ತಂಡ – ಸ್ಪಂದನಾ (ರಿ.) ಸಾಗರ
ತೃತೀಯ : ರಂಗನಟ ಎನ್. ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.1,000 ಮತ್ತು ಸ್ಮರಣಿಕೆ :
ನಾಟಕ – ‘ಮಾಯಾದ್ವೀಪ’, ತಂಡ – ನೆನಪು ಕಲ್ಚರಲ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು
ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ :
ಪ್ರಥಮ : ದಿ. ರವೀಂದ್ರ ಬಿ. ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ.3,000 ಮತ್ತು ಸ್ಮರಣಿಕೆ –
ಮನೋಜ್ ಮೂಕಹಳ್ಳಿ, ಮಧುಸೂದನ್ , ಶಶಿಧರ್, ನಾಟಕ – ‘ಶಿವೋಹಂ’ ತಂಡ – ಕ್ರಾನಿಕಲ್ಸ್ ಆಫ್ ಇಂಡಿಯಾ (ರಿ.) ಬೆಂಗಳೂರು
ದ್ವಿತೀಯ : ದಿ. ರವೀಂದ್ರ ಬಿ. ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ.2,000 ಮತ್ತು ಸ್ಮರಣಿಕೆ –
ಹೆಚ್.ಕೆ. ದ್ವಾರಕಾನಾಥ್, ನಾಟಕ – ‘ಈದಿ’, ತಂಡ – ಸುಮನಸಾ (ರಿ.) ಕೊಡವೂರು ಉಡುಪಿ
ತೃತೀಯ : ದಿ. ರವೀಂದ್ರ ಬಿ. ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ.1,000 ಮತ್ತು ಸ್ಮರಣಿಕೆ –
ಪುನೀತ್, ಅರವಿಂದ್, ದಕ್ಷತ ರಂಗತಂಡ, ನಾಟಕ – ‘ಮಾಯಾದ್ವೀಪ’, ತಂಡ – ನೆನಪು ಕಲ್ಚರಲ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು
ಶ್ರೇಷ್ಠ ರಂಗ ಪ್ರಸಾಧನ :
ಪ್ರಥಮ : ದಿ. ಉಷಾ ಶಾಂತಾರಾಮ್, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ. ಟಿ. ಉಪೇಂದ್ರ ಪೈ ಸ್ಮಾರಕ ನಗದು ಬಹುಮಾನ ರೂ.3,000 ಮತ್ತು ಸ್ಮರಣಿಕೆ –
ರಾಮಕೃಷ್ಣ ಕನ್ನರ್ಪಾಡಿ ಹಾಗೂ ವಿಜಯ ಬೆಣಚ, ನಾಟಕ – ‘ಶಿವೋಹಂ’ ತಂಡ – ಕ್ರಾನಿಕಲ್ಸ್ ಆಫ್ ಇಂಡಿಯಾ (ರಿ.) ಬೆಂಗಳೂರು
ದ್ವಿತೀಯ : ರಂಗನಟ ದಿ. ಯು.ಎಂ. ಅಸ್ಲಾಂ ಸ್ಮಾರಕ ನಗದು ಬಹುಮಾನ ರೂ.2,000 ಮತ್ತು ಸ್ಮರಣಿಕೆ -.
ಪೃಥ್ವೀಶ್ ಶೆಟ್ಟಿಗಾರ್, ನಾಟಕ – ‘ದರ್ಶನಂ’, ತಂಡ – ರೇವಾ ರಂಗ ಅಧ್ಯಯನ ಕೇಂದ್ರ ಬೆಂಗಳೂರು
ತೃತೀಯ : ಸದಾನಂದ ಸುವರ್ಣ, ಮುಂಬಾಯಿ ಸ್ಮಾರಕ ನಗದು ಬಹುಮಾನ ರೂ.1,000 ಮತ್ತು ಸ್ಮರಣಿಕೆ –
ವಿಜಯ್ ಬೆಣಚ ಮತ್ತು ತಂಡ, ನಾಟಕ – ‘ಮಾಯಾದ್ವೀಪ’, ತಂಡ – ನೆನಪು ಕಲ್ಚರಲ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು
ಶ್ರೇಷ್ಠ ರಂಗ ಬೆಳಕು :
ಪ್ರಥಮ : ದಿ. ಆರ್.ಡಿ ಕಾಮತ್ ಸ್ಮಾರಕ ಶ್ರೀ ಅವಿನಾಶ್ ಕಾಮತ್ ಮುಂಬೈ ಪ್ರಾಯೋಜಿತ ನಗದು ಬಹುಮಾನ ರೂ.3,000 ಮತ್ತು ಸ್ಮರಣಿಕೆ –
ಜೀವನ್ ಕುಮಾರ್ ಹೆಗ್ಗೋಡು, ನಾಟಕ – ‘ಪ್ರಾಣಪದ್ಮಿನಿ’ ತಂಡ – ಸ್ಪಂದನಾ (ರಿ.) ಸಾಗರ
ದ್ವಿತೀಯ : ದಿ. ಆರ್.ಡಿ. ಕಾಮತ್ ಸ್ಮಾರಕ ಶ್ರೀ ಅವಿನಾಶ್ ಕಾಮತ್ ಮುಂಬೈ ಪ್ರಾಯೋಜಿತ ನಗದು ಬಹುಮಾನ ರೂ.2,000 ಮತ್ತು ಸ್ಮರಣಿಕೆ –
ರವಿಶಂಕರ್, ನಾಟಕ – ‘ಮಾಯಾದ್ವೀಪ’, ತಂಡ – ನೆನಪು ಕಲ್ಚರಲ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು
ತೃತೀಯ : (ಇಬ್ಬರಿಗೆ ಈ ಬಹುಮಾನ ಲಭಿಸಿದೆ) ದಿ. ಆರ್. ಡಿ ಕಾಮತ್ ಸ್ಮಾರಕ ಶ್ರೀ ಅವಿನಾಶ್ ಕಾಮತ್ ಮುಂಬೈ ಪ್ರಾಯೋಜಿತ ನಗದು ಬಹುಮಾನ ತಲಾ ರೂ.1,000 ಮತ್ತು ಸ್ಮರಣಿಕೆ –
1. ಪ್ರಥ್ವಿನ್ ಉಡುಪಿ, ನಾಟಕ – ‘ಶಿವೋಹಂ’ ತಂಡ – ಕ್ರಾನಿಕಲ್ಸ್ ಆಫ್ ಇಂಡಿಯಾ (ರಿ.) ಬೆಂಗಳೂರು
2. ಪ್ರವೀಣ್ ಕುಮಾರ್, ನಾಟಕ : ‘ಈದಿ’, ತಂಡ – ಸುಮನಸಾ (ರಿ.) ಕೊಡವೂರು, ಉಡುಪಿ
ಶ್ರೇಷ್ಠ ಹಾಸ್ಯ ನಟನೆ : ಶ್ರೀ ಮಂಡ್ಯ ರಮೇಶ್ ಪ್ರಾಯೋಜಿತ ನಗದು ಬಹುಮಾನ ರೂ.2,000 ಮತ್ತು ಸ್ಮರಣಿಕೆ –
ನಟಮಿತ್ರರು ಹವ್ಯಾಸಿ ಕಲಾ ಸಂಘ ತೀರ್ಥಹಳ್ಳಿ ತಂಡದ ‘ಆ ಊರು ಈ ಊರು’ ನಾಟಕದ ‘ಆಚಾರು’ ಪಾತ್ರಧಾರಿ ಸುಬ್ರಹ್ಮಣ್ಯ ಜಿ.ಆರ್.
ಮೆಚ್ಚುಗೆ ಬಹುಮಾನಗಳು :
ನೆನಪು ಕಲ್ಚರಲ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ತಂಡದ ‘ಮಾಯಾದ್ವೀಪ’ ನಾಟಕದ ‘ಪ್ರಾಸ್ಪೆರೋ’ ಪಾತ್ರಧಾರಿ ‘ಶ್ರೀಮಹಾದೇವ’
ನೆನಪು ಕಲ್ಚರಲ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ತಂಡದ ‘ಮಾಯಾದ್ವೀಪ’ ನಾಟಕದ ‘ಕ್ರಾಲಿಬ್ಯಾನ್’ ಪಾತ್ರಧಾರಿ ‘ಕಿಶೋರ್ ಕುಮಾರ್ ವಿ.’
ಸುಮನಸಾ (ರಿ.) ಕೊಡವೂರು ಉಡುಪಿ ತಂಡದ ‘ಈದಿ’ ನಾಟಕದ ‘ಪಂಡಿತ್ ನಾರಾಯಣ ಹಕ್ಸರ್’ ಪಾತ್ರಧಾರಿ ‘ಅಕ್ಷತ್’
‘ಸ್ಪಂದನಾ (ರಿ.) ಸಾಗರ ತಂಡದ ‘ಪ್ರಾಣಪದ್ಮಿನಿ’ ನಾಟಕದ ‘ರಾಮರಾಯ’ ಪಾತ್ರಧಾರಿ ‘ವಿವೇಕ್ ನಾಯಕ್ ಬಿ.ಎಂ.’
‘ನಮ್ದೆ ನಟನೆ ಬೆಂಗಳೂರು ತಂಡದ ‘ಮಗಳೆಂಬ ಮಲ್ಲಿಗೆ’ ನಾಟಕದ ‘ಅಜ್ಜ’ ಪಾತ್ರಧಾರಿ ಶ್ರೀನಾಥ್
46ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಅತ್ಯಂತ ಶಿಸ್ತಿನ ತಂಡವಾಗಿ ‘ಗೌತಮಬುದ್ಧ’ ನಾಟಕ ಪ್ರದರ್ಶನ ನೀಡಿದ ತುಮಕೂರಿನ ಗುಬ್ಬಿ ವೀರಣ್ಣ ಶಿಕ್ಷಣ ಕಲಾ ತಂಡವು ಆಯ್ಕೆಯಾಗಿದ್ದು, ಇವರಿಗೆ ಸಂಚಯ ಟ್ರಸ್ಟ್ ಬೆಂಗಳೂರು ಪ್ರಾಯೋಜಿತ ದಿ. ಜಿ.ಎಸ್. ರಾಮ ರಾವ್ ಸ್ಮಾರಕ ರೂ.5,000 ನಗದು ಹಾಗೂ ಫಲಕವು ಲಭಿಸಿದೆ.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಪಿ.ವಿ.ಎಸ್. ಗ್ರೂಪ್ಸ್ ಮಂಗಳೂರು, ಎಮ್.ಜಿ.ಎಮ್. ಕಾಲೇಜು ಉಡುಪಿ ಹಾಗೂ ಹಲವಾರು ಸಂಸ್ಥೆಗಳ, ಕಲಾ ಪೋಷಕರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ದಿನಾಂಕ 23 ನವೆಂಬರ್ 2025ರಿಂದ 04 ದಶಂಬರ 2025ರವರೆಗೆ 12 ದಿನಗಳ ಕಾಲ ಈ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯು ನಡೆಯಿತು. ಈ ಬಾರಿಯ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ಕೆ.ಜಿ. ಮಹಾಬಲೇಶ್ವರ, ಶ್ರೀ ನಟರಾಜ ಹೊನ್ನವಳ್ಳಿ, ಶ್ರೀ ರಾಮು ರಂಗಾಯಣ, ಶ್ರೀ ಗಣೇಶ್ ಕುಮಾರ್ ಎಲ್ಲೂರು, ಶ್ರೀಮತಿ ಶಶಿಕಲಾ ಜೋಶಿ ಸಹಕರಿಸಿದ್ದರು. ಈ ಸ್ಪರ್ಧೆಯನ್ನು ನಡೆಸಲು ಸ್ಥಳಾವಕಾಶ ನೀಡಿ ಸಹಕರಿಸಿದ ಎಂ.ಜಿ.ಎಂ. ಕಾಲೇಜಿನ ಆಡಳಿತ ಮಂಡಳಿಗೆ ಹಾಗೂ ಪ್ರೋತ್ಸಾಹಿಸಿದ ಎಲ್ಲಾ ದಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.
‘2026ರ ರಂಗಭೂಮಿ ಪ್ರಶಸ್ತಿ’ ಪ್ರಧಾನ ಸಮಾರಂಭ ಮತ್ತು 46ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು 2026ರ ಜನವರಿ ತಿಂಗಳ ಅಂತ್ಯದಲ್ಲಿ ಉಡುಪಿ ಎಂ.ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿರುವ “ರಂಗಭೂಮಿ ರಂಗೋತ್ಸವ” ದಲ್ಲಿ ನೀಡಲಾಗುವುದು. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ ಸುಮನಸಾ (ರಿ.) ಕೊಡವೂರು ಉಡುಪಿ ತಂಡದ ‘ಈದಿ’ ನಾಟಕದ ಮರು ಪ್ರದರ್ಶನ ಇರುವುದು ಎಂದು ‘ರಂಗಭೂಮಿ (ರಿ.) ಉಡುಪಿ’ಯು ತಿಳಿಸಿದೆ.
