ಮಂಗಳೂರು : ಮಂಗಳೂರಿನ ಧ್ಯಾನ ಸಂಗೀತ ಅಕಾಡೆಮಿಯ ವಾರ್ಷಿಕೋತ್ಸವದ ಅಂಗವಾಗಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ ಕಾರ್ಯಕ್ರಮವು 25 ಆಗಸ್ಟ್ 2024ರಂದು ಮಂಗಳೂರಿನ ಉರ್ವಸ್ಟೋರ್ ಇಲ್ಲಿನ ತುಳುಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಕಲಾವಿದರಾದ ಮುಂಬೈ ಇಲ್ಲಿನ ಪಂಡಿತ್ ರಾಮ್ ದೇಶಪಾಂಡೆ “ಶಾಸ್ತ್ರೀಯ ಸಂಗೀತದಂತಹ ದೈವಿಕ ವಿದ್ಯೆಗಳು ಕೇವಲ ಗುರುಗಳ ಆಶೀರ್ವಾದದಿಂದ ಸಿದ್ಧಿಸುತ್ತವೆ. ಕೇವಲ ಸ್ವಪ್ರಯತ್ನ ಸಾಲದು, ಸಂಗೀತ ಗುರುಗಳು ಹಾಕಿಕೊಟ್ಟ ಹಾದಿಯೇ ಸಾಧನೆಗೆ ಮತ್ತು ಶ್ರೇಯಸ್ಸಿಗೆ ಮಾರ್ಗ.” ಎಂದರು.
ಶ್ರೀಮತಿ ಲೋಲಾಕ್ಷಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಂ. ಆರ್. ಪಿ. ಎಲ್. ಹಾಗೂ ಒ. ಎನ್. ಜಿ. ಸಿ. ಇದರ ಜನರಲ್ ಮ್ಯಾನೇಜರ್ ಆಗಿರುವ ಮಂಜುನಾಥ ಎಚ್. ವಿ. ಹಾಗೂ ಸಂಗೀತ ಪೋಷಕರಾದ ಶ್ರೀಮತಿ ಶ್ರೇಯಾ ಕಿರಣ್ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸಭಾಕಾರ್ಯಕ್ರಮದ ಬಳಿಕ ಪಂಡಿತ್ ರಾಮ್ ದೇಶಪಾಂಡೆ, ಮೈಸೂರಿನ ವಿದುಷಿ ಶ್ರೀಮತಿ ದೇವೀ ಹಾಗೂ ಧ್ಯಾನ ಸಂಗೀತ ಕಲಾ ಅಕಾಡೆಮಿಯ ವಿದ್ಯಾರ್ಥಿಗಳಿಂದ ಹಿಂದೂಸ್ಥಾನಿ ಗಾಯನ, ಲಘು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಸಹ ವಾದನದಲ್ಲಿ ತಬಲ ವಾದಕರಾಗಿ ಮಯಾಂಕ್ ಬೇಡೇಕರ್ ಗೋವಾ ಹಾಗೂ ರಾಜೇಶ್ ಭಾಗವತ್, ಹರ‍್ಮೋನಿಯಂ ವಾದನದಲ್ಲಿ ಪ್ರಸಾದ್ ಕಾಮತ್ ಉಡುಪಿ ಹಾಗೂ ಹೇಮಂತ್ ಭಾಗವತ್ ಮೊದಲಾದವರು ಸಹಕರಿಸಿದರು. ಸಂಸ್ಥಾಪಕ ಕಾರ್ಯದರ್ಶಿ ಅಮಿತ್ ಕುಮಾರ್ ಬೆಂಗ್ರೆ, ಸದಸ್ಯರಾದ ಸುಶಾಂತ್ ಉಪಸ್ಥಿತರಿದ್ದರು. ಜಿಲ್ಲಾಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ವಿಜೇತರಾದ ಅಕಾಡೆಮಿಯ ವಿದ್ಯಾರ್ಥಿಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಯೂರ್ ಸ್ವಾಗತಿಸಿ, ದೇವಾನಂದ ನಾಯಕ್ ಪರಿಚಯಿಸಿ, ಪ್ರೇಮನಾಥ ಆಚಾರ್ಯ ನಿರ್ವಹಿಸಿ, ರವೀಂದ್ರ ನಾಯಕ್ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Comments are closed.