ಮಂಗಳೂರು :ಮಾಂಡ್ ಸೊಭಾಣ್ ಮತ್ತು ಸುಮೇಳ್ ನೀಡುವ ಅಂತರರಾಷ್ಟ್ರೀಯ ಸಂಗೀತ ದಿನದ ಸನ್ಮಾನವನ್ನು ಸಂಗೀತ ತರಬೇತುದಾರರಾದ ಮಂಗಳೂರಿನ ಕಾರ್ಮೆಲಿಟಾ ಆಲ್ವಾರಿಸ್ ಇವರಿಗೆ ಘೋಷಿಸಲಾಗಿದೆ. 05 ಆಕ್ಟೋಬರ್ 2025ರಂದು ಶಕ್ತಿನಗರದ ಕಲಾಂಗಣದಲ್ಲಿ ಸಂಜೆ 6.30 ಗಂಟೆಗೆ ನಡೆಯುವ ತಿಂಗಳ ವೇದಿಕೆ ಸರಣಿಯ 286 ನೇ ಕಾರ್ಯಕ್ರಮದಲ್ಲಿ ಈ ಸನ್ಮಾನ ನೆರವೇರಿಸಲಾಗುವುದು.
ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ, ಕೋಶಾಧಿಕಾರಿ ಸುನಿಲ್ ಮೊಂತೇರೊ, ಸುಮೇಳ್ ಸಂಯೋಜಕಿ ರೈನಾ ಸಿಕ್ವೇರಾ ಮತ್ತು ಖಜಾಂಚಿ ಕ್ಲಾರಾ ಪಿಂಟೊ ಉಪಸ್ಥಿತರಿದ್ದು ಸನ್ಮಾನ ನೆರವೇರಿಸುವರು.
ತನ್ನ 9 ನೇ ವರ್ಷದಲ್ಲಿ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಇವರು ಮರಿಯಾಣ್ ಪಿಂಟೊ, ವಿಮಲಾ ಲೋಬೊ, ಗ್ಲೇಡಿಸ್ ಸಿಲ್ವರ್ ಇತ್ಯಾದಿ ಸಂಗೀತ ಶಿಕ್ಷಕರಿಂದ ವಯೊಲಿನ್, ಕೀ ಬೋರ್ಡ್ ಕಲಿತರು. ಲಂಡನ್ನಿನ ಪ್ರತಿಷ್ಟಿತ ಟ್ರಿನಿಟಿ ಕಾಲೇಜಿನಿಂದ ಉತ್ತೀರ್ಣರಾಗಿ, ಕಲಿಸಲು ಆರಂಭಿಸಿದರು. ಅವರಲ್ಲಿ ಎಲ್ಲಾ ವಯೋಮಾನದ ವಿದ್ಯಾರ್ಥಿಗಳು ಸಂಗೀತ ಕಲಿತಿದ್ದಾರೆ. ಅವರಿಂದ ಶಿಕ್ಷಣ ಪಡೆದ ಹಲವಾರು ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದಾರೆ. ಸಂದೇಶ ಪ್ರತಿಷ್ಟಾನದ ಸ್ಥಾಪಕ ಕಾರ್ಯದರ್ಶಿಯಾಗಿ ಹಾಗೂ ರಜಾ ಶಿಬಿರಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಸನ್ಮಾನ ಕಾರ್ಯಕ್ರಮದ ನಂತರ ಸುಮೇಳ್ ತಂಡದಿಂದ ಕೊಂಕಣಿ ಹಾಗೂ ಬಹುಭಾಷಾ ಅಂತ್ಯಾಕ್ಷರಿ, ಕ್ಲಾರಾ ಡಿಕುನ್ಹ ಇವರಿಂದ ಕೊಳಲು ವಾದನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಅವಕಾಶ ಇದೆ.
2015 ರಲ್ಲಿ ಆಲ್ಟೊ, ಟೆನರ್, ಸುಪ್ರಾನೊ ಮತ್ತು ಬೇಸ್ ಸ್ವರಗಳಲ್ಲಿ ಗಾಯನವನ್ನು ಅಭ್ಯಾಸಿಸಲು ಮಾಂಡ್ ಸೊಭಾಣ್ ಗುರಿಕಾರ ದಿ. ಎರಿಕ್ ಒಝೇರಿಯೊರವರ ಮುಂದಾಳತ್ವದಲ್ಲಿ ಸುಮೇಳ್ ಅನ್ನು ಆರಂಭಿಸಲಾಗಿತ್ತು. ಆ ಸಾಲಿನಿಂದ ಕಲಾಂಗಣದಲ್ಲಿ ಅಂತರರಾಷ್ಟ್ರೀಯ ಸಂಗೀತ ದಿನಾಚರಣೆ ನಡೆಯುತ್ತಿದೆ. ಇದುವರೆಗೆ ವಿಮಲಾ ಲೋಬೊ, ಗ್ಲೇಡಿಸ್ ಸಿಲ್ವರ್, ಚರಣ್‌ದಾಸ್ ಮಲ್ಯ, ಉಸ್ತಾದ್ ರಫಿಕ್ ಖಾನ್, ರೊನಾಲ್ಡ್ ಮತ್ತು ಡೊನಾಲ್ಡ್ ಡಿಸಿಲ್ವಾ ಸೋದರರು, ವಂ. ಬೆನ್ ಬ್ರಿಟ್ಟೊ, ಒಸ್ಕರ್ ವೆಲ್ತಾ, ರೋಶನ್ ಮಾರ್ಟಿಸ್, ಸೈಮನ್ ಪಾಯ್ಸ್ ಮತ್ತು ನಿರಂಜನ್ ಸುನೀಲ್ ಕುಮಾರ್ ಈ ಗೌರವ ಪಡೆದಿದ್ದಾರೆ.
Subscribe to Updates
Get the latest creative news from FooBar about art, design and business.
ಅಂತರರಾಷ್ಟ್ರೀಯ ಸಂಗೀತ ದಿನ – 2025 ಮತ್ತು ಕಾರ್ಮೆಲಿಟಾರಿಗೆ ಗೌರವ ಘೋಷಣೆ | ಅಕ್ಟೋಬರ್ 2025
No Comments1 Min Read
Previous Articleಮಂಗಳಾದೇವಿಯಲ್ಲಿ ಬಹುಭಾಷಾ ಕವಿಗೋಷ್ಠಿ