ಮೂಲ್ಕಿ : ಕಾಳಿಕಾಂಬಾ ದೇವಸ್ಥಾನ ಕೊಲಕಾಡಿ, ಮೂಲ್ಕಿಯ ಅಂಗ ಸಂಸ್ಥೆ ಜೈ ಜಗದಂಬಾ ಯಕ್ಷಗಾನ ಮಂಡಳಿಯ ವಾರ್ಷಿಕೋತ್ಸವ ಹಾಗೂ ಸಮ್ಮಾನ ಸಮಾರಂಭವು ದಿನಾಂಕ 12 ಅಕ್ಟೋಬರ್ 2024ರಂದು ಕ್ಷೇತ್ರದ ಕೀರ್ತಿಶೇಷ ಪಂಜಿನಡ್ಕ ನಾರಾಯಣ ಕಾಮತ್ (ಭಾಗವತರು) ಸಭಾವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿಯ ಹಿರಿಯ ವಕೀಲರಾದ ಆತ್ರಾಡಿ ಪೃಥ್ವಿರಾಜ ಹೆಗ್ಡೆ ಮಂಡಳಿಯ ಕಾರ್ಯ ವೈಖರಿಯನ್ನು ಶ್ಲಾಘಿಸಿ “ಉತ್ತಮ ಸಮಾಜಕ್ಕೆ ಪ್ರೇರಣೆಯಾಗಲಿ.” ಎಂದು ಹಾರೈಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶೈಲೇಶ್ ಆಚಾರ್ಯ ಪನ್ವೇಲ್ ನವಿ ಮುಂಬಯಿ, ಕೆ. ಉಮೇಶ್ ಆಚಾರ್ಯ ಪೊಳಲಿ ಕೈರಂಗಳ, ರಾಮದಾಸ ಶೆಟ್ಟಿ ಬಾಳಿಕೆ ಮನೆ ಪುತ್ತೂರು ಭಾಗವಹಿಸಿದರು.
ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೆ. ಸುಧಾಕರ ಆಚಾರ್ಯ, ಮೊಕ್ತೇಸರ ಜಗದೀಶ ಆಚಾರ್ಯ ಮಾನಂಪಾಡಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಕೆ. ಸುಬ್ರಾಯ ಆಚಾರ್ಯ, ಕೂಡುವಳಿಕೆ ಮೊಕ್ತೇಸರರಾದ ಸದಾಶಿವ ಆಚಾರ್ಯ, ವಿಶ್ವಬ್ರಾಹ್ಮಣ ಯುವಕ ವೃಂದದ ಅಧ್ಯಕ್ಷರಾದ ಶರತ್ ಕುಮಾರ್, ಮಹಿಳಾ ಬಳಗದ ಅಧ್ಯಕ್ಷೆಯಾದ ಪ್ರೇಮಾ ಸುಧಾಕರ್ ಹಾಗೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ರಾಜೇಂದ್ರ ಆಚಾರ್ಯ ಮೈಾಲೊಟ್ಟು ಇವರನ್ನು ಸಮ್ಮಾನಿಸಲಾಯಿತು ಹಾಗೂ ಪಂಜಿನಡ್ಕ ನಾರಾಯಣ ಕಾಮತ್ ಇವರ ಮಗಳು ಪ್ರಭಾವತಿ ಅನಂತ್ ಪೈ ಇವರನ್ನು ಗೌರವಿಸಲಾಯಿತು.
ಮಂಡಳಿಯ ಅಧ್ಯಕ್ಷ ಪ್ರಶಾಂತ ಆಚಾರ್ಯ ಪಂಜಿನಡ್ಕ ಸ್ವಾಗತಿಸಿ, ಶರತ್ ಕುಮಾರ್ ಪ್ರಸ್ತಾವಿಕ ಮಾತುಗಳನ್ನಾಡಿ, ಕೆ. ಸತೀಶ ಆಚಾರ್ಯ ಮಂಗಳೂರು ಅಭಿನಂದನಾ ಭಾಷಣ ಮಾಡಿ, ರಾಧಾಕೃಷ್ಣ ಕೊಲಕಾಡಿ ಸಮ್ಮಾನ ಪತ್ರ ವಾಚಿಸಿ, ಶ್ರಾವ್ಯಾ ಕಿಲ್ಪಾಡಿ ಕಾರ್ಯಕ್ರಮ ನಿರೂಪಿಸಿ, ರೂಪೇಶ್ ಕೊಲಕಾಡಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ತಳಕಲ ಮೇಳದವರಿಂದ ‘ಸುಧನ್ವ ಮೋಕ್ಷ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.