ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ 2024-2025ರ ವಾರ್ಷಿಕ ಮಹಾ ಸಭೆಯು ದಿನಾಂಕ 15 ಮಾರ್ಚ್ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಭಾಸ್ಕರ್ ಬಾರ್ಯರ ಅಧ್ಯಕ್ಷತೆ ನಡೆಯಿತು. ಭಾರತೀ ರೈಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಗೆ ಸತೀಶ್ ಇರ್ದೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆನಂದ ಸವಣೂರುರವರು ಹಾಗೂ ಕೋಶಾಧಿಕಾರಿ ದುಗ್ಗಪ್ಪ ನಡುಗಲ್ಲುರವರು ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಸಭೆ ಮುಂದಿಟ್ಟರು. ಉಪಾಧ್ಯಕ್ಷರುಗಳಾದ ಗುಂಡ್ಯಡ್ಕ ಈಶ್ವರ ಭಟ್ ಹಾಗೂ ಗುಡ್ಡಪ್ಪ ಬಲ್ಯರು ಸಂಘ ಚಟುವಟಿಕೆಗಳ ಕುರಿತು ಶ್ಲಾಘನೀಯ ಮಾತುಗಳನ್ನಾಡಿದರು. ಉಭಯ ಸಂಘದ ಅಧ್ಯಕ್ಷರುಗಳಾದ ಭಾಸ್ಕರ್ ಬಾರ್ಯ ಹಾಗು ಪ್ರೇಮಲತಾ ಟಿ. ರಾವ್ ತಮ್ಮ ಸಹಕಾರವನ್ನು ಮುಂದೆಯೂ ನೀಡಿ ಸಂಘದ ಬೆಳವಣಿಗೆಗೆ ಪಾತ್ರರಾಗೋಣ ಎಂದು ತಿಳಿಸಿದರು. ಮಹಿಳಾ ಯಕ್ಷಗಾನ ಸಂಘದ ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ ವಂದಿಸಿದರು. ಸಭೆಯಲ್ಲಿ ಸತೀಶ್ ಕುಮಾರ್ ಎಂಕಣ್ಣಮೂಲೆ, ವಸಂತ ಆಚಾರ್ಯ, ಶರಣ್ಯ ನೇತ್ರಕೆರೆ, ಕೆ. ಶ್ಯಾಮಲ, ವೇಣುಗೋಪಾಲ ಭಟ್ ಮಾಂಬಾಡಿ, ಗೌರವ ಕಾರ್ಯದರ್ಶಿ ಟಿ. ರಂಗನಾಥ ರಾವ್, ರಾಜ್ ಗೋಪಾಲ್ ಭಟ್ ಬನ್ನೂರು, ಮುರಳೀಧರ ಕಲ್ಲೂರಾಯ, ಲಕ್ಷ್ಮೀನಾರಾಯಣ ಭಟ್ ಬಟ್ಯ ಮೂಲೆ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ‘ಕರ್ಣಾರ್ಜುನ’ ತಾಳಮದ್ದಳೆ ನಡೆಯಿತು.